ಉಡುಪಿ: ಪಣಿಯಾಡಿಯಲ್ಲಿ ಅನಂತವ್ರತ, ಕದಳಿ ಪೂಜೆ

KannadaprabhaNewsNetwork |  
Published : Sep 23, 2024, 01:27 AM IST
ಪಣಿಯಾಡಿ21 | Kannada Prabha

ಸಾರಾಂಶ

ಪಣಿಯಾಡಿಯ ಶ್ರೀ ಅನಂತಾಸನ ಶ್ರೀ ಲಕ್ಷ್ಮೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಅನಂತವ್ರತ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿಇಲ್ಲಿನ ಪಣಿಯಾಡಿಯ ಶ್ರೀ ಅನಂತಾಸನ ಶ್ರೀ ಲಕ್ಷ್ಮೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಅನಂತವ್ರತ ಕಾರ್ಯಕ್ರಮ ದೇವಾಲಯದ ತಂತ್ರಿಗಳವರಾದ ಹಯವದನ ತಂತ್ರಿ, ವಾದಿರಾಜ ತಂತ್ರಿ, ಪ್ರದಾನ ಅರ್ಚಕ ರಾಘವೇಂದ್ರ ಭಟ್, ಪುತ್ತಿಗೆ ಮಠದ ದಿವಾನರಾದ ನಾಗರಾಜ ಆಚಾರ್ಯ ಹಾಗೂ ಅನಂತ ವಿಪ್ರ ಬಳಗದವರ ಸಹಕಾರದಿಂದ ವೈಭವದಿಂದ ಜರುಗಿತು.ವಿಶೇಷವಾಗಿ ಅನಂತ ಕದಳಿ ಸಮರ್ಪಣೆ ಸೇವೆ ಭಕ್ತಾದಿಗಳವರಿಂದ ನಡೆಯಿತು. ಕದಿರು ಕಟ್ಟುವುದು, ಪಂಚಾಮೃತ ಅಭಿಷೇಕ, ಅಲಂಕಾರ ಪೂಜೆ, ಕಲ್ಪೋಕ್ತ ಕಲಶ ಪೂಜೆ, ವಿಷ್ಣು ಸಹಸ್ರನಾಮ ಪಾರಾಯಣ,ಲಕ್ಷ್ಮೀ ಶೋಭಾನೆ, ಮಹಾಪೂಜೆ, ವ್ರತದಾರಿಗಳ ಕೈಗೆ ಅನಂತ ಸೂತ್ರದಾರ ಕಟ್ಟುವ ಪ್ರಕ್ರಿಯೆ, ಅನ್ನಸಂತರ್ಪಣೆ, ವಿಶೇಷ ಭಜನೆ, ಹೂವಿನ ಪೂಜೆ, ರಂಗಪೂಜೆ, ಅಸ್ಟವಧಾನ ಸೇವೆ ನಡೆಯಿತು.ಭಕ್ತರು ಬೆಳಗ್ಗೆಯಿಂದ ರಾತ್ರಿಯ ತನಕ ಶ್ರೀ ಕ್ಷೇತ್ರ ಸ್ವಾಮಿಯ ದರ್ಶನಪಡೆದು ವಿಶೇಷ ಕದಳಿ ಪ್ರಸಾದ ಸ್ವೀಕರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!