ನೂತನ ವರ್ಷದ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಎ. ಮಧ್ವರಾಜ ಬಲ್ಲಾಳ್, ಉಪಾಧ್ಯಕ್ಷರಾಗಿ ತಿಮ್ಮಪ್ಪ ಮತ್ತು ಬಿ.ಎನ್. ದೇವಾಡಿಗ, ಪ್ರಧಾನ ಕಾರ್ಯದರ್ಶಿಯಾಗಿ ವಿಠಲ್‌ಮೂರ್ತಿ ಆಚಾರ್ಯ ಆಯ್ಕೆಯಾದರು.
ಕನ್ನಡಪ್ರಭ ವಾರ್ತೆ ಉಡುಪಿ
ವಿಮಾ ಪಿಂಚಣಿದಾರರ ಸಂಘದ ಉಡುಪಿ ವಿಭಾಗದ ೨೬ನೇ ವಾರ್ಷಿಕ ಮಹಾಧಿವೇಶನವು ನಗರದ ಲಿಕೋ ಬ್ಯಾಂಕ್ ಇದರ ವಜ್ರ ಮಹೋತ್ಸವ ಸಭಾಂಗಣದಲ್ಲಿ ಜರುಗಿತು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎ. ಮಧ್ವರಾಜ ಬಲ್ಲಾಳ ವಹಿಸಿದ್ದರು.ಸಂಘದ ಪ್ರಧಾನ ಕಾರ್ಯದರ್ಶಿ ವಿಠಲಮೂರ್ತಿ ಆಚಾರ್ಯ, ಕಳೆದ ೨೫ನೇ ಸಾಲಿನ ವರದಿಯನ್ನು ಸಭೆಯ ಮುಂದೆ ಮಂಡಿಸಿದರು. ವರದಿಯು ಸಭೆಯಲ್ಲಿ ಚರ್ಚಿಸಲ್ಪಟ್ಟು ನಂತರ ಸಂಘದ ಸರ್ವ ಸದಸ್ಯರಿಂದ ಸರ್ವಾನುಮತದಿಂದ ಅಂಗೀಕಾರವಾಯಿತು.ಸಂಘ ಅಧ್ಯಕ್ಷ ವಿಶ್ವನಾಥ್ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಹೊಸ ಪಿಂಚಣಿ ಯೋಜನೆಯ ನ್ಯೂನತೆಗಳನ್ನು ಪ್ರಸ್ತಾಪಿಸಿ, ಹಳೆಯ ಪಿಂಚಣಿ ಯೋಜನೆಯನ್ನು ಮರಳಿ ಜಾರಿಗೊಳಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ಚಳುವಳಿಗಳಲ್ಲಿ ಎಲ್ಲರೂ ಸಕ್ರಿಯರಾಗಿ ಭಾಗವಹಿಸುವಂತೆ ಪಿಂಚಣಿದಾರರಿಗೆ ಕರೆ ಕೊಟ್ಟರು.ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಕುಂದರ್ ಅವರು ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಆಡಳಿತ ವರ್ಗದೊಂದಿಗೆ ನಡೆಯುತ್ತಿರವ ವೇತನ ಪರಿಷ್ಕರಣದ ಮಾತುಕತೆಗಳಲ್ಲಿ ಪಿಂಚಣಿದಾರರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಎ.ಐ.ಐ.ಇ.ಎ. ಯು ಪ್ರಾಶಸ್ತ್ಯವೀಯುತ್ತದೆ ಎಂದು ಭರವಸೆಯಿತ್ತರು.ಸಂಘ ಅಧ್ಯಕ್ಷ ಎ.ಮಧ್ವರಾಜ ಬಲ್ಲಾಳ, ಗ್ರೂಪ್ ಮೆಡಿಕ್ಲೈಮ್ ಯೋಜನೆಯ ಹಲವಾರು ಉಪಯುಕ್ತ ಮಾಹಿತಿಗಳನ್ನು ಹಂಚಿಕೊಂಡರು.ನಂತರ ನೂತನ ವರ್ಷದ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಎ. ಮಧ್ವರಾಜ ಬಲ್ಲಾಳ್, ಉಪಾಧ್ಯಕ್ಷರಾಗಿ ತಿಮ್ಮಪ್ಪ ಮತ್ತು ಬಿ.ಎನ್. ದೇವಾಡಿಗ, ಪ್ರಧಾನ ಕಾರ್ಯದರ್ಶಿಯಾಗಿ ವಿಠಲ್‌ಮೂರ್ತಿ ಆಚಾರ್ಯ, ಜೊತೆ ಕಾರ್ಯದರ್ಶಿಯಾಗಿ ಶ್ರೀಪತಿ ಉಪಾಧ್ಯ ಮತ್ತು ಖಜಾಂಚಿಯಾಗಿ ದೇವಣ್ಣ ನಾಯಕ್ ಅವರು ಆಯ್ಕೆಯಾದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.