ಬೆಂಗಳೂರು : ಮೆಟ್ರೋ ಪ್ರಯಾಣದ ವೇಳೆ ಸಾರ್ವಜನಿಕರಿಗೆ 5ಜಿ ಮೊಬೈಲ್‌ ನೆಟ್‌ವರ್ಕ್‌ ಸೌಲಭ್ಯ

KannadaprabhaNewsNetwork |  
Published : Dec 02, 2024, 01:18 AM ISTUpdated : Dec 02, 2024, 08:18 AM IST
ನೆಟ್‌ವರ್ಕ್‌ | Kannada Prabha

ಸಾರಾಂಶ

ಮೆಟ್ರೋ ಪ್ರಯಾಣದ ವೇಳೆ ಸಾರ್ವಜನಿಕರಿಗೆ 5ಜಿ ಮೊಬೈಲ್‌ ನೆಟ್‌ವರ್ಕ್‌ ಸೌಲಭ್ಯ ಒದಗಿಸುವುದು ಹಾಗೂ ತನ್ನ ಆದಾಯ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ‘ನಮ್ಮ ಮೆಟ್ರೋ’ ಪಿಲ್ಲರ್‌ಗಳಲ್ಲಿ ನೆಟ್‌ವರ್ಕ್‌ ಸೆಲ್‌ ಅಳವಡಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ಮುಂದಾಗಿದೆ.

 ಬೆಂಗಳೂರು : ಮೆಟ್ರೋ ಪ್ರಯಾಣದ ವೇಳೆ ಸಾರ್ವಜನಿಕರಿಗೆ 5ಜಿ ಮೊಬೈಲ್‌ ನೆಟ್‌ವರ್ಕ್‌ ಸೌಲಭ್ಯ ಒದಗಿಸುವುದು ಹಾಗೂ ತನ್ನ ಆದಾಯ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ‘ನಮ್ಮ ಮೆಟ್ರೋ’ ಪಿಲ್ಲರ್‌ಗಳಲ್ಲಿ ನೆಟ್‌ವರ್ಕ್‌ ಸೆಲ್‌ ಅಳವಡಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ಮುಂದಾಗಿದೆ.

ಮೆಟ್ರೋ ಸಂಚಾರದ ವೇಳೆ ಪ್ರಯಾಣಿಕರಿಗೆ ಕೆಲವೆಡೆ ಕಚೇರಿ ಕೆಲಸ ಮಾಡಲು, ಮಾತನಾಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ನೆಟ್‌ವರ್ಕ್‌ ಸಮಸ್ಯೆ ಪರಿಹರಿಸಲು ಬಿಎಂಆರ್‌ಸಿಎಲ್‌ ನಿರ್ಧರಿಸಿದೆ. ಜತೆಗೆ ನೆಟ್‌ವರ್ಕ್‌ ಸೆಲ್‌ಗಳ ಅಳವಡಿಕೆ ಮೂಲಕವೂ ಟೆಲಿಕಾಂ ಕಂಪನಿಗಳಿಂದ ಬಾಡಿಗೆ ಪಡೆದು ಆದಾಯ ಗಳಿಸಿಕೊಳ್ಳಲು ಮುಂದಾಗಿದೆ.

ವೈಟ್‌ಫೀಲ್ಡ್ ಮೆಟ್ರೋ ನಿಲ್ದಾಣದಿಂದ ಪ್ರಾರಂಭವಾಗಿ ಚಲ್ಲಘಟ್ಟ ಟರ್ಮಿನಲ್‌ವರೆಗೆ (43.49 ಕಿ.ಮೀ.) ಹಾಗೂ ಉತ್ತರ-ದಕ್ಷಿಣ ಕಾರಿಡಾರ್ ಮಾದಾವರದಲ್ಲಿ ಪ್ರಾರಂಭವಾಗಿ ಸಿಲ್ಕ್ ಇನ್‌ಸ್ಟಿಟ್ಯೂಟ್‌ವರೆಗೆ (33.5 ಕಿ.ಮೀ.) ಮತ್ತು ಎಲೆಕ್ಟ್ರಾನಿಕ್‌ ಸಿಟಿ ಮಾರ್ಗ ಆರ್‌.ವಿ.ರಸ್ತೆ - ಬೊಮ್ಮನಹಳ್ಳಿ ಹಾಗೂ ಗೊಟ್ಟಿಗೆರೆ - ನಾಗವಾರ ಮಾರ್ಗದಲ್ಲಿ ಪಿಲ್ಲರ್‌ಗಳಲ್ಲಿ ನೆಟ್‌ವರ್ಕ್‌ ಸೆಲ್‌ ಅಳವಡಿಕೆಗೆ ಟೆಂಡರ್‌ ಕರೆಯಲಾಗಿದೆ.

ಈ ಮಾರ್ಗದಲ್ಲಿ ಎತ್ತರಿಸಿದ ಮಾರ್ಗದಲ್ಲಿ ಮಾರ್ಗ 5ಜಿ ಸ್ಮಾಲ್‌ ಸೆಲ್‌ಗಳ ಉಪಕರಣಗಳನ್ನು ಅಳವಡಿಸುವಂತೆ ಟೆಲಿಕಾಂ ಕಂಪನಿಗಳನ್ನು ಬಿಎಂಆರ್‌ಸಿಎಲ್‌ ಆಹ್ವಾನಿಸಿದೆ. ಈ ಸೆಲ್‌ಗಳು ಮೆಟ್ರೋ ಕಾರಿಡಾರ್‌ ಹಾಗೂ ಸುತ್ತಮುತ್ತ ಸೀಮಿತ ಪ್ರದೇಶದಲ್ಲಿ ನೆಟ್‌ವರ್ಕ್‌ ಅನ್ನು ಪೂರೈಸಲಿದೆ.

ಭಾರತೀಯ ದೂರಸಂಪರ್ಕ ನಿಯಂತ್ರಣಾ ಪ್ರಾಧಿಕಾರವು (ಟ್ರಾಯ್‌) 2022ರಲ್ಲಿ ಭಾರತದಲ್ಲಿ ಮೊಟ್ಟಮೊದಲು ನಮ್ಮ ಮೆಟ್ರೋದಲ್ಲಿ ಪ್ರಾಯೋಗಿಕವಾಗಿ 5ಜಿ ನೆಟ್‌ವರ್ಕ್‌ಅನ್ನು ಅಳವಡಿಸಿ ಪರೀಕ್ಷಿಸಿತ್ತು. ರಿಲಯನ್ಸ್‌ ಜಿಯೋ ಟೆಲಿಕಾಂ ಕಂಪನಿಯು ಮಹಾತ್ಮ ಗಾಂಧಿ ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಆ್ಯಂಟೆನಾ ಇಟ್ಟು ಹೊರಾಂಗಣದಲ್ಲಿ ಪುಟ್ಟ ಸೆಲ್‌ಗಳನ್ನು ಅಳವಡಿಸಿ ಈ ಪ್ರಯೋಗ ಮಾಡಿತ್ತು. ಎಂ.ಜಿ.ರೋಡ್‌ ಮೆಟ್ರೋ ನಿಲ್ದಾಣದಿಂದ ಹಲಸೂರು ಮೆಟ್ರೋ ಸ್ಟೇಷನ್‌ವರೆಗೆ 2 ಕಿ.ಮೀ. ವ್ಯಾಪ್ತಿಯಲ್ಲಿ 5ಜಿ ಪ್ರಯೋಗಕ್ಕೆ ಗುರುತಿಸಲಾಗಿತ್ತು. ಇದು 200 ಮೀಟರ್‌ ವ್ಯಾಪ್ತಿಯ ಸಿಗ್ನಲ್‌ ಸಾಮರ್ಥ್ಯ ಹೊಂದಿತ್ತು. ಡೌನ್‌ಲೋಡ್‌ 1.45 ಜಿಬಿಪಿಎಸ್‌ ವೇಗ ಹಾಗೂ ಅಪ್‌ಲೋಡ್‌ 65 ಎಂಬಿಪಿಎಸ್ ವೇಗದಲ್ಲಿ ಇದು ಕಾರ್ಯಾಚರಣೆ ಆಗಿತ್ತು. 4ಜಿ ನೆಟ್‌ವರ್ಕ್‌ಗಿಂತ ಸಾಕಷ್ಟು ವೇಗದ ಸಾಮರ್ಥ್ಯವನ್ನು ಹೊಂದಿತ್ತು.

ಪ್ರಸ್ತುತ ಟೆಲಿಕಾಂ ಕಂಪನಿಗಳು ಮೆಟ್ರೋ ಪಿಲ್ಲರ್‌ಗಳ ಸರ್ವೆ ನಡೆಸಿ 5ಜಿ ಸೆಲ್‌ಗಳನ್ನು ಅಗತ್ಯಕ್ಕೆ ತಕ್ಕಂತೆ ಅಳವಡಿಕೆ ಮಾಡಬಹುದು. ಇದರಿಂದ ಮೆಟ್ರೋಗೂ ಬಾಡಿಗೆ ಆದಾಯ ಬರಲಿದೆ. ಕಂಪನಿಗಳಿಗೂ ಹೆಚ್ಚು ಗ್ರಾಹಕರು ಲಭ್ಯರಾಗಲಿದ್ದಾರೆ. ಪ್ರಯಾಣಿಕರಿಗೂ ಅನುಕೂಲವಾಗಲಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!