ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಬುಧವಾರ ಹಮ್ಮಿಕೊಳ್ಳಲಾದ ಹಸಿವು ಮುಕ್ತ ದಿನಾಚರಣೆಯನ್ನು ನಗರಸಭೆ ಉಪಾಧ್ಯಕ್ಷೆ ರಜನಿ ಹೆಬ್ಬಾರ್ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಬುಧವಾರ ಹಮ್ಮಿಕೊಳ್ಳಲಾದ ಹಸಿವು ಮುಕ್ತ ದಿನಾಚರಣೆಯನ್ನು ನಗರಸಭೆ ಉಪಾಧ್ಯಕ್ಷೆ ರಜನಿ ಹೆಬ್ಬಾರ್ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು, ಇಂದು ಲಕ್ಷಾಂತರ ಜನ ಒಂದು ಹೊತ್ತು ಊಟಕ್ಕಿಲ್ಲದವರು ನಮ್ಮ ದೇಶದಲ್ಲಿ ಇದ್ದಾರೆ. ಇಂತಹವರ ಹಸಿವು ನೀಗಿಸುವುದು ಬಹಳ ದೊಡ್ಡ ಪುಣ್ಯದ ಕೆಲಸ. ಅಂತಹ ಸಮಾಜಮುಖಿ ಕಾರ್ಯವನ್ನು ಮಲಬಾರ್ ಗೋಲ್ಡ್ ಮಾಡುತ್ತಿರುವುದು ಮಾದರಿ ಎನಿಸಿದೆ ಎಂದು ಹೇಳಿದರು.ಮುಖ್ಯ ಅತಿಥಿಗಳಾಗಿ ಕರ್ನಾಟಕ ಸೋಪ್ ಮತ್ತು ಮಾರ್ಜಕ ಮಾಜಿ ಅಧ್ಯಕ್ಷರಾದ ವೆರೇನಿಕ ಕರ್ನಾಲಿನೋ, ಉಡುಪಿ ಪತ್ರಕರ್ತ ಸಂಘದ ಅಧ್ಯಕ್ಷರಾದ ರಾಜೇಶ್ ಶೆಟ್ಟಿ, ನಾಗರಿಕ ಸೇವಾ ಸಮಿತಿ ಅಧ್ಯಕ್ಷರಾದ ನಿತ್ಯಾನಂದ ಒಳಕಾಡು, ಸಾಮಾಜಿಕ ಸೇವಕರಾದ ಝಹೀರ್ ಅಹ್ಮದ್ ಬೆಳಪು ಮಾತನಾಡಿದರು. ಮಲಬಾರ್ ಗೋಲ್ಡ್ ಉಡುಪಿ ಶಾಖಾ ಮುಖ್ಯಸ್ಥರಾದ ಹಫೀಝ್ ರೆಹಮಾನ್ ಪ್ರಸ್ತಾವಿಕವಾಗಿ ಮಾತನಾಡಿ ಮಲಬಾರ್ ಚಾರಿಟೇಬಲ್ ಟ್ರಸ್ಟ್ ನ ಸಾಮಾಜ ಕಾರ್ಯವನ್ನು ವಿವರಿಸಿದರು. ವಿದ್ಯಾ ಸರಸ್ವತಿ ಅವರು ಹಸಿವಿನ ಬಗ್ಗೆ ಪೂರಕವಾಗಿ ಮಾತನಾಡಿದರು. ಆಹಾರ ಪೊಟ್ಟಣಗಳನ್ನು ದಾನವಾಗಿ ನೀಡಿದ ದಾನಿಗಳಿಗೆ ಗುರುತಿಸಿ ಸನ್ಮಾನಿಸಲಾಯಿತು.ಶಾಖಾ ವ್ಯವಸ್ಥಾಪಕ ಮುಸ್ತಫಾ, ಗುರುರಾಜ್, ಸಂದೀಪ್ ಸಪಾಳ್ಯ ಮಾರುಕಟ್ಟೆ ವ್ಯವಸ್ಥಾಪಕ ತಂಝಿಮ್ ಶಿರ್ವ ಉಪಸ್ಥಿತರಿದ್ದರು, ವಿಘ್ನೇಶ್ ಸ್ವಾಗತಿಸಿ, ದಯಾನಂದ್ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.