ಫೆಬ್ರುವರಿ 1,2 ರಂದು ಟೈಕಾನ್‌ ಉದ್ಯಮಶೀಲತಾ ಶೃಂಗಸಭೆ

KannadaprabhaNewsNetwork |  
Published : Jan 23, 2025, 12:47 AM IST

ಸಾರಾಂಶ

ಟೈ ಹುಬ್ಬಳ್ಳಿ ಕಳೆದ 10 ವರ್ಷಗಳಿಂದ ಪ್ರತಿವರ್ಷ ಟೈಕಾನ್ ಸಮಾವೇಶ ಆಯೋಜಿಸುತ್ತಿದೆ. ಈ ವರ್ಷ ಭವಿಷ್ಯಕ್ಕಾಗಿ ಸಿದ್ಧಗೊಂಡ ಉದ್ಯಮಿ ಎಂಬ ದ್ಯೇಯವಾಕ್ಯದಲ್ಲಿ ಸಮಾವೇಶ ನಡೆಯಲಿದ್ದು, ಪ್ರಪಂಚದ ಹಲವು ಉದ್ಯಮ ದಿಗ್ಗಜರು ಪಾಲ್ಗೊಳ್ಳಲಿದ್ದಾರೆ.

ಹುಬ್ಬಳ್ಳಿ:

ದಿ ಇಂಡಸ್ ಎಂಟರಪ್ರೈನರ್ಸ್ ಹುಬ್ಬಳ್ಳಿ ವತಿಯಿಂದ ಫೆ. 1, 2ರಂದು ಟೈಕಾನ್ ಉದ್ಯಮಶೀಲತಾ ಶೃಂಗಸಭೆಯ 11ನೇ ಆವೃತ್ತಿಯ ಸಮಾವೇಶವನ್ನು ಇಲ್ಲಿನ ಡೆನಿಸನ್ಸ್ ಹೋಟೆಲ್‌ನಲ್ಲಿ ಆಯೋಜಿಸಲಾಗಿದೆ ಎಂದು ಟೈ ಹುಬ್ಬಳ್ಳಿ ಅಧ್ಯಕ್ಷ ಡಾ. ವಿವೇಕ ಪಾಟೀಲ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟೈ ಹುಬ್ಬಳ್ಳಿ ಕಳೆದ 10 ವರ್ಷಗಳಿಂದ ಪ್ರತಿವರ್ಷ ಟೈಕಾನ್ ಸಮಾವೇಶ ಆಯೋಜಿಸುತ್ತಿದೆ. ಈ ವರ್ಷ ಭವಿಷ್ಯಕ್ಕಾಗಿ ಸಿದ್ಧಗೊಂಡ ಉದ್ಯಮಿ ಎಂಬ ದ್ಯೇಯವಾಕ್ಯದಲ್ಲಿ ಸಮಾವೇಶ ನಡೆಯಲಿದ್ದು, ಪ್ರಪಂಚದ ಹಲವು ಉದ್ಯಮ ದಿಗ್ಗಜರು ಪಾಲ್ಗೊಳ್ಳಲಿದ್ದಾರೆ ಎಂದರು.

ಫೆ. 1ರಂದು ಬೆಳಗ್ಗೆ 10ಕ್ಕೆ ನಡೆಯುವ ಟೈಕಾನ್ ಉದ್ಯಮಶೀಲತಾ ಶೃಂಗಸಭೆಯ 11ನೇ ಆವೃತ್ತಿ ಉದ್ಘಾಟನಾ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಉದ್ಘಾಟಿಸುವರು. ಐಟಿ-ಬಿಟಿ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಫೆ. 2ರಂದು ಸಂಜೆ 5 ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದರು.

ಎರಡು ದಿನದ ಸಮಾವೇಶದಲ್ಲಿ ಯುವ ಉದ್ಯಮಿಗಳಿಗೆ ವಿವಿಧ ಸ್ಪರ್ಧೆ ಆಯೋಜಿಸಲಾಗಿದೆ. ಜತೆಗೆ ಪ್ರಮುಖ ಭಾಷಣಕಾರರಾಗಿ ಚಾಯ್ ಪಾಯಿಂಟ್ ಸಿಇಒ ಅಮುಲಿಕ್ ಸಿಂಗ್, ಬೌನ್ವರ್ಟ್ ಸಂಸ್ಥೆಯ ಪಾಲುದಾರ ವಿ. ಬಾಲಾಜಿ ಭಟ್, ಮೆಡ್‌ಲೈನ್ ಅಕಾಡೆಮಿಕ್ಸ್ ಅಧ್ಯಕ್ಷ ಡಾ. ಕಾಮಿನಿ ರಾವ್, ಬೊಲ್ಲಂಟ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್‌ನ ಹೂಡಿಕೆದಾರ ರವಿ ಮಂಥ, ವಿಎ ಗ್ರೂಪ್ ಆರ್ಕಿಟೆಕ್ಟ್‌ ರವೀಂದ್ರ ಕುಮಾರ, ಚಾಂಪಿಯನ್ಸ್ ಗ್ರೂಪ್ ಸಿಇಒ ಶುಭಂಕರ್ ರಾವ್, ಟೈ ಗ್ಲೋಬಲ್ ಚೇರ್‌ಮನ್ ಮುರಳಿ ಬುಕ್ಕಪಟ್ಟಣಂ, ಆಲ್ಪಾ ಲಿಯೋ ಕ್ಯಾಪಿಟಲ್ ಸಂಸ್ಥಾಪಕ ಪ್ರಫುಲ್ ಕುಲಕರ್ಣಿ, ಕೋಚ್ ಶ್ವೇತಾ ದೇವರಾಜ್, ಲೇಖಕಿ ಶೆಫಾಲಿ ವೈದ್ಯ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ ಎಂದರು.

ಸಮಾವೇಶಕ್ಕೆ ಆಗಮಿಸುವ ವಿದ್ಯಾರ್ಥಿಗಳಿಗೆ ಹಾಗೂ ಉದ್ಯಮಿಗಳಿಗೆ ನೋಂದಣಿ ಶುಲ್ಕ ನಿಗಪಡಿಸಲಾಗಿದ್ದು, ಆಸಕ್ತರು ಹೆಸರು ನೋಂದಾಯಿಸಲು ಹಾಗೂ ಹೆಚ್ಚಿನ ಮಾಹಿತಿಗೆ 8431279679, 7090782693 ಸಂಪರ್ಕಿಸಬಹುದು ಎಂದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ನಾಗರಾಜ್ ಕೊಟಗಿ, ಪ್ರಶಾಂತ ಹೆಬಸೂರ, ದೀಪಾ, ದಾನೇಶ್ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!