ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿಯ ಜನತೆಗೆ ವೈವಿಧ್ಯಮಯ ಐಸ್‌ಕ್ರೀಮ್ ಮತ್ತು ಚಾಟ್‌ಗಳ ರಸದೌತಣ ಬಡಿಸಲಿರುವ ಬಬ್ಬಾಸ್ ಕೆಫೆ ಆ್ಯಂಡ್ ಐಸ್‌ಕ್ರೀಮ್ ಪಾರ್ಲರ್ ಇಲ್ಲಿನ ಅಜ್ಜರಕಾಡಿನ ಶಿವಧಾಮ ಕಟ್ಟಡದಲ್ಲಿ ಬುಧವಾರ ಉದ್ಘಾಟನೆಗೊಂಡಿತು.ಉದ್ಘಾಟನೆ ನೆರವೇರಿಸಿದ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಆಹಾರೋದ್ಯಮದಲ್ಲಿ ಇಂದು ಬೇಕಾದಷ್ಟು ಆಧುನಿಕ ತಂತ್ರಜ್ಞಾನಗಳು ಲಭ್ಯ ಇವೆ. ಅವುಗಳನ್ನು ಬಳಸಿಕೊಂಡು ತಮ್ಮೂರಿನಲ್ಲಿಯೇ ಉದ್ಯಮವನ್ನು ಆರಂಭಿಸಿ, ತಾವು ಉದ್ಯೋಗಪತಿಗಳಾಗುವುದರ ಜೊತೆಗೆ ಸಾಕಷ್ಟು ಮಂದಿಗೆ ಉದ್ಯೋಗವನ್ನೂ ನೀಡುವುದು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಬಬ್ಬಾಸ್ ಕೆಫೆ - ಐಸ್‌ಕ್ರೀಮ್ ಪಾರ್ಲರ್ ಮಾದರಿ ಎಂದು ಶ್ಲಾಘಿಸಿದರು.ಐಸ್‌ಕ್ರೀಮ್ ಕೌಂಟರನ್ನು ಮಾಜಿ ಸಚಿವ ವಿನಯಕುಮಾರ್ ಸೊರಕೆ ಉದ್ಘಾಟಿಸಿ, ಇಡೀ ಜಗತ್ತಿನಲ್ಲಿ ಉಡುಪಿ ಹೊಟೇಲ್‌ಗಳ ಸ್ವಾದ ಪಸರಿಸಿದೆ. ಬಬ್ಬಾಸ್ ಕೂಡ ತನ್ನ ರುಚಿಶುಚಿಯಿಂದ ಹೆಸರುವಾಸಿಯಾಗಲಿ ಎಂದು ಹಾರೈಸಿದರು.
ಕಾಂಟಿನೆಂಟಲ್ ಕೌಂಟರನ್ನು ಕಟ್ಟಡ ಮಾಲಿಕ ಸುಭಾಶ್ ಸಾಲ್ಯಾನ್ ಉದ್ಘಾಟಿಸಿದರು. ಮುಖ್ಯ ಅತಿಥಿ ಶಾಸಕ ಯಶ್‌ಪಾಲ್ ಸುವರ್ಣ ಮತ್ತು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ ಅವರು ಶುಭ ಹಾರೈಸಿದರು.ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಕಾಂಗ್ರೆಸ್ ನಾಯಕರಾದ ಉದಯಕುಮಾರ್ ಶೆಟ್ಟಿ ಮುನಿಯಾಲು, ರಮೇಶ್ ಕಾಂಚನ್, ದಿನೇಶ್ ಹೆಗ್ಡೆ ಮೊಳಹಳ್ಳಿ, ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಉದ್ಯಮಿಗಳಾದ ಪುರುಷೋತ್ತಮ ಶೆಟ್ಟಿ, ದಿನೇಶ್ ಪುತ್ರನ್, ಎಸ್ ಬ್ಯಾಂಕ್ ಅಂಬಲಪಾಡಿ ಶಾಖೆಯ ಪ್ರಬಂಧಕ ರವಿ ಶೆಟ್ಟಿ, ಬಾಸೆಲ್ ಮಿಷನ್ ಚರ್ಚಿನ ರೆವೆರೆಂಡ್ ಸ್ಟೀವನ್ ಬಂಡಿ, ಸಮಾಜ ಸೇವಕ ಕೆ. ಕೃಷ್ಣಮೂರ್ತಿ ಅಂಬಲಪಾಡಿ - ನಗರಸಭಾ ಸದಸ್ಯ ಅಮೃತಾ ಕೃಷ್ಣಮೂರ್ತಿ, ಸಂಸ್ಥೆಯ ಪಾಲುದಾರರಾದ ಕವನ್ ಕೆ. ಆಚಾರ್ಯ, ಪ್ರಥಮ್ ಪೂಜಾರಿ ಮತ್ತು ಕೇವಿನ್ ಜತ್ತನ್ನ ಉಪಸ್ಥಿತರಿದ್ದರು.