ಕನ್ನಡಪ್ರಭ ವಾರ್ತೆ ಉಡುಪಿ ಮೈಸೂರಿನಂತೆ ಉಡುಪಿಯಲ್ಲಿಯೂ ಅ.15ರಂದು ನಡೆಸಲುದ್ದೇಶಿಸಿದ್ದ ಮಹಿಷಾ ದಸರಾಕ್ಕೆ ಬ್ಯಾನರ್ ಅಳವಡಿಕೆ ಮತ್ತು ಮೆರವಣಿಗೆಗೆ ಉಡುಪಿ ನಗರ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಆದರೆ ಮಹಿಷಾ ದಸರಾದ ಸಭೆಯನ್ನು ನಡೆಸುವುದಕ್ಕೆ ಅನುಮತಿ ನೀಡುವ ಬಗ್ಗೆ ಪೊಲೀಸ್ ಇಲಾಖೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಮೈಸೂರಿನಲ್ಲಿಯೂ ಮೆರವಣಿಗೆಗೆ ಅವಕಾಶ ಇಲ್ಲದೇ, ಷರತ್ತು ಬದ್ಧ ಸಭೆ ನಡೆಸಲು ಅವಕಾಶ ನೀಡಲಾಗಿದೆ. ಅದನ್ನು ಪರಿಶೀಲಿಸಿ ಉಡುಪಿಯಲ್ಲಿಯೂ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಜಾಪ್ರಭುತ್ವದ ಕಗ್ಗೊಲೆ: ಜಯನ್ ಅಂಬೇಡ್ಕರ್ ಯುವಸೇನೆ ಆಯೋಜಿಸಿರುವ ಮೂಲನಿವಾಸಿಗಳ ಸಾಂಸ್ಕೃತಿಕ ಹಬ್ಬ- ಮಹಿಷಾ ದಸರಾಕ್ಕೆ ಕಾನೂನು ಸುವ್ಯವಸ್ಥೆಯ ನೆಪಒಡ್ಡಿ ಮೆರವಣಿಗೆ ಮತ್ತು ಬ್ಯಾನರ್ ಅಳವಡಿಸಲು ಅನುಮತಿ ನಿರಾಕರಿಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ. ಸಂವಿಧಾನದ ಮೇಲೆ ಅತ್ಯಾಚಾರ ಎಂದು ದಲಿತ ಚಿಂತಕ ಜಯನ್ ಮಲ್ಪೆ ಆರೋಪಿಸಿದ್ದಾರೆ.