ಉಡುಪಿ: ಮಳೆಗೆ ಜಿಲ್ಲೆಯಲ್ಲಿ 31 ಮನೆ, 5 ತೋಟ, 5 ಕೊಟ್ಟಿಗೆಗಳಿಗೆ ಹಾನಿ

KannadaprabhaNewsNetwork |  
Published : Jul 20, 2024, 12:52 AM IST
ಕುದ್ರು | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಶುಕ್ರವಾರ ಮುಂಜಾನೆ ವರೆಗೆ 24 ಗಂಟೆಗಳಲ್ಲಿಸರಾಸರಿ 149.20 ಮಿ.ಮೀ. ಮಳೆಯಾಗಿದೆ. ತಾಲೂಕುವಾರು ಕಾರ್ಕಳ 201.70, ಕುಂದಾಪುರ 124.60, ಉಡುಪಿ 131.10, ಬೈಂದೂರು 113.80, ಬ್ರಹ್ಮಾವರ 136.60, ಕಾಪು 176.10, ಹೆಬ್ರಿ 168.40 ಮಿ.ಮೀ. ಮಳೆಯಾಗಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಜಿಲ್ಲೆಯಲ್ಲಿ ಗುರುವಾರ ರಾತ್ರಿಯ ಮಳೆಗಾಳಿಗೆ ಸುಮಾರು 31 ಮನೆಗಳಿಗೆ ಹಾನಿಯಾಗಿದೆ. 5 ಜಾನುವಾರು ಕೊಟ್ಟಿಗೆಗಳಿಗೆ ಮತ್ತು 5 ತೋಟಗಳಿಗೆ ಲಕ್ಷಾಂತರ ರು. ನಷ್ಟ ಉಂಟಾಗಿದೆ.

ಬೈಂದೂರು ತಾಲೂಕಿನ ಬಿಜೂರು ಗ್ರಾಮದ ದುರ್ಗಿ ಕುಪ್ಪ ಪೂಜಾರಿ ಅವರ ವಾಸ್ತವ್ಯದ ಮನೆ ಗಾಳಿಮಳೆಯಿಂದ ಸಂಪೂರ್ಣ ನಾಶವಾಗಿದ್ದು, ಸುಮಾರು 5,00,000 ರು. ಹಾನಿ ಅಂದಾಜಿಸಲಾಗಿದೆ. ಅಲ್ಲದೆ ಉಡುಪಿ ತಾಲೂಕಿನ ಪಡುತೋನ್ಸೆ ಗ್ರಾಮದ ಗಾಯತ್ರಿ ರಾಮ ಕುಂದರ್ ಅವರ ಮನೆಗೆ ಗಾಳಿಮಳೆಯಿಂದ ಸಂಪೂರ್ಣ ಹಾನಿಯಾಗಿ 1,50,000 ರು., ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಕೃಷ್ಣ ಶೆಟ್ಟಿ ಅವರ ಮನೆಗೆ ಸುಮಾರು 1,00,000 ರು.ಗಳಷ್ಟು ಹಾನಿಯಾಗಿದೆ.

ಕುಂದಾಪುರ ತಾಲೂಕಿನಲ್ಲಿ 14 ಮನೆಗಳಿಗೆ ಹಾನಿಯಾಗಿ 3.16 ಲಕ್ಷ ರು., ಉಡುಪಿ ತಾಲೂಕಿನಲ್ಲಿ 7 ಮನೆಗಳಿಗೆ 4.10 ಲಕ್ಷ ರು., ಬೈಂದೂರು ತಾಲೂಕಿನ 5 ಮನೆಗಳಿಗೆ 7.22 ಲಕ್ಷ ರು., ಕಾಪು ತಾಲೂಕಿನ 3 ಮನೆಗಳಿಗೆ 60 ಸಾವಿರ ರು. ಮತ್ತು ಕಾರ್ಕಳ ತಾಲೂಕಿನ 1 ಮನೆಗೆ 1.50 ಲಕ್ಷ ರು. ನಷ್ಟ ಸಂಭವಿಸಿದೆ.

ಕುಂದಾಪುರ ತಾಲೂಕಿನ ಕಂದಾವರ ಗ್ರಾಮದ ರಾಧಾ ಅವರ ಜಾನುವಾರು ಕೊಟ್ಟಿಗೆಗೆ 5,000 ರು., ಅಮಾಸೆಬೈಲು ಗ್ರಾಮದ ವನಜ ಪೂಜಾರಿ ಕೊಟ್ಟಿಗೆಗೆ 5,000 ರು., ಬುಡ್ಡು ಅವರ ಕೊಟ್ಟಿಗೆಗೆ 10,000 ರು., ಕಟ್ ಬೇಲ್ತೂರು ಗ್ರಾಮದ ರುದ್ರಮ್ಮ ಶೆಟ್ಟಿ ಅವರ ಕೊಟ್ಟಿಗೆಗೆ 15,000 ರು. ಮತ್ತು ನಾವುಂದ ಚಂದು ಪೂಜಾರಿ ಅವರ ಕೊಟ್ಟಿಗೆಗೆ 10,000 ರು.ಗಳ ನಷ್ಟವಾಗಿದೆ.

ಕುಂದಾಪುರ ತಾಲೂಕಿನ ಹರ್ಕೂರು ಗ್ರಾಮದ ಪ್ರೇಮ ಶೆಟ್ಟಿ ಅವರ ತೋಟಕ್ಕೆ 5,000 ರು. ಮತ್ತು ರಘುರಾಮ ಶೆಟ್ಟಿ ಅವರ ತೋಟಕ್ಕೆ 5,000 ರು., ಸಿದ್ಧಾಪುರ ಗ್ರಾಮದ ಮಂಜಯ್ಯ ಶೆಟ್ಟಿ ಅವರ ತೋಟಕ್ಕೆ 5,000 ರು., ಗುಲ್ವಾಡಿ ಗ್ರಾಮದ ನಾರಾಯಣ ಪೂಜಾರಿ ಅವರ ತೋಟಕ್ಕೆ 10,000 ರು., ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ವಿನೋದ್ ಎಸ್. ಹೆಬ್ಬಾರ್ ಅವರ ತೋಟಕ್ಕೆ 30,000 ರು. ಗಳಷ್ಟು ಬೆಳೆ ಹಾನಿಯಾಗಿದೆ.

ಜಿಲ್ಲೆಯಲ್ಲಿ ಶುಕ್ರವಾರ ಮುಂಜಾನೆ ವರೆಗೆ 24 ಗಂಟೆಗಳಲ್ಲಿಸರಾಸರಿ 149.20 ಮಿ.ಮೀ. ಮಳೆಯಾಗಿದೆ. ತಾಲೂಕುವಾರು ಕಾರ್ಕಳ 201.70, ಕುಂದಾಪುರ 124.60, ಉಡುಪಿ 131.10, ಬೈಂದೂರು 113.80, ಬ್ರಹ್ಮಾವರ 136.60, ಕಾಪು 176.10, ಹೆಬ್ರಿ 168.40 ಮಿ.ಮೀ. ಮಳೆಯಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವರಾತ್ರಿ ಪ್ರಯುಕ್ತ ಕಾಶಿಪುರ ಉತ್ಸವ ಭವ್ಯ ಆಚರಣೆ
ಚಾಮರಾಜನಗರ: ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ