ಸುಭಾಶ್ಚಂದ್ರ ಎಸ್.ವಾಗ್ಳೆ
ಉಡುಪಿ ಜಿಲ್ಲೆಯ ಮಟ್ಟಿಗೆ 2023 ವಿವಾದಗಳಲ್ಲಿಯೇ ಕಳೆದುಹೋಯಿತು. ಈ ವರ್ಷ ಜಿಲ್ಲೆಯಲ್ಲಿ ಎರಡು ಅನಪೇಕ್ಷಿತ ಘಟನೆಗಳಿಂದಾಗಿ ರಾಷ್ಟ್ರಮಟ್ಟದಲ್ಲಿ ಸುದ್ದಿಗೆ ಕಾರಣವಾಯಿತು.
ಮೊದಲೆನೆಯದ್ದು ನಗರದ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ನಡೆದ ಟಾಯ್ಲೆಟ್ ವಿಡಿಯೋ ಪ್ರಕರಣ, ಎರಡನೆಯದ್ದು ವ್ಯಕ್ತಿಯೊಬ್ಬ ಒಂದೇ ಕುಟುಂಬದ 4 ಮಂದಿಯನ್ನು ಇರಿದು ಕೊಲೆ ಮಾಡಿದ್ದು.ಈ ಎರಡೂ ಪ್ರಕರಣಗಳು ಉಡುಪಿ ಜಿಲ್ಲೆ ಮಾತ್ರವಲ್ಲ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದವು. ಉಳಿದಂತೆ ಒಂದಷ್ಟು ರಾಜಕೀಯ ವಿಷಯಗಳು ಇಡೀ ವರ್ಷ ಜನರ ಬಾಯಿಗೆ ತಾಂಬೂಲಗಳಾದವು.
ರಾಜಕೀಯ ತಿರುವು:
ಏಪ್ರಿಲ್ ನಲ್ಲಿ ಚುನಾವಣಾ ಪ್ರಚಾರಕ್ಕಾಗಿ ರಾಹುಲ್ ಉಚ್ಚಿಲಕ್ಕೆ ಭೇಟಿ ನೀಡಿ ಕಾಂಗ್ರೆಸ್ಸಿನ 2 ಗ್ಯಾರಂಟಿಗಳನ್ನು ಘೋಷಿಸಿದರು.
ಜುಲೈನಲ್ಲಿ ಕೇಂದ್ರ ವಿತ್ತ ಸಚಿವೆ ಮಣಿಪಾಲದಲ್ಲಿ ನಡೆದ ಬಿಜೆಪಿಯ ಪ್ರಬುದ್ಧರ ಸಭೆಯಲ್ಲಿ ಉಪನ್ಯಾಸ ನೀಡಿದರು.
ಕಾರ್ಕಳದ ಉಮಿಕಲ್ ಬೆಟ್ಟದಲ್ಲಿ 10 ಕೋಟಿ ರು. ನೆಚ್ಚದಲ್ಲಿ ಸ್ಥಾಪಿಸಲಾಗಿರುವ 33 ಅಡಿ ಎತ್ತರದ ಪರಶುರಾಮನ ವಿಗ್ರಹ ಕೂಡ ಭಾರಿ ವಿವಾದಕ್ಕೆ ಕಾರಣವಾಗಿದೆ. ಈ ವಿಗ್ರಹ ಕಂಚಿದನದ್ದಲ್ಲ, ಇದು ನಕಲಿ ಎಂದು ಕಾಂಗ್ರೆಸ್ ಆರೋಪಿಸಿದೆ. ಆದರೆ ಇದರ ರೂವಾರಿ ಕಾರ್ಕಳ ಶಾಸಕ ಸುನಿಲ್ ಕುಮಾರ್ ಇದು ನಕಲಿಯಲ್ಲ, ಕಂಚಿನದು ಎನ್ನುತ್ತಿದ್ದಾರೆ. ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದೆ.
ಪೆಬ್ರವರಿ ತಿಂಗಳಲ್ಲಿ ಮಣಿಪಾಲದ ಮಾಹೆಯು ಕಠಿಣ ನಿರ್ಧಾರ ತೆಗೆದುಕೊಂಡು, ಮಾದಕ ವಸ್ತು ಸೇವನೆಯ ಹಿನ್ನೆಲೆಯಲ್ಲಿ ತನ್ನ 42 ಮಂದಿ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದ್ದು ಕೂಡ ರಾಜ್ಯಮಟ್ಟದಲ್ಲಿ ದೊಡ್ಡ ಸುದ್ದಿಯಾಯಿತು. ಜಿಲ್ಲೆಯ ಖ್ಯಾತಿಗೆ ಮಸಿ: ವಿಡಿಯೋ ಪ್ರಕರಣ
ಇದು ಉಭಯ ಕೋಮುಗಳ, ರಾಜಯಕೀಯ ಪಕ್ಷ ನಡುವೆ ಕೆಸರೆಚಾಟಕ್ಕೂ ಕಾರಣವಾಯಿತು. ರಾಷ್ಟ್ರೀಯ ಮಹಿಳಾ ಆಯೋಗವೂ ಉಡುಪಿಗೆ ಬಂದು ಹೋಯಿತು. ಪ್ರಕರಣವನ್ನು ಉಡುಪಿ ಪೊಲೀಸರ ಕೈಯಿಂದ ಸಿಐಡಿಗೆ ಹಸ್ತಾಂತರಿಸಲಾಯಿತು. ಇದೀಗ ಪ್ರಕರಣ ನ್ಯಾಯಾಲಯದಲ್ಲಿದೆ
ಈ ಘಟನೆಗೆ ಸಂಬಂಧಪಟ್ಟಂತೆ ಪ್ರಚೋದನಾಕಾರಿ ಭಾಷಣ ಮಾಡಿದ ಬಗ್ಗೆ ಇಬ್ಬರು ಹಿಂದೂ ನಾಯಕರ ಮೇಲೆ ಪ್ರಕರಣ ಕೂಡ ದಾಖಲಾಗಿದೆ.ಜಿಲ್ಲೆಯ ಇತಿಹಾಸದಲ್ಲಿಯೇ ಭೀಭತ್ಸ ಕೃತ್ಯನ.12ರಂದು ಏರ್ ಇಂಡಿಯಾದಲ್ಲಿ ಉದ್ಯೋಗಿಯಾಗಿರುವ ಪ್ರವೀಣ್ ಚೌಗುಲೆ ಎಂಬಾತ ತನ್ನ ಸಹೋದ್ಯೋಗಿ ಗಗನಸಖಿ ಐನಾಜ್ ಎಂಬಾಕೆಯ ಮೇಲಿನ ವಿಪರೀತ ವ್ಯಾಮೋಹದಿಂದ ನೇಜಾರಿನಲ್ಲಿರುವ ಆಕೆಯ ಮನೆಗೆ ಬಂದು, ಅಕೆಯನ್ನು, ಜೊತೆಗೆ ಆಕೆಯ ತಾಯಿ, ಸಹೋದರಿ ಸಹೋದರನನ್ನೂ ಹಾಡಹಗಲೇ ಅತ್ಯಂತ ಭೀಭತ್ಸವಾಗಿ ಇರಿದು ಕೊಲೆ ಮಾಡಿದ.
ಈ ಗಂಭೀರ ಪ್ರಕರಣದಲ್ಲಿ ಪೊಲೀಸರು ಆರೋಪಿಯನ್ನು 72 ಗಂಟೆಯೊಳಗೆ ಬಂಧಿಸಿದರು. ಕೃತ್ಯದ ಬಗ್ಗೆ ಸಾಕಷ್ಟು ಸಾಕ್ಷ್ಯಗಳನ್ನೂ ಕಲೆ ಹಾಕಿದರು. ಆದರೆ ಪ್ರಕರಣ ಇನ್ನೂ ವಿಚಾರಣೆಯ ಹಂತದಲ್ಲಿಯೇ ಇದೆ.