ಉಡುಪಿ: ಆರೋಗ್ಯ ಸಂಪನ್ನ ಸಮಾಜ ಮತ್ತು ಸುರಕ್ಷಿತ ಭಾರತ ನಿರ್ಮಾಣದ ಪ್ರಾರ್ಥನೆಯೊಂದಿಗೆ ಸನಾತನ ಸಂಸ್ಥೆಯ ವತಿಯಿಂದ ನ. 29 ರಂದು ನಗರದ ಎಂ.ಜಿ.ಎಂ. ಮೈದಾನದಲ್ಲಿ ‘ಮಹಾಧನ್ವಂತರಿ ಯಾಗ’ದ ಆಯೋಜನೆಯಾಗಿದೆ.
ಸನಾತನ ಸಂಸ್ಥೆಯ 75ನೇ ಧರ್ಮಪ್ರಚಾರಕ ಸಂತರಾದ ರಮಾನಂದ ಗೌಡ, ಯಾಗದ ಸ್ವಾಗತ ಸಮಿತಿಯ ಅಧ್ಯಕ್ಷ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಮಾಜಿ ಶಾಸಕ ಕೆ. ರಘುಪತಿ ಭಟ್, ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಸಂಘಟನಾ ಕಾರ್ಯದರ್ಶಿ ವಿಜಯ್ ಕೊಡವೂರು ಹಾಗೂ ಆಯೋಜನ ಸಮಿತಿಯ ಗುರುಪ್ರಸಾದ್ ಗೌಡ ಪ್ರಚಾರ ಸಾಹಿತ್ಯಗಳನ್ನು ಬಿಡುಗಡೆ ಮಾಡಿದರು.
ಸಭೆಯಲ್ಲಿ ಯಾಗದ ಸ್ವಾಗತ ಸಮಿತಿಯ ರಚನೆ ಮತ್ತು ಪ್ರಚಾರದ ಬಗ್ಗೆ ಚರ್ಚೆಯಾಯಿತು. ಸಮಿತಿ ಸಂಘಟನಾ ಕಾರ್ಯದರ್ಶಿ ವಿಜಯ್ ಕೊಡವೂರು ಅವರು ಯಾಗದ ವಿವಿಧ ಕಾರ್ಯವಿಭಾಗಗಳ ಜವಾಬ್ದಾರಿಗಳನ್ನು ಘೋಷಿಸಿದರು.ಶಾಸಕ ಯಶ್‌ಪಾಲ್ ಸುವರ್ಣರು, ಈ ಯಾಗವು ನಾಡಿಗೆ ಆರೋಗ್ಯ, ಶಾಂತಿ ಮತ್ತು ಸಾತ್ತ್ವಿಕತೆಯನ್ನು ಕರುಣಿಸುವ ದಿವ್ಯ ಕಾರ್ಯಕ್ರಮವಾಗಿದ್ದು, ಸಮಾಜದ ಸರ್ವ ಧರ್ಮಪ್ರೇಮಿಗಳೂ ಒಗ್ಗಟ್ಟಿನಿಂದ ಶ್ರಮಿಸಿ ಯಾಗವನ್ನು ವಿಜೃಂಭಣೆಯಿಂದ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.