ಉಡುಪಿ: ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ (ಐಸಿಎಐ) ಯ ಆಡಿಟಿಂಗ್ ಮತ್ತು ಅಶ್ಯೂರೆನ್ಸ್ ಸ್ಟ್ಯಾಂಡರ್ಡ್ಸ್ ಬೋರ್ಡ್ ಅವರ ಆಶ್ರಯದಲ್ಲಿ, ಐಸಿಎಐ ಉಡುಪಿ ಶಾಖೆ (ಎಸ್‌ಐಆರ್‌ಸಿ) ಯಿಂದ ಡಿ.19 ಮತ್ತು 20, 2025 ರಂದು ಓಷನ್ ಪಿಯರ್ - ಟೈಮ್ ಸ್ಕ್ವೇರ್, ಉಡುಪಿ ಯಲ್ಲಿ ‘ಸ್ಟ್ಯಾಂಡರ್ಡ್ಸ್ ಆನ್ ಆಡಿಟಿಂಗ್’ ಕುರಿತ ಎರಡು ದಿನಗಳ ರಿಫ್ರೆಶರ್ ಕೋರ್ಸ್ ಯಶಸ್ವಿಯಾಗಿ ಆಯೋಜಿಸಲಾಯಿತು.ಕಾರ್ಯಕ್ರಮವು ಎಲ್ಲಾ ಪ್ರಮುಖ ಆಡಿಟಿಂಗ್ ಸ್ಟ್ಯಾಂಡರ್ಡ್ಸ್ ಗಳನ್ನು ಒಳಗೊಂಡ 100 ಕಿರು ಪ್ರಕರಣ ಅಧ್ಯಯನಗಳ ಮೂಲಕ ಪ್ರಾಯೋಗಿಕ ಅರಿವಿಗೆ ಒತ್ತು ನೀಡಿತು. ಪಾಲ್ಗೊಂಡ ಸದಸ್ಯರು 12 ಸಂರಚಿತ ಸಿಪಿಇ ಗಂಟೆಗಳನ್ನು ಗಳಿಸಿದರು.
ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಆಡಿಟಿಂಗ್ ಮತ್ತು ಅಶ್ಯೂರೆನ್ಸ್ ಸ್ಟ್ಯಾಂಡರ್ಡ್ಸ್ ಬೋರ್ಡ್, ಸಂಪನ್ಮೂಲ ವ್ಯಕ್ತಿಗಳು ಹಾಗೂ ಪಾಲ್ಗೊಂಡ ಎಲ್ಲಾ ಸದಸ್ಯರಿಗೆ ಐಸಿಎಐ ಉಡುಪಿ ಶಾಖೆ ಕೃತಜ್ಞತೆ ಸಲ್ಲಿಸಿದೆ.