ಉಡುಪಿ: ಗ್ಯಾರೇಜ್ ಪ್ರಿಮಿಯರ್ ಲೀಗ್‌ 2ಗೆ ಚಾಲನೆ

KannadaprabhaNewsNetwork |  
Published : Feb 02, 2026, 02:30 AM IST
01ಜಿಪಿಎಲ್ | Kannada Prabha

ಸಾರಾಂಶ

ಗ್ರಾಮೀಣ ಪ್ರದೇಶಗಳಲ್ಲಿ ಕ್ರಿಕೆಟ್ ಬೆಳವಣಿಗೆಯಾಗಲು ಹೆಚ್ಚು ಹೆಚ್ಚು ಪಂದ್ಯಕೂಟಗಳು ಆಯೋಜನೆಯಾಗಬೇಕು. ಇದರಿಂದ ಹೊಸ ಪ್ರತಿಭೆಗಳು ಮೂಡಲು ಸಹಕಾರಿಯಾಗುತ್ತದೆ ಎಂದು ಉದ್ಯಾವರ ಗ್ರಾಪಂ ಅಧ್ಯಕ್ಷೆ ಮಾಲತಿ ಸಂದೀಪ್ ಅಭಿಪ್ರಾಯಪಟ್ಟರು.

ಉದ್ಯಾವರ: ಗ್ರಾಮೀಣ ಪ್ರದೇಶಗಳಲ್ಲಿ ಕ್ರಿಕೆಟ್ ಬೆಳವಣಿಗೆಯಾಗಲು ಹೆಚ್ಚು ಹೆಚ್ಚು ಪಂದ್ಯಕೂಟಗಳು ಆಯೋಜನೆಯಾಗಬೇಕು. ಇದರಿಂದ ಹೊಸ ಪ್ರತಿಭೆಗಳು ಮೂಡಲು ಸಹಕಾರಿಯಾಗುತ್ತದೆ ಎಂದು ಉದ್ಯಾವರ ಗ್ರಾಪಂ ಅಧ್ಯಕ್ಷೆ ಮಾಲತಿ ಸಂದೀಪ್ ಅಭಿಪ್ರಾಯಪಟ್ಟರು.

ಉಡುಪಿ ಜಿಲ್ಲಾ ಗ್ಯಾರೇಜ್ ಮಾಲೀಕರ ಸಂಘದ ಆಶ್ರಯದಲ್ಲಿ ಜಿಪಿಎಲ್ ಸೀಸನ್ -2 ಕ್ರಿಕೆಟ್ ಪಂದ್ಯಕೂಟವನ್ನು ಉದ್ಯಾವರದ ಬೋಳಾರ್ ಗುಡ್ಡೆ ಮೈದಾನದಲ್ಲಿ ಉದ್ಘಾಟಿಸಿ ಮಾತನಾಡಿದರು. ಸಂಘದ ಅಧ್ಯಕ್ಷ ರೋಷನ್ ಕರ್ಕಡ ಕಾಪು ಅವರು ಕಾರ್‍ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಗ್ಯಾರೇಜ್ ಮಾಲೀಕರ ಸಂಘ (ಮಂಗಳೂರು ಮತ್ತು ಉಡುಪಿ) ಇದರ ಚೇರ್‌ಮ್ಯಾನ್ ಜನಾರ್ದನ್ ಎ., ಅಧ್ಯಕ್ಷರಾದ ದಿನಕರ್ ಕುಲಾಲ್, ಪ್ರಧಾನ ಕಾರ್‍ಯದರ್ಶಿ ರಾಜ್‌ಗೋಪಾಲ್, ಸಂಘಟನಾ ಕಾರ್‍ಯದರ್ಶಿಗಳಾದ ಶರತ್ ಆಚಾರ್ಯ, ಪುಷ್ಪರಾಜ್ ಶೆಟ್ಟಿ, ಸರ್ವೋ ಲುಬ್ರಿಕಂಟ್ ನ ಪ್ರತಿನಿಧಿಗಳಾದ ರಾಘವೇಂದ್ರ ಭಟ್, ಮಾರೂರು ಮೋಟಾರ್ಸ್ ಪ್ರತಿನಿಧಿಗಳಾದ ಅನಿರುದ್ದ್ ಮತ್ತು ಸಂತೋಷ್, ಮಂಗಳೂರಿನ ಬುಲಿಪು ತುಳು ಚಿತ್ರ ತಂಡದ ಕಲಾವಿದ ಅವಿನಾಶ್ ಆಚಾರ್ಯ, ದುರ್ಗಾಪ್ರಸಾದ್, ವೈಭವ್ ಶೆಟ್ಟಿಗಾರ್, ಯೋಗೀಶ್, ಸಂಘದ ಸ್ಥಾಪಕ ಅಧ್ಯಕ್ಷ ಪ್ರಭಾಕರ್ ಕೆ., ಉಪಾಧ್ಯಕ್ಷರಾದ ಎಸ್.ಜಿ. ಕೃಷ್ಣ ಮತ್ತು ವಿನಯ್ ಕುಮಾರ್ ಕಲ್ಮಾಡಿ, ಗೌರವ ಸಲಹೆಗಾರರಾದ ಯಾದವ ಶೆಟ್ಟಿಗಾರ್, ಉದಯ ಕಿರಣ್, ಕ್ರೀಡಾ ಕಾರ್‍ಯದರ್ಶಿಗಳಾದ ಮಧುಸೂದನ್ ಕನ್ನರ್ಪಾಡಿ ಮತ್ತು ಸಂತೋಷ್ ಪೂಜಾರಿ ಕಾಪು, ಪದಾಧಿಕಾರಿಗಳಾದ ರವಿ ತೆಂಕಪೇಟೆ, ಮಹೇಶ್ ನಿಟ್ಟೂರು, ನವೀನ್ ಉದ್ಯಾವರ, ಸಿಲ್ವರ್ ಸ್ಟಾರ್ ಡಿಸೋಜ, ಸುಧಾಕರ್ ಅಮೀನ್ ಮತ್ತಿತರರು ಉಪಸ್ಥಿತರಿದ್ದರು.

ಉಪಾಧ್ಯಕ್ಷರಾದ ವಿನಯ್‌ ಕುಮಾರ್ ಸ್ವಾಗತಿಸಿ, ಕೋಶಾಧಿಕಾರಿ ಸಂತೋಷ್ ಕುಮಾರ್ ವಂದಿಸಿದರು. ಪ್ರಧಾನ ಕಾರ್‍ಯದರ್ಶಿ ಮಂಜುನಾಥ್ ಮಣಿಪಾಲ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

400 ಕೋಟಿ ರು. ದರೋಡೆ ಪ್ರಮುಖ ಆರೋಪಿ ಬಂಧನ
ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ