ಕನ್ನಡಪ್ರಭ ವಾರ್ತೆ ಉಡುಪಿ
ಈ ಬಗ್ಗೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಪ್ರಮುಖರಾದ ಅಕ್ಷತಾ ರಾವ್, ಜಿಲ್ಲೆಯ ಎಲ್ಲ ವಿಶೇಷ ಶಾಲೆಯ ಮಕ್ಕಳಿಗಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, 16 ವಿಶೇಷ ಶಾಲೆಗಳ ಮಕ್ಕಳು ಪ್ರತಿಭೆ ಪ್ರದರ್ಶನ ನಡೆಸಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಪ್ರತಿ ವಿಶೇಷ ಶಾಲೆಯಿಂದ ಒಂದು ಮಗುವನ್ನು ಉತ್ತಮ ಬೆಳವಣಿಗೆ ಹೊಂದಿದ ಮಗು ಎಂದು ಗುರುತಿಸಿ, ಮಗುವಿಗೆ ಬೆಸ್ಟ್ ಡೆವಲಪ್ಡ್ ಔಟ್ ಸ್ಟಾಡಿಂಗ್ ಚೈಲ್ಡ್ ಪುರಸ್ಕಾರ ನೀಡಲಾಗುವುದು. ವಿಶೇಷ ಮಕ್ಕಳಿಂದ ಬದುಕು ಬದಲಾಯಿಸುವ ಯಶೋಗಾಥೆಯ ಕಥಾ ನೃತ್ಯರೂಪಕ ಪ್ರದರ್ಶಗೊಳ್ಳಲಿದೆ. ಪ್ರಥಮ ಬಹುಮಾನ 22,201 ರು., ದ್ವಿತೀಯ 16,201 ರು., ತೃತೀಯ 11,201 ರು. ಮತ್ತು ಸಮಧಾನಕಾರ ಬಹುಮಾನ ನೀಡಲಾಗುವುದು. ಕಾರ್ಯಕ್ರಮದಲ್ಲಿ ಶಾಸಕ ಯಶ್ಪಾಲ್ ಸುವರ್ಣ ಸೇರಿದಂತೆ ಗಣ್ಯರು ಭಾಗವಹಿಸುವರು ಎಂದರು.ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಸಂಧ್ಯಾ ರಮೇಶ್, ದಿನೇಶ್ ಆಮೀನ್, ಆನಂದ್ ಸುವರ್ಣ, ನಿಲೇಶ್ ಕಾಂಚನ್ ಉಪಸ್ಥಿತರಿದ್ದರು.