ಕನ್ನಡಪ್ರಭ ವಾರ್ತೆ ಉಡುಪಿ
ಕನ್ನಡ ನಾಡು ನುಡಿಗೆ ಶ್ರೀ ಕೃಷ್ಣ ಮಠವು ತನ್ನದೇ ಕೊಡುಗೆ ನೀಡಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.ಏ.30 ಮತ್ತು ಮೇ 1ರಂದು ಉಡುಪಿಯ ರಾಜಾಂಗಣದಲ್ಲಿ ನಡೆಯಲಿರುವ 17ನೇ ಉಡುಪಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಅವರು ಆಶೀರ್ವಚನ ನೀಡಿದರು.
ಶ್ರೀ ಕೃಷ್ಣಮಠವು ದಾಸವರೆಣ್ಯರಾದ ಪುರಂದರ ಮತ್ತು ಕನಕದಾಸರ ಕೀರ್ತನೆ - ಸಾಹಿತ್ಯಗಳಿಗೆ ಪ್ರೇರಣೆಯಾಗುವುದರೊಂದಿಗೆ ಹಲವು ಧಾರ್ಮಿಕ, ಸಾಂಸ್ಕ್ಥತಿಕ ಕೊಡುಗೆಗಳನ್ನು ಕನ್ನಡ ನಾಡು ನುಡಿಗೆ ಶ್ರೀ ಮಠ ನೀಡಿದೆ. ಪುತ್ತಿಗೆ ಮಠ ಕೂಡ ಈ ವಿಚಾರದಲ್ಲಿ ಎಂದಿಗೂ ಹಿಂದೆ ಬಿದ್ದಿಲ್ಲ. ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಮಠದ ಪತ್ರಿಕೆ ಸುಗುಣಮಾಲಾ ಪ್ರತಿಕೆ ಪ್ರಖ್ಯಾತಗೊಂಡು ರಾಜ್ಯದಾದ್ಯಂತ ಜನಪ್ರೀಯವಾಗಿರುವುದು ಪತ್ರಿಕಾಲೋಕಕ್ಕೆ ಹೆಮ್ಮೆಯ ಸಂಗತಿ. ಶ್ರೀಮಠವು ಕನ್ನಡ ಸಾಹಿತ್ಯ ಪರಿಷತ್ತಿನ ನಾಡು ನುಡಿ ಸಂಸ್ಕೃತಿಯ ಬಗೆಗಿನ ಎಲ್ಲಾ ಕೆಲಸಗಳಿಗೆ ಕೈಜೋಡಿಸುತ್ತದೆ ಎಂದರು.ದಕ್ಷಿಣ ಕನ್ನಡ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವ ಅಧ್ಯಕ್ಷರ ಪ್ರದೀಪ್ ಕಲ್ಕೂರ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ರಾಜ್ಯಕ್ಕೆ ಮಾದರಿ ಎಂದರು.
ಪರಿಷತ್ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಗೌರವ ಕಾರ್ಯದರ್ಶಿಗಳಾದ ಸುಬ್ರಮಣ್ಯ ಶೆಟ್ಟಿ, ನರೇಂದ್ರ ಕುಮಾರ್ ಕೋಟ ಕೋಶಾಧ್ಯಕ್ಷ ಪಿ ಮನೋಹರ್ ಭಟ್, ಭುವನಪ್ರಸಾದ್ ಹೆಗ್ಡೆ, ಸಂಘಟನಾ ಕಾರ್ಯದರ್ಶಿಗಳಾದ ಪಿ ವಿ ಆನಂದ ಸಾಲಿಗ್ರಾಮ, ಸತೀಶ್ ವಡ್ಡರ್ಸೆ, ಜೊತೆ ಕಾರ್ಯದರ್ಶಿ ಡಾ. ರಘು ನಾಯ್ಕ, ಕಸಾಪ ತಾಲೂಕು ಅಧ್ಯಕ್ಷರಾದ ಕೊಂಡಳ್ಳಿ ಪ್ರಭಾಕರ್ ಶೆಟ್ಟಿ, ಪುಂಡಲೀಕ ಮರಾಠೆ, ರಾಮಚಂದ್ರ ಐತಾಳ್, ಶ್ರೀನಿವಾಸ ಭಂಡಾರಿ, ಪದಾಧಿಕಾರಿಗಳಾದ ಜ್ಯೋತಿ ಪೂಜಾರಿ, ಅಚ್ಯುತ ಪೂಜಾರಿ, ಮಾಧ್ಯಮ ವಕ್ತಾರ ನರಸಿಂಹ ಮೂರ್ತಿ ರಾವ್, ಮಂಜುನಾಥ ಕುಲಾಲ್, ಡಾ.ಪ್ರವೀಣ್ ಕುಮಾರ್ ಮತ್ತು ವಿವಿಧ ಸಂಘಟನೆಗಳ ಸದಸ್ಯರು ಇದ್ದರು.