126 ಹಾಡಿಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ

KannadaprabhaNewsNetwork |  
Published : May 21, 2026, 01:15 AM IST
55 | Kannada Prabha

ಸಾರಾಂಶ

ಆದಿವಾದಿಗಳಿಗೆ ಕೇವಲ ಆರು ತಿಂಗಳು ಪೌಷ್ಟಿಕ ಆಹಾರದ ಧಾನ್ಯಗಳನ್ನುನಿಒಡಲಾಗಿತ್ತಿತ್ತು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 12 ತಿಂಗಳುಗಳ ಕಾಲ ಪೌಷ್ಟಿಕಾಹಾರ ಧಾನ್ಯಗಳನ್ನು ನೀಡಲಾಗುತ್ತಿದೆ

ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ126 ಹಾಡಿಗಳಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗಿದೆ. ಕೆರೆ ಹಾಡಿಯಲ್ಲಿ 46 ಕುಟುಂಬಗಳಿಗೆ 21 ಹಕ್ಕುಪತ್ರ ಹಸ್ತಾಂತರಿಸಲಾಗಿದ್ದು, ಅವರಲ್ಲಿ 15 ಮಂದಿಗೆ ಮನೆ ನಿರ್ಮಾಣ ಮಾಡಿ ಕೊಡಲಾಗಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.ತಾಲೂಕಿನ ಉದ್ಬೂರು ಕೆರೆ ಹಾಡಿಯಲ್ಲಿ ಪ. ವರ್ಗಗಳ ಕಲ್ಯಾಣ ಇಲಾಖೆಯಿಂದ ಆದಿವಾಸಿಗಳಿಗೆ ನಿರ್ಮಿಸಲಾದ ರು. 75 ಲಕ್ಷ ವೆಚ್ಚದ 15 ಮನೆ ಹಸ್ತಾಂತರ ಹಾಗೂ ಸೆಸ್ಕ್ವತಿಯಿಂದ ಡಿ.ಬಿ. ಕುಪ್ಪೆ ಪಂಚಾಯಿತಿ ವ್ಯಾಪ್ತಿಯಲ್ಲಿ ರು. 4.5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಯುಜಿ ಕೇಬಲ್ ವಿದ್ಯುತ್ ಸಂಪರ್ಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಆದಿವಾದಿಗಳಿಗೆ ಕೇವಲ ಆರು ತಿಂಗಳು ಪೌಷ್ಟಿಕ ಆಹಾರದ ಧಾನ್ಯಗಳನ್ನುನಿಒಡಲಾಗಿತ್ತಿತ್ತು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 12 ತಿಂಗಳುಗಳ ಕಾಲ ಪೌಷ್ಟಿಕಾಹಾರ ಧಾನ್ಯಗಳನ್ನು ನೀಡಲಾಗುತ್ತಿದೆ ಎಂದರು.ಡಿ.ಬಿ. ಕುಪ್ಪೆ ಭಾಗದಲ್ಲಿ 50 ಕೋಟಿ ರು. ವೆಚ್ಚದ ಅಭಿವೃದ್ಧಿ ಕಾಮಗಾರಿಯನ್ನು ಮಾಡಲಾಗಿದೆ. ಕಾಡೊಳಗಿನ ರಸ್ತೆ ಅಭಿವೃದ್ಧಿ, ಕುಡಿಯುವ ನೀರಿನ ಯೋಜನೆ, ಶಾಲೆಗಳ ಅಭಿವೃದ್ಧಿ, ವಿದ್ಯುತ್ ಸಂಪರ್ಕ ಸೇರಿದಂತೆ ಪ್ರಮುಖ ಮೂಲಭೂತ ಸೌಲಭ್ಯಗಳಮ್ಮು ಕಲ್ಪಿಸಿಕೊಡಲಾಗಿದೆ ಎಂದು ತಿಳಿಸಿದರು.ಆದಿವಾಸಿಗಳ ಬೇಡಿಕೆಯಂತೆ ಹಕ್ಕುಪತ್ರದ ಆಧಾರದ ಮೇಲೆ ಕೃಷಿ ಇಲಾಖೆಯಿಂದ ಬಿತ್ತನೆ ಬೀಜ ನೀಡುವಂತೆ ಕೃಷಿ ಇಲಾಖೆಗೆ ಸೂಚಿಸಲಾಗಿದೆ. ಕುಡಿಯುವ ನೀರನ್ನು ಬಗೆಹರಿಸಲು ನೂತನ ನೀರಿನ ತೊಂಬೆ ನಿರ್ಮಾಣಕ್ಕೂ ಸಹ ಸೂಚಿಸಲಾಗಿದೆ, ಮುಂದಿನ ದಿನಗಳಲ್ಲಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ನೀಡಲಾಗುವುದು ಎಂದು ಆದಿವಾದಿಗಳಿಗೆ ಭರವಸೆ ನೀಡಿದರು.ಪ. ವರ್ಗಗಳ ಕಲ್ಯಾಣ ಇಲಾಖೆಯ ಕಲ್ಯಾಣಾಧಿಕಾರಿ ಮಹೇಶ್ ಮಾತನಾಡಿ, ಆದಿವಾದಿಗಳಿಗೆ ಕಳೆದ ಏಳು ವರ್ಷಗಳಲ್ಲಿ 1,800 ಮನೆಗಳನ್ನು ನೀಡಲಾಗಿದೆ. ಅನಿಲ್ ಚಿಕ್ಕಮಾದು ತಾಲೂಕಿಗೆ ಶಾಸಕರಾಗಿ ಬಂದಂದಿನಿಂದ ಇಲ್ಲಿಯವರೆಗೂ ಆಗಿರುವ ಸಾಧನೆ ಎಂದರು.ತಹಸೀಲ್ದಾರ್ ಶ್ರೀನಿವಾಸ್, ಎಸಿಎಫ್ ಮಧು, ಮೈಮುಲ್ ನಿರ್ದೇಶಕ ಈರೇಗೌಡ, ಮುಖಂಡರಾದ ಚಿಕ್ಕಣ್ಣ, ಮಂಜುನಾಥ್, ಪರಶಿವಮೂರ್ತಿ, ಸೋಮೇಶ್, ಬಾಲಯ್ಯ, ಲೋಹಿತ್, ಕಲೀಂ, ಮಹದೇವೇಗೌಡ, ರವಿ, ಟಿಎಚ್ಓ ರವಿಕುಮಾರ್, ಸಿಡಿಪಿಓ ದೀಪಾ, ಉಪ ತಹಸೀಲ್ದಾರ್ ಸಂಜೀವಕುಮಾರ್, ತಾಪಂ ಇಒ ಧರಣೇಶ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪ್ರಸಾದ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಶಶಿಕಲಾ, ಕಾರ್ಮಿಕ ಇಲಾಖೆಯ ಪರಮೇಶ್, ಆರ್ಎಫ್ಓ ಸಿದ್ದರಾಜು, ನಾಗರಾಜು, ಚಲುವೇಗೌಡ, ಮಹೇಶ್, ಮಲ್ಲೇಶ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತುಮಕೂರು ವಿವಿ ಕಲಾ ಕಾಲೇಜು ಚಾಂಪಿಯನ್
ಸಾಣೇಹಳ್ಳಿ ಕೆರೆ ಹೂಳೆತ್ತುವ ಕಾರ್ಯ ಒಂದು ವಾರದಲ್ಲಿ ಮುಕ್ತಾಯ