ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಖಾತರಿ ಕೋಶವು ಪದವಿ ವಿದ್ಯಾರ್ಥಿಗಳಿಗಾಗಿ ಶನಿವಾರ ಆಯೋಜಿಸಿದ್ದ ಇಂಟರ್ನ್ ಶಿಪ್ ಮತ್ತು ತರಬೇತಿ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಮತ್ತು ಉದ್ಯೋಗಕ್ಕೆ ಸಂಬಂಧಿಸಿದಂತೆ ಪ್ರಪಂಚದ ಇಂದಿನ ದೃಷ್ಟಿಕೋನ ಬದಲಾಗಿದೆ. ಅದಕ್ಕೆ ತಕ್ಕಂತೆ ನಿಮ್ಮಲ್ಲಿ ಸೂಕ್ಷ್ಮ ಗ್ರಹಿಕೆಗಳು ಇರಬೇಕು. ಗುರಿಯನ್ನು ಇಟ್ಟುಕೊಳ್ಳಿ. ಆ ಗುರಿಯನ್ನು ತಲುಪಲು ಸದಾ ಪ್ರಯತ್ನ ನಡೆಸಿ. ಮಧ್ಯಮ ವರ್ಗದಿಂದ ಬಂದವರು ದೊಡ್ಡ ಕನಸುಗಳನ್ನು ಕಾಣಬೇಕು. ಕನಸುಗಳನ್ನು ಈಡೇರಿಸಿಕೊಳ್ಳಲು ಶ್ರಮ ವಹಿಸಬೇಕು. ಆ ಮೂಲಕ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಿಮ್ಮ ಸ್ಥಾನವನ್ನು ಕಂಡುಕೊಳ್ಳಿ ಎಂದು ಅವರು ಹೇಳಿದರು.ಮೈಸೂರು ವಿವಿ ಕಾಲೇಜು ಅಭಿವೃದ್ಧಿ ಮಂಡಳಿಯ ನಿರ್ದೇಶಕ ಪ್ರೊ.ಡಿ. ಆನಂದ್ ಮಾತನಾಡಿ, ಇದುವರೆಗೆ ಇಂಟರ್ನ್ ಶಿಪ್ ಎಂಬುದು ಕೇವಲ ಕೆಲವೇ ಅಧ್ಯಯನ ಶಿಸ್ತುಗಳಿಗೆ ಮಾತ್ರ ಸೀಮಿತವಾಗಿತ್ತು. ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಇದನ್ನು ಎಲ್ಲಾ ಅಧ್ಯಯನ ಶಿಸ್ತುಗಳಿಗೂ ಅಳವಡಿಸಲಾಗಿದೆ. ಇಂಟರ್ನ್ ಶಿಪ್ ಅನ್ನು ಹೇಗೆ ನಡೆಸಿಕೊಂಡು ಹೋಗಬಹುದೆಂಬುದಕ್ಕೆ ಕಾಲೇಜಿನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ಮಾದರಿಯಾಗಿದೆ ಎಂದರು.
ಮೈಸೂರಿನ ಪ್ರೊಸೆಟ್ಟ ಬಯೋಕನ್ಫಾಮ್ಯಾಟಿಕ್ಸ್ ಸಿಇಒ ಡಾ.ಎಂ. ಧರ್ಮಪ್ರಸಾದ್ ಮಾತನಾಡಿ, ಇಂದು ಸಾಧನೆಗೆ ತಾಂತ್ರಿಕ ಕೌಶಲ್ಯ ಮತ್ತು ಮೃದು ಕೌಶಲ್ಯ ಎರಡೂ ಮುಖ್ಯವಾಗಿವೆ. ಸಂವಹನ, ನಾಯಕತ್ವ ಗುಣ ಮೊದಲಾದವುಗಳನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ ಮಾತನಾಡಿ, ಉದ್ಯೋಗ ಇಲ್ಲದವರನ್ನು ಯಾರೂ ಗುರುತಿಸುವುದಿಲ್ಲ. ಇಂದು ಜೀವನದಲ್ಲಿ ಯಶಸ್ಸು ಕಾಣಲು ಉದ್ಯೋಗದ ಅವಶ್ಯಕತೆ ಇದೆ. ಉತ್ತಮ ಉದ್ಯೋಗ ಬೇಕಾದರೆ ಉತ್ತಮ ಶಿಕ್ಷಣವನ್ನು ಪಡೆಯಬೇಕು. ಅದಕ್ಕಾಗಿ ನಿಮ್ಮನ್ನು ಸಜ್ಜುಗೊಳಿಸಲು ಇಂಟರ್ನ್ ಶಿಪ್ ನಂತಹ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲೆ ಡಾ.ಎಸ್. ಪ್ರತಿಭಾ ಸ್ವಾಗತಿಸಿದರು. ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕ ಡಾ.ಎನ್. ರಾಜೇಂದ್ರಪ್ರಸಾದ್ ವಂದಿಸಿದರು. ಎಚ್.ಆರ್. ಪೂಜಾ ಪ್ರಾರ್ಥಿಸಿದರು. ಸಹಾಯಕ ಪ್ರಧ್ಯಾಪಕಿ ಡಾ.ಎಂ. ರಮ್ಯಶ್ರೀ ನಿರೂಪಿಸಿದರು.