ಉಡುಪಿ: ಫಿನಾಯಿಲ್‌ ಮಾರಾಟ ಮಾಡಿ ವೃದ್ಧ ದಂಪತಿಗೆ ಸಹಾಯ

KannadaprabhaNewsNetwork |  
Published : Dec 02, 2024, 01:18 AM IST
01ಹೋಮ್‌ | Kannada Prabha

ಸಾರಾಂಶ

ಗುರುಪುರದ ವೃದ್ಧ ದಂಪತಿಗಳಾದ ಶಿವಾನಂದ ಮತ್ತು ಪಾರ್ವತಿ ಕಳೆದ 40 ವರ್ಷಗಳಿಂದ ಫಿನೈಲ್ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಅವರ ಕಷ್ಟಕ್ಕೆ ನೆರವಾಗುವ ಉದ್ದೇಶದಿಂದ ಈ ಅಭಿಯಾನ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಹೋಂ ಡಾಕ್ಟರ್ ಫೌಂಡೇಶನ್ ವತಿಯಿಂದ ಅಂಬಿಗ ನಾ ನಿನ್ನ ನಂಬಿದೆ ಎಂಬ ವಿನೂತನ ಅಭಿಯಾನ ಅಂಗವಾಗಿ ಗುರುಪುರದ ಬಡ ವೃದ್ಧ ದಂಪತಿಗಳು ತಯಾರಿಸುವ ಫಿನೈಲ್ ಮಾರಾಟ ಮಾಡಿ, ಬಂದ ಹಣವನ್ನು ಅವರಿಗೆ ನೀಡುವ ಕಾರ್ಯಕ್ರಮ ಅಜ್ಜರಕಾಡು ಎಲ್ಐಸಿ ಕಚೇರಿಯ ಹತ್ತಿರ ನ.30ರಂದು ನಡೆಯಿತು.

ಗುರುಪುರದ ವೃದ್ಧ ದಂಪತಿಗಳಾದ ಶಿವಾನಂದ ಮತ್ತು ಪಾರ್ವತಿ ಕಳೆದ 40 ವರ್ಷಗಳಿಂದ ಫಿನೈಲ್ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಅವರ ಕಷ್ಟಕ್ಕೆ ನೆರವಾಗುವ ಉದ್ದೇಶದಿಂದ ಈ ಅಭಿಯಾನ ನಡೆಯಿತು.ಈ ಸಂದರ್ಭ ಹೋಂ ಡಾಕ್ಟರ ಫೌಂಡೇಶನ್ ಮುಖ್ಯಸ್ಥರಾದ ಡಾ. ಶಶಿಕಿರಣ್ ಶೆಟ್ಟಿ, ಡಾ. ಸುಮಾ ಶೆಟ್ಟಿ, ಸುಂದರ ಪೂಜಾರಿ, ಉದಯ ನಾಯ್ಕ್, ಸುಜಯ, ರಾಘವೇಂದ್ರ ಪ್ರಭು ಕರ್ವಾಲು, ಜನಾರ್ದನ್ ಕೊಡವೂರು, ಸುಂದರ ಶೆಟ್ಟಿ, ಶಶಿಕಲಾ ಶೆಟ್ಟಿ, ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಥಮ ಎಂ.ಎಸ್.ಡಬ್ಲ್ಯೂ ವಿಭಾಗದ ವಿದ್ಯಾರ್ಥಿಗಳಾದ ಗಿರೀಶ್, ಪ್ರೇಮ್ ಸಾಯಿ, ಅಕ್ಷಯ, ಗೌತಮಿ, ದಾಕ್ಷಾಯಿಣಿ, ಅಂಕಿತಾ, ಅಕ್ಷಯ ಬಿ.ಆರ್., ದನುಷ, ಪ್ರಿಯಾ ಮುಂತಾದವರಿದ್ದರು.ವಿದ್ಯಾರ್ಥಿಗಳು ಫಿನೈಲ್ ಮಾರಾಟ ಮಾಡಿ ಸಂಗ್ರಹಿಸಿದ ಒಂದು ಲಕ್ಷ ರು. ದಂಪತಿಗಳ ಜೀವನ ನಿರ್ವಹಣೆಗೆ ಹಸ್ತಾಂತರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೊಳೆನರಸೀಪುರದಲ್ಲಿ ಯುಗಾದಿ ಹಬ್ಬದ ವ್ಯಾಪಾರ ಬಲು ಜೋರು
ಅವಧಿ ಮುಗಿದ ಅಹಾರ ಸರಬರಾಜು: ಬ್ಲಿಂಕ್‌ಇಟ್ ಗೋದಾಮಿಗೆ ದಾಳಿ