ಕರಾವಳಿ ದೇಶದ ಆರ್ಥಿಕತೆಯ ಎಂಜಿನ್ ಆಗಬಲ್ಲದು: ರೋಹಿತ್ ಭಟ್

KannadaprabhaNewsNetwork |  
Published : Nov 23, 2026, 03:00 AM IST
20ಯುಸಿಸಿಐ | Kannada Prabha

ಸಾರಾಂಶ

ಉಡುಪಿ ಛೇಂಬರ್ ಆಫ್ ಕಾಮರ್ಸ್ಸ್ ಆ್ಯಂಡ್ ಇಂಡಸ್ಟ್ರಿ (ಯುಸಿಸಿಐ) ವತಿಯಿಂದ ನಡೆದ ಯುಸಿಸಿಐ ಸ್ಟಾರ್ಟ್‌ಅಫ್ ಆ್ಯಂಡ್ ಇಂಟರ್‌ಪ್ರೆನರ್‌ಶಿಪ್‌

ಉಡುಪಿ: ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ಇಡೀ ಕರಾವಳಿ ಪ್ರದೇಶವು ಮುಂದಿನ ದಿನಗಳಲ್ಲಿ ದೇಶದ ಆರ್ಥಿಕತೆಯ ಬಲಿಷ್ಠ ಬೆಳವಣಿಗೆಯ ಎಂಜಿನ್ ಆಗಬಲ್ಲದು ಎಂದು ರೋಬೋಸಾಫ್ಟ್ ಕಂಪೆನಿಯ ಸ್ಥಾಪಕ ರೋಹಿತ್ ಭಟ್ ವಿಶ್ವಾಸ ವ್ಯಕ್ತಪಡಿಸಿದರು

ಅವರು ಉಡುಪಿ ಛೇಂಬರ್ ಆಫ್ ಕಾಮರ್ಸ್ಸ್ ಆ್ಯಂಡ್ ಇಂಡಸ್ಟ್ರಿ (ಯುಸಿಸಿಐ) ವತಿಯಿಂದ ನಡೆದ ಯುಸಿಸಿಐ ಸ್ಟಾರ್ಟ್‌ಅಫ್ ಆ್ಯಂಡ್ ಇಂಟರ್‌ಪ್ರೆನರ್‌ಶಿಪ್‌ 2026ನ್ನು ಉದ್ಘಾಟಿಸಿ ಮಾತನಾಡಿದರು.

ಕರಾವಳಿಯಲ್ಲಿ ಅತ್ಯುತ್ತಮ ಶೈಕ್ಷಣಿಕ ಸೌಲಭ್ಯ ಇದೆ. ಆದ್ದರಿಂದ ಸಾಕ್ಷರತೆಯ ಪ್ರಮಾಣವೂ ಉನ್ನತ ಮಟ್ಟದಲ್ಲಿದೆ. ಪ್ರತಿಭಾವಂತ ಯುವಜನರ ದೊಡ್ಡ ಸಮೂಹವೇ ನಮ್ಮಲ್ಲಿದೆ. ಆದರೇ ಈ ಮಾನವ ಸಂಪನ್ಮೂಲವನ್ನು ಕ್ರೋಢೀಕರಿಸಿ ಸಾಧನೆ ಮಾಡುವ ಉತ್ತಮ ವೇದಿಕೆಯನ್ನು ಕಲ್ಪಿಸಬೇಕಾಗಿದೆ ಎಂದವರು ತಿಳಿಸಿದರು.ಕ್ಲೌಡ್‌ ಸಂಪನ್ಮೂಲ: ಪ್ರಸ್ತುತ ಕಾಲಘಟ್ಟದಲ್ಲಿ ಆನ್‌ಲೈನ್ ಉದ್ಯಮ ನಡೆಸುವವರಿಗೆ ಕ್ಲೌಡ್ ತಂತ್ರಜ್ಞಾನ ಅಥವಾ ಚಾಟ್‌ಜಿಪಿಟಿ ಅತ್ಯುತ್ತಮ ಸಂಪನ್ಮೂಲವಾಗಿದೆ. ಅವುಗಳ ಮೂಲಕ ನೇರವಾಗಿ ಗ್ರಾಹಕರನ್ನು ತಲುಪಬಹುದಾಗಿದೆ ಎಂದವರು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯುಸಿಸಿಐ ಅಧ್ಯಕ್ಷ ನಟರಾಜ್ ಪ್ರಭು, ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ಟಾರ್ಟ್‌ಅಪ್‌ ಸಲಹೆಗಾರ ಡಾ. ಅನಂತಪದ್ಮನಾಭ ಆಚಾರ್ಯ, ಯುಸಿಸಿಐ ಉಪಾಧ್ಯಕ್ಷ ಡಾ. ವಿಜಯೇಂದ್ರ ವಸಂತ್ ರಾವ್, ಗೌರವ ಕಾರ್ಯದರ್ಶಿ ಸಮೀರ್ ಮೊಹಮ್ಮದ್, ಜತೆ ಕಾರ್ಯದರ್ಶಿ ಅನೀಶ್ ಪೈ, ಕೋಶಾಧಿಕಾರಿ ಕೆ.‌ ವಿನೋದ್ ಪೈ ಉಪಸ್ಥಿತರಿದ್ದರು.

ಕಾರ್ಯಕ್ರಮ ಸಂಯೋಜಕ ಅತುಲ್ ಭಕ್ತ, ಶ್ರುತಿ ಜಿ.‌ ಶೆಣೈ ಅವರು ಅತಿಥಿಗಳನ್ನು ಪರಿಚಯಿಸಿದರು. ಸಮೀರ್ ಮೊಹಮ್ಮದ್ ವಂದಿಸಿದರು. ಜತೆ ಕಾರ್ಯದರ್ಶಿ ಅವಿನಾಶ್ ಪೂಜಾರಿ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬರದಲ್ಲಿ ಆಸರೆಯಾದ ಕಳಸಕೊಪ್ಪ ಕೆರೆ
ಬೆಳಗಾವಿಯಲ್ಲಿ ಮಟಕಾ ದಂಧೆ ಮೇಲೆ ಪೊಲೀಸರ ಸರಣಿ ದಾಳಿ