ಉಡುಪಿ: ಗೀತಾಮಂದಿರದಲ್ಲಿ ಹಲಸು, ಮಾವು ಮೇಳಕ್ಕೆ ಚಾಲನೆ

KannadaprabhaNewsNetwork |  
Published : Jun 17, 2025, 03:44 AM IST
13ಮೇಳ | Kannada Prabha

ಸಾರಾಂಶ

ಉಡುಪಿ ಕೃಷ್ಣಮಠದ ಬಳಿ ಇರುವ ಗೀತಾ ಮಂದಿರದಲ್ಲಿ ಹಲಸು-ಮಾವು ಮೇಳ ನಡೆಯಿತು. ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಶುಕ್ರವಾರ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಕೃಷ್ಣಮಠದ ಬಳಿ ಇರುವ ಗೀತಾ ಮಂದಿರದಲ್ಲಿ ಹಲಸು-ಮಾವು ಮೇಳಕ್ಕೆ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಶುಕ್ರವಾರ ಚಾಲನೆ ನೀಡಿದರು.ಈ ಸಂದರ್ಭ ಸಂದೇಶ ನೀಡಿದ ಶ್ರೀಗಳು, ಭಗವದ್ ಗೀತೆಯಲ್ಲಿ ಪತ್ರಂ ಪುಷ್ಪಂ ಫಲಂ ತೋಯಂ ಎಂದು ಹೇಳಿ ಯಾವುದೇ ಫಲವನ್ನು ನೀಡಿದರೂ ನಾನು ಸಂತೋಷಗೊಳ್ಳುತ್ತೇನೆ ಎಂದು ಭಗವಾನ್ ಶ್ರೀಕೃಷ್ಣ ತಿಳಿಸಿದಂತೆ, ಕರಾವಳಿಯ ಭಾಗದಲ್ಲಿ ಹೇರಳವಾಗಿ ದೊರೆಯುವ ಹಲಸು, ಮಾವುಗಳ ವೈವಿಧ್ಯವನ್ನು, ಖಾದ್ಯಗಳನ್ನು ಈ ಮೇಳದಲ್ಲಿ ಪ್ರದರ್ಶಿಸುತ್ತಿದ್ದಾರೆ. ಜನರು ಶ್ರೀ ಕೃಷ್ಣನನ್ನು ಸ್ಮರಿಸಿ ಈ ಮೇಳದ ಪ್ರಯೋಜನವನ್ನು ಗೀತಾ ಮಂದಿರದಲ್ಲಿ ಪಡೆದುಕೊಳ್ಳಬಹುದು. ತನ್ಮೂಲಕ ಕೃಷ್ಣನಿಗೆ ಕರ್ಮ ಫಲದ ಸಮರ್ಪಣೆಯಾಗುವುದು ಎಂದು ಹರಸಿ ಬೆಳೆಗಾರರನ್ನು ಪ್ರೋತ್ಸಾಹಿಸಿ ಎಂದು ಕರೆಯಿತ್ತರು.ಪುತ್ತಿಗೆ ಮಠದ ಕಿರಿಯ ಪಟ್ಟ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಭವಾನಿ ಗ್ರೂಪ್ಸ್ ಮಾಲಕ ಕುಸುಮೋದರ ಶೆಟ್ಟಿ ಆಗಮಿಸಿದ್ದರು. ಭಾರತ್ ಮೇಳದ ಸಂಚಾಲಕ ರಮಣಾಚಾರ್ಯ ಸ್ವಾಗತಿಸಿ, ವಂದಿಸಿದರು.ಪುತ್ತಿಗೆ ಮಠದ ದಿವಾನರಾದ ನಾಗರಾಜಾಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯ, ರತೀಶ್ ತಂತ್ರಿ, ಅನಂತ ಕೃಷ್ಣ, ರಮೇಶ್ ಭಟ್, ಪ್ರಮೋದ್ ಸಾಗರ್ ಮುಂತಾದವರು ಉಪಸ್ಥಿತರಿದ್ದರು.ಈ ಹಲಸು ಮೇಳವು ಗೀತಮಂದಿರದಲ್ಲಿ ಬೆಳಗ್ಗೆ ೮ ರಿಂದ ಸಂಜೆ ೮ರ ವರೆಗೆ ಸಾರ್ವಜನಿಕರಿಗಾಗಿ ತೆರೆದಿರುವುದು ಎಂದು ಸಂಚಾಲಕ ರಮಣಾಚಾರ್ಯ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ