ಯುಸಿಸಿಐಯಿಂದ ಮಾಹಿತಿ ಕಾರ್ಯಾಗಾರ ಸಂಪನ್ನ

KannadaprabhaNewsNetwork |  
Published : Nov 15, 2026, 02:30 AM IST
14ಯುಸಿಸಿಐ  | Kannada Prabha

ಸಾರಾಂಶ

ಉಡುಪಿ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಸ್ ವತಿಯಿಂದ ಮಾಹಿತಿ ಕಾರ್ಯಾಗಾರ ನ. 11ರಂದು ಮಣಿಪಾಲ್ ವ್ಯಾಲಿವ್ಯೂ ಕಂಟ್ರಿ ಕ್ಲಬ್‌ನಲ್ಲಿ ಜರುಗಿತು.

ಉಡುಪಿ : ಉಡುಪಿ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಸ್ ವತಿಯಿಂದ ಮಾಹಿತಿ ಕಾರ್ಯಾಗಾರ ನ. 11ರಂದು ಮಣಿಪಾಲ್ ವ್ಯಾಲಿವ್ಯೂ ಕಂಟ್ರಿ ಕ್ಲಬ್‌ನಲ್ಲಿ ಜರುಗಿತು.

ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಉಡುಪಿ ಲೆಕ್ಕ ಪರಿಶೋಧಕರ ಸಂಘದ ಮಾಜಿ ಅಧ್ಯಕ್ಷ ಸಿಎ ಗಣೇಶ್ ವೈ. ಅವರು ಕಂಪನಿಯ ವ್ಯಾಪಾರ ವಹಿವಾಟಿನಲ್ಲಿ ಲೆಕ್ಕ ಪರಿಶೋಧಕರ ಪಾತ್ರ, ಹಾಗೂ ಮಾಲಕರ, ಅಧಿಕಾರಿಗಳ ಜವಾಬ್ದಾರಿ, ಲೆಕ್ಕಪತ್ರಗಳ ಕಾರ್ಯನಿರ್ವಹಣೆ ಬಗ್ಗೆ ವಿಸ್ತಾರವಾಗಿ ತಿಳಿಹೇಳಿದರು.ಟ್ಯಾಲಿ ಸಾಪ್ಟ್‌ವೇರ್ ಬಗ್ಗೆ ಸಾಫ್ಟ್ ಲಿಂಕ್ ಸಂಸ್ಥೆಯ ಗಣೇಶ್ ತಲಪಾಡಿ ಹಾಗೂ ಫ್ರಾಂಕ್ಲಿನ್ ವಿಶೇಷ ಮಾಹಿತಿ ನೀಡಿದರು. ಯುಸಿಸಿಐಯ ಮಾಸಿಕ ಪತ್ರಿಕೆಯನ್ನು ಅಧ್ಯಕ್ಷ ನಟರಾಜ್ ಪ್ರಭು ಬಿಡುಗಡೆಗೊಳಿಸಿ, ಸದಸ್ಯರ ನಡುವಿನ ಒಗ್ಗಟ್ಟು, ಪರಸ್ಪರ ಸಹಕಾರ ಹಾಗೂ ಚೇಂಬರ್‌ನ ಮೂಲಕ ವ್ಯಾಪಾರಾವಕಾಶಗಳನ್ನು ಉತ್ತೇಜಿಸುವ ಕುರಿತು ವಿಚಾರ ವಿನಿಮಯ ನಡೆಸಿದರು.ವೇದಿಕೆಯಲ್ಲಿ ಯುಸಿಸಿಐ ಉಪಾಧ್ಯಕ್ಷ ಡಾ. ವಿಜಯೇಂದ್ರ ರಾವ್, ಗೌರವ ಕಾರ್ಯದರ್ಶಿ ಮೊಹಮ್ಮದ್ ಸಮೀರ್, ಖಜಾಂಚಿ ಕೆ. ವಿನೋದ್ ಪೈ ಹಾಗೂ ಪತ್ರಿಕಾ ಸಂಪಾದಕ ಡಾ. ವಿಲಾಸ್ ಪೈ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಜಂಟಿ ಕಾರ್ಯದರ್ಶಿಗಳಾದ ಅವಿನಾಶ್ ಪೂಜಾರಿ ಮತ್ತು ಅನೀಶ್ ಪೈ ನಿರ್ವಹಿಸಿದರು. ಯುಸಿಸಿಐ ನಿರ್ದೇಶಕರಾದ ನಾಗರಾಜ್ ಹೆಬ್ಬಾರ್, ಅತುಲ್ ಭಕ್ತ, ಶ್ರೀಪತಿ ಭಟ್ ಹಾಗೂ ಸಂತೋಷ್ ಶೆಟ್ಟಿ ಸಹಕರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಫಿಲ್ಟರ್‌ ಮಾಡದೇ ಕಲುಷಿತ ನೀರು ಪೂರೈಕೆ ?
ಚಳಿಗಾಲದ ಅಧಿವೇಶನಕ್ಕೆ ಹೆಸ್ಕಾಂ ಸಕಲ ಸಿದ್ಧತೆ