ಕೀರ್ತಿಶೇಷ ವಿದ್ಯಾವಾಚಸ್ಪತಿ ಡಾ ಬನ್ನಂಜೆ ಗೋವಿಂದಾಚಾರ್ಯರ ಭಗವದ್ ಗೀತೆ (ಐದು ಮತ್ತು ಆರನೇ ಅಧ್ಯಾಯ, ಆಚಾರ್ಯತ್ರಯರ ಭಾಷ್ಯದ ವಿಶ್ಲೇಷಣೆಯ ಜತೆಗೆ) ಹಾಗೂ ಹಾಡುಗಬ್ಬಗಳು (ಆನಂದತೀರ್ಥರ ಭಕ್ತಿಗೀತೆಗಳು, ಹದಿನಾಲ್ಕು ಹಾಡುಗಳು, ಕೃಷ್ಣಮಾಲಾ, ಧ್ಯಾನಮಾಲ, ಶ್ರೀ ಜಯತೀರ್ಥ ಸ್ತುತಿ ಮತ್ತು ಶ್ರೀ ಪೂರ್ಣಬೋಧ ಸ್ತೋತ್ರ (ಶ್ರೀ ರಾಘವೇಂದ್ರ ಸ್ತುತಿ) ಪುಸ್ತಕವನ್ನು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಉಭಯ ಶ್ರೀಪಾದರು ಬಿಡುಗಡೆಗೊಳಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಕೀರ್ತಿಶೇಷ ವಿದ್ಯಾವಾಚಸ್ಪತಿ ಡಾ ಬನ್ನಂಜೆ ಗೋವಿಂದಾಚಾರ್ಯರ ಭಗವದ್ ಗೀತೆ (ಐದು ಮತ್ತು ಆರನೇ ಅಧ್ಯಾಯ, ಆಚಾರ್ಯತ್ರಯರ ಭಾಷ್ಯದ ವಿಶ್ಲೇಷಣೆಯ ಜತೆಗೆ) ಹಾಗೂ ಹಾಡುಗಬ್ಬಗಳು (ಆನಂದತೀರ್ಥರ ಭಕ್ತಿಗೀತೆಗಳು, ಹದಿನಾಲ್ಕು ಹಾಡುಗಳು, ಕೃಷ್ಣಮಾಲಾ, ಧ್ಯಾನಮಾಲ, ಶ್ರೀ ಜಯತೀರ್ಥ ಸ್ತುತಿ ಮತ್ತು ಶ್ರೀ ಪೂರ್ಣಬೋಧ ಸ್ತೋತ್ರ (ಶ್ರೀ ರಾಘವೇಂದ್ರ ಸ್ತುತಿ) ಪುಸ್ತಕವನ್ನು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಉಭಯ ಶ್ರೀಪಾದರು ಬಿಡುಗಡೆಗೊಳಿಸಿದರು. ನಂತರ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಆಶೀರ್ವಚನ ನೀಡುತ್ತಾ, ತಮ್ಮ ಮಠದ ಸುಗುಣಮಾಲಾ ಪತ್ರಿಕೆಯಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಬನ್ನಂಜೆಯವರ ಒಡನಾಟ ಸ್ಮರಿಸಿಕೊಂಡರು. ಆಚಾರ್ಯರ ಕೃತಿಗಳು ಅದ್ವಿತೀಯವಾಗಿದ್ದು ಇನ್ನಷ್ಟು ಅವರ ಅಪೂರ್ವ ಕೃತಿಗಳು ಬೇಗನೆ ಜೀಜ್ಞಾಸುಗಳಿಗೆ ಸಿಗುವಂತಾಗಲಿ ಎಂದು ಹಾರೈಸಿದರು.ಭಗವದ್ಗೀತೆಯ ಬಹು ಬೇಡಿಕೆಯಲ್ಲಿರುವ ಮರುಮುದ್ರಿತ ಈ ಸಂಪುಟ ೫ ಮತ್ತು ಆರನೆಯ ಅಧ್ಯಾಯವನ್ನು ಒಳಗೊಂಡಿರುತ್ತದೆ.
ಪುತ್ತಿಗೆ ಮಠದ ಕಿರಿಯ ಪಟ್ಟ ಶ್ರೀ ಸುಶ್ರೀಂದ್ರ ತೀರ್ಥ ಶ್ರಿಪಾದರು ಸಾನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಪ್ರತಿಷ್ಠಾನದ ವಿಶ್ವಸ್ಥರಾದ ವಿನಯ ಬನ್ನಂಜೆ, ರಾಘವೇಂದ್ರ ಆಚಾರ್ಯ, ಪರ್ಯಾಯ ಪುತ್ತಿಗೆ ಮಠದ ಶ್ರೀ ಪ್ರಸನ್ನ ಆಚಾರ್ಯ, ರಮೇಶ್ ಭಟ್ ಉಪಸ್ಥಿತರಿದ್ದರು.
ಸುಗುಣಮಾಲಾ ಪತ್ರಿಕೆಯ ಸಂಪಾದಕ ಮಹಿತೋಷಾಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.