ಉಡುಪಿ: ಗ್ರಾಹಕರಿಂದಲೇ ಗೀತಾಂಜಲಿ ಸಿಲ್ಕ್ಸ್ ಪುರುಷರ ವಿಭಾಗ ಉದ್ಘಾಟನೆ

KannadaprabhaNewsNetwork |  
Published : Oct 10, 2024, 02:19 AM ISTUpdated : Oct 10, 2024, 02:20 AM IST

ಸಾರಾಂಶ

ಗೀತಾಂಜಲಿ ಶಾಪರ್ ಸಿಟಿಯಲ್ಲಿರುವ ತಮ್ಮ ಗೀತಾಂಜಲಿ ಸಿಲ್ಕ್ಸ್‌ನಲ್ಲಿ ನೂತನವಾಗಿ ಆರಂಭಿಸಿರುವ ಪುರುಷರ ಪ್ರತ್ಯೇಕ ವಿಭಾಗವನ್ನು ಬುಧವಾರ ಗ್ರಾಹಕರಿಂದಲೇ ಉದ್ಘಾಟಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಕಳೆದ ನಾಲ್ಕು ದಶಕಗಳಿಂದ ಜವುಳಿ ಉದ್ಯಮದಲ್ಲಿ ಮನೆಮಾತಾಗಿರುವ ಆರ್‌ಕೆ ಸಹೋದರು ಇದೀಗ ನಗರದ ಗೀತಾಂಜಲಿ ಶಾಪರ್ ಸಿಟಿಯಲ್ಲಿರುವ ತಮ್ಮ ಗೀತಾಂಜಲಿ ಸಿಲ್ಕ್ಸ್‌ನಲ್ಲಿ ನೂತನವಾಗಿ ಆರಂಭಿಸಿರುವ ಪುರುಷರ ಪ್ರತ್ಯೇಕ ವಿಭಾಗವನ್ನು ಬುಧವಾರ ಗ್ರಾಹಕರಿಂದಲೇ ಉದ್ಘಾಟಿಸಲಾಯಿತು.

ಸಂಸ್ಥೆಯ ಗಣ್ಯ ಗ್ರಾಹಕರಲ್ಲೊಬ್ಬರಾದ ಉದ್ಯಮಿ ಡಾ.ಜಿ. ಶಂಕರ್ ಸಂದರ್ಭ ಮಾತನಾಡಿ, ಆರ್.ಕೆ. ಸಹೋದರರು ಸಣ್ಣ ಅಂಗಡಿಯ ಮೂಲಕ ಸತತ ಪರಿಶ್ರಮ, ಶ್ರದ್ಧೆಯಿಂದ ದುಡಿಯುತ್ತಾ, ಪ್ರಸ್ತುತ ಜಿಲ್ಲೆಯಲ್ಲಿಯೇ ಬೃಹತ್ ವಸ್ತ್ರ ವೈವಿಧ್ಯಗಳ ಮಳಿಗೆಯನ್ನು ತೆರೆಯುವ ಸಾಧನೆ ಮಾಡಿದ್ದಾರೆ. ಗ್ರಾಹಕರಿಗೆ ಉತ್ತಮ ಸೇವೆ, ಗುಣಮಟ್ಟದ ಉತ್ಪನ್ನಗಳನ್ನು ನೀಡಿದಾಗ ಉದ್ಯಮ ಶೀಘ್ರ ಅಭಿವೃದ್ಧಿ ಹೊಂದುತ್ತದೆ ಎಂಬುವುದಕ್ಕೆ ಗೀತಾಂಜಲಿ ಸಿಲ್ಕ್ಸ್ ಉತ್ತಮ ಉದಾಹರಣೆ ಎಂದು ಶುಭ ಹಾರೈಸಿದರು.ಮಾಂಡೋವಿ ಬಿಲ್ಡರ್ಸ್‌ನ ಡಾ. ಜೆರ್ರಿ ವಿನ್ಸೆಂಟ್ ಡಯಾಸ್ ಮಾತನಾಡಿ, ನಾಲ್ಕು ದಶಕಗಳ ಹಿಂದೆ ಗುಣಮಟ್ಟದ ವಸ್ತ್ರಗಳ ಖರೀದಿಗೆ ದೂರದ ಪಟ್ಟಣಗಳಿಗೆ ತೆರಳಬೇಕಿತ್ತು. ಪ್ರಸ್ತುತ ಗೀತಾಂಜಲಿ ಸಿಲ್ಕ್ಸ್‌ನಲ್ಲಿ ಉಡುಗೆ ತೊಡುಗೆಗಳು ಲಭ್ಯವಿದೆ. ಉಡುಪಿಯಲ್ಲಿ ಅಂತಹ ಸಂಸ್ಥೆಯೊಂದರ ಅಗತ್ಯವನ್ನು ಆರ್.ಕೆ. ಸಹೋದರರು ಪೂರೈಸಿದ್ದಾರೆ ಎಂದರು‌.ಸಂಸ್ಥೆಯ ಪ್ರಮುಖ ಗ್ರಾಹಕರಾದ ಡಾ.ರವಿರಾಜ್ ಆಚಾರ್ಯ, ಮೊಹಮ್ಮದ್ ಮೌಲ, ನಾರಾಯಣ ಸರಳಾಯ, ಶ್ರೀಶ ನಾಯಕ್, ಅಕ್ಷತಾ ಶೇರಿಗಾರ್, ಹಫೀಸ್ ರೆಹಮಾನ್, ಅಂಡಾರು ದೇವಿಪ್ರಸಾದ್ ಶೆಟ್ಟಿ ಮುಂತಾದವರು ಶುಭ ಹಾರೈಸಿದರು.ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಪುರುಷೋತ್ತಮ ಶೆಟ್ಟಿ, ಶಕುಂತಲಾ ಮಣಿಪಾಲ, ಧನರಾಜ್, ಅಮಿತಾ ವಾಸು, ಮಾಲತಿ ತೀರ್ಥಹಳ್ಳಿ, ಕಿಶನ್ ಪ್ರಭು ಪಳ್ಳಿ, ಪ್ರದೀಪ್ ನಾಯಕ್ ನೀರೆ, ಪ್ರಶಾಂತ್ ಅಂಬಲಪಾಡಿ, ಇಬ್ರಾಹಿಂ ಉಚ್ಚಿಲ, ಉಪೇಂದ್ರ ಶೆಣೈ ಮಣಿಪಾಲ, ರಘುರಾಮ ಪ್ರಭು ಎಣ್ಣೆಹೊಳೆ, ಜಯರಾಂ ಕಾರ್ಕಳ, ರತ್ನಾಕರ ಕಲ್ಯಾಣಿ ಪೆರ್ಡೂರು, ನಿತ್ಯಾನಂದ ನಾಯಕ್ ನರಸಿಂಗೆ ಉಪಸ್ಥಿತರಿದ್ದರು.

ಸಂಸ್ಥೆಯ ಪಾಲುದಾರರಾದ ಲಕ್ಷ್ಮಣ ನಾಯಕ್, ರಮೇಶ್ ನಾಯಕ್, ಹರೀಶ್ ನಾಯಕ್ ಅತಿಥಿಗಳನ್ನು ಬರ ಮಾಡಿಕೊಂಡರು. ಸಂತೋಷ್ ವಾಗ್ಲೆ ಸ್ವಾಗತಿಸಿದರು. ರಾಮಕೃಷ್ ನಾಯಕ್ ವಂದಿಸಿದರು. ನಿಖಿತಾ ಎರ್ಲಪಾಡಿ ನಿರೂಪಿಸಿದರು.

------------------ಕರಾವಳಿ ಕರ್ನಾಟಕದ ಅತೀ ದೊಡ್ಡ ಬಟ್ಟೆ ಮಾಲ್‌

ಕರಾವಳಿ ಕರ್ನಾಟಕದ ಅತೀ ವಿಶಾಲವಾದ ಗೀತಾಂಜಲಿ ಸಿಲ್ಕ್ಸ್ ಮಳಿಗೆಯಲ್ಲಿ ಈಗಾಗಲೇ ಮಹಿಳೆಯರ ಮತ್ತು ಮಕ್ಕಳ ಬಟ್ಟೆಗಳ ಪ್ರತ್ಯೇಕ ಮಹಡಿಗಳನ್ನು ಹೊಂದಿದ್ದು, ಇದೀಗ ಒಂದನೇ ಮಹಡಿಯಲ್ಲಿ 15 ಸಾವಿರ ಚದರಡಿ ವಿಸ್ತೀರ್ಣದ ಪುರುಷರ ಸ್ವದೇಶಿ ಮತ್ತು ವಿದೇಶದ 22ಕ್ಕೂ ಅಧಿಕ ಬ್ರ್ಯಾಂಡ್‌ಗಳ ಮಳಿಗೆ ಆರಂಭವಾಗಿದೆ.

ಮದುವೆ ಇತ್ಯಾದಿ ಧಾರ್ಮಿಕ ಸಮಾರಂಭಗಳಿಗೆ ಅಗತ್ಯವಿರುವ ಪಾರಂಪರಿಕ ಮತ್ತು ಆಧುನಿಕ ಶೈಲಿಯ ಬಟ್ಟೆಗಳು, ಆಫೀಸ್ ವೇರ್, ಡೈಲಿ ವೇರ್, ಕ್ಯಾಶುವಲ್ ವೇರ್, ಪಾರ್ಟಿ ವೇರ್ ಇತ್ಯಾದಿಗಳ ವಿಫುಲ ಸಂಗ್ರಹವಿದೆ. ಪೀಟರ್‌ ಇಂಗ್ಲೆಡ್, ಲಿನನ್ ಕ್ಲಬ್, ಕಿಲ್ಲರ್, ಫ್ಲೈಯಿಂಗ್ ಮೇಶಿನ್, ಅಲನ್ ಸೂಲಿ, ವ್ಯಾನ್ ಹುಸೇನ್, ಲೂಯಿಸ್ ಪಿಲಿಪ್, ಜಾನ್ ಪ್ಲೇಯರ್, ಲೆವಿಸ್ ಇತ್ಯಾದಿ ಬ್ರ್ಯಾಂಡ್ ಗಳ ಫಾರ್ಮಲ್, ಜೀನ್ಸ್ ಬಟ್ಟೆಗಳು ಲಭ್ಯ ಇವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ