ಕನ್ನಡಪ್ರಭ ವಾರ್ತೆ ಉಡುಪಿ
ಜಿಲ್ಲೆಯಾದ್ಯಂತ ಕಳೆದೆರಡು ದಿನಗಳಿಂದ ಉತ್ತಮ ಮಳೆಯಾಗಿದೆ. ಮಳೆಯ ಜೊತೆಗೆ ಬೀಸಿದ ಗಾಳಿಯಿಂದಾಗಿ ಸಾಕಷ್ಟು ಕಡೆಗಳಲ್ಲಿ ಆಸ್ತಿಗೆ ಹಾನಿಯಾದ ಘಟನೆಗಳೂ ನಡೆದಿವೆ.ಜಿಲ್ಲೆಯಲ್ಲಿ ಸುಮಾರು 23 ಮನೆಗಳಿಗೆ ಒಟ್ಟು 5.15 ಲಕ್ಷ ರು.ಗಳಷ್ಟು ನಷ್ಟ ಉಂಟಾಗಿದ್ದರೆ, ನಾಲ್ವರು ರೈತರ ತೋಟಗಾರಿಕಾ ಬೆಳೆಗಳಿಗೆ ಒಟ್ಟು 2 ಲಕ್ಷ ರು.ಗಳಷ್ಟು ಹಾನಿಯಾಗಿದೆ.
ಉಡುಪಿ ತಾಲೂಕಿನ ಮರ್ಣೆ ಗ್ರಾಮದ ಬೊಗ್ಗು, ಹೆರ್ಗ ಗ್ರಾಮದ ಸಂಜೀವ ಪೂಜಾರಿ, ಕಡೆಕಾರು ಗ್ರಾಮದ ಅಕ್ಕಿ ಕೋಟ್ಯಾನ್, ಕೃಷ್ಣ ಕೋಟ್ಯಾನ್, ಬೊಮ್ಮರಬೆಟ್ಟು ಗ್ರಾಮದ ಸುಂದರಿ ಬಚ್ಚ ಸಫಲಿಗ ಅವರ ಮನೆಗಳಿಗೆ ಗಾಳಿ ಮಳೆಗೆ ತಲಾ 10000 ರು., ಕಡೆಕಾರು ಗ್ರಾಮದ ಲೀಲಾ ಅವರ ಮನೆಗೆ 5000, ಬೊಮ್ಮರಬೆಟ್ಟು ಗ್ರಾಮದ ಜಯಶ್ರೀ ಶ್ರೀಧರ ನಾಯ್ಕ, ಬಡಗುಬೆಟ್ಟು ಗ್ರಾಮದ ವಿಠಲ ಶೆಟ್ಟಿಗಾರ್ ಅವರ ಮನೆಗೆ ತಲಾ 20,000 ರು., ಬೊಮ್ಮರಬೆಟ್ಟು ಗ್ರಾಮದ ಪೂರ್ಣಿಮ ಸೇರಿಗಾರ ಅವರ ಮನೆಗೆ 30,000, ಶಿವಳ್ಳಿ ಗ್ರಾಮದ ಗಣೇಶ್ ಅವರ ಮನೆಗೆ ಭಾಗಶಃ 12,000 ರು., ಕುಸುಮ ನಾಗೇಶ್ ಅವರ ಮನೆಗೆ 10,000 ರು.ಗಳಷ್ಟು ಹಾನಿಯಾಗಿದೆ.ಹೆಬ್ರಿ ತಾಲೂಕಿನ ಶಿವಪುರ ಗ್ರಾಮದ ವಸಂತಿ ತೇಜ ಶೆಟ್ಟಿ, ರವಿಕಿರಣ್ ಭಟ್ ಅವರ ಮನೆಗೆ ತಲಾ 50,000 ರು., ಪ್ರೇಮ ಶೆಟ್ಟಿ ಅವರ ಮನೆಗೆ 2,00,000 ರು., ಮುದ್ರಾಡಿ ಗ್ರಾಮದ ಸುಮನ ನಾಯ್ಕ, ಸುಂದರ ಆಚಾರ್ಯ, ಗಿರಿಜಾ ಶೆಟ್ಟಿ, ಕಲ್ಯಾಣಿ ಪೂಜಾರಿ ಮನೆಗಳಿಗೆ ತಲಾ 10,000 ರು., ಮುಕ್ತ ಭಂಡಾರಿ ಮತ್ತು ಇಂದಿರಾ ಭಂಡಾರಿ ಅವರ ಮನೆಗಳಿಗೆ ತಲಾ 4,000 ರು.ಗಳ ಹಾನಿಯಾಗಿದೆ.
ಕಾಪು ತಾಲೂಕಿನ ಪಡು ಗ್ರಾಮದ ಲತಾ ಅಮೀನ್ ಮತ್ತು ಕುರ್ಕಾಲು ಡೋಲ್ಫಿ ಫಿರೇರಾ ಅವರ ಮನೆಗಳಿಗೆ ತಲಾ 5,000, ಪಾಂಗಳ ಗ್ರಾಮದ ಅನಿಲ್ ಕುಮಾರ್ ಅವರ ಮನೆಗೆ 10,000 ರು.ಗಳಷ್ಟು ಹಾನಿಯಾಗಿದೆ.ಹೆಬ್ರಿ ತಾಲೂಕಿನ ಪಡುಕುಡೂರು ಗ್ರಾಮದ ಕೃಷ್ಣ ಶೆಟ್ಟಿ, ಜಗದೀಶ ಹೆಗ್ಡೆ, ಲಕ್ಷ್ಮೀ ಶೆಟ್ಟಿ ಮತ್ತು ಶಿವಪುರ ಗ್ರಾಮದ ರಾಧಾಕೃಷ್ಣ ಪುತ್ತಿ ಅವರ ತೋಟಗಾರಿಕೆ ಬೆಳೆಗಳಿಗೆ ತಲಾ 50,000 ರು.ಗಳ ಹಾನಿಯನ್ನು ಅಂದಾಜಿಸಲಾಗಿದೆ.