ಕನ್ನಡಪ್ರಭ ವಾರ್ತೆ ಮೈಸೂರು
ಗೆಳೆಯರೇ ಸೇರಿ ಬರೆದಿರುವ ವಿವಿಧ ಪರಿಸರದ ಹಿನ್ನೆಲೆ, ಸಂಸ್ಕೃತಿಯ ಕಥಾ ಹಂದರವನ್ನು ಒಳಗೊಂಡ 12 ಕಥೆಗಳು ಮೊಳಕೆ ಎಂಬ ಕಥಾ ಸಂಕಲನದಲ್ಲಿದ್ದರೆ, ಗರಿಕೆ ಎಂಬ ಲೇಖನ ಸಂಕಲನದಲ್ಲಿ ಗೆಳೆಯರೇ ಬರೆದ ಅಂಕಣ ಬರಹಗಳ ಸಂಗ್ರಹವಿದೆ. ವಿಚಾರ ಪೂರ್ಣ ಲೇಖನಗಳು, ಪ್ರಗತಿಪರ ಚಿಂತನೆಯುಳ್ಳ ಲೇಖನ, ವಿಮರ್ಶೆ, ಸಂಶೋಧನಾ ಲೇಖನಗಳು ಇದರಲ್ಲಿದೆ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಮ್ಮ ಗುರುಗಳಾಗಿದ್ದ ಪ್ರೊ. ಕಾಳೇಗೌಡ ನಾಗವಾರ, ಪ್ರೊ.ಮಹಾದೇವ, ಪ್ರೊ. ಪಂಡಿತಾರಾಧ್ಯ, ಪ್ರೊ.ಎಂ.ಎನ್. ತಳವಾರ, ಪ್ರೊ.ಡಿ.ಕೆ. ರಾಜೇಂದ್ರ, ಪ್ರೊ. ರಾಗೌ ಅವರು ಕೃತಿಗಳನ್ನು ಬಿಡುಗಡೆಗೊಳಿಸುವರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅಧ್ಯಕ್ಷತೆ ವಹಿಸುವರು. ಪ್ರಕಾಶಕ ಸಂಸ್ಕೃತಿ ಸುಬ್ರಹ್ಮಣ್ಯಂ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು.ಯಾವುದು ಈ ಚಾವಡಿ ಗೆಳೆಯರ ಬಳಗ:
ಸುದ್ದಿಗೋಷ್ಠಿಯಲ್ಲಿ ಬಳಗದ ಮಹೇಶ್ ಅಗಸರಹಳ್ಳಿ, ಮದ್ದೂರು ದೊರೆಸ್ವಾಮಿ ಇದ್ದರು.
ಮೈಸೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಅಭಿರುಚಿ ಬಳಗ, ಆಸಕ್ತಿ ಪ್ರಕಾಶನ, ಎನ್.ವ್ಹಿ. ರಮೇಶ್ ಕಲಾ ಬಳಗ ಹಾಗೂ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ಮೇ 26ರ ಬೆಳಗ್ಗೆ 10.30ಕ್ಕೆ ಉಮಾ ಯಾನ ಎಂಬ ರಾಜ್ಯ ಮಟ್ಟದ ವಿಶೇಷ ಕಾರ್ಯಕ್ರಮ ಏರ್ಪಡಿಸಿದೆ.
ಮೇ 25ರ ಬೆಳಗ್ಗೆ 10.30 ರಿಂದ ನಡೆಯುವ ಈ ಕಾರ್ಯಕ್ರಮವನ್ನು ವಿಜಯನಗರ 1ನೇ ಹಂತದಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಆಯೋಜಿಸಿದೆ. ಕಾರ್ಯಕ್ರಮದ ನಂತರ ಭಾಗವಹಿಸಿದವರ ಅಕ್ಷರ ನಮನವನ್ನು ಆಸಕ್ತಿ ಪ್ರಕಾಶನದಿಂದ ಪುಸ್ತಕ ರೂಪದಲ್ಲಿ ಹೊರತರಲು ಯೋಜಿಸಿದೆ. ಆಸಕ್ತರು ಮೇ 20ರೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಮೊ. 98455 65238 ಕಳುಹಿಸಲು ಕೋರಲಾಗಿದೆ.