ಉಡುಪಿ: ಎನ್‌ಸಿಸಿಯಿಂದ ಸಾಗರ ನೌಕಾಯಾನ ಶಿಬಿರ

KannadaprabhaNewsNetwork |  
Published : Oct 05, 2025, 01:01 AM IST
04ಎನ್‌ಸಿಸಿಮಲ್ಪೆ ಸಮುದ್ರ ತೀರದಲ್ಲಿ ಎನ್‌ಸಿಸಿಯಿಂದ ಸ್ವಚ್ಛತಾ ಕಾರ್ಯಕ್ರಮ  | Kannada Prabha

ಸಾರಾಂಶ

ಈ ಸಾಗರ ನೌಕಾಯಾನ ಸಾಹಸಯಾತ್ರೆಯಲ್ಲಿ ಕರ್ನಾಟಕ ಮತ್ತು ಗೋವಾದ 72 ಎನ್‌ಸಿಸಿ ಕೆಡೆಟ್‌ಗಳು ನಗರದ ಶಾರದಾ ವಸತಿ ಶಾಲೆಯ ಪರಿಸರ ಮತ್ತು ಮಲ್ಪೆ ಬೀಚಿನಲ್ಲಿ ಶ್ರಮದಾನದ ಮೂಲಕ ಸ್ವಚ್ಛತಾ ಚಟುವಟಿಕೆಗಳನ್ನು ಕೈಗೊಂಡರು.

ಕನ್ನಡಪ್ರಭ ವಾರ್ತೆ ಉಡುಪಿ ಕರ್ನಾಟಕ ಮತ್ತು ಗೋವಾದ ನೌಕಾಪಡೆಯ ಎನ್‌ಸಿಸಿ ಕೆಡೆಟ್‌ಗಳು ಸ್ವಚ್ಛ ಭಾರತ ಅಭಿಯಾನದಂಗವಾಗಿ ಸಾಗರ ನೌಕಾಯಾನ ಸಾಹಸಯಾತ್ರೆ ಶಿಬಿರ ಮತ್ತು ತರಬೇತಿ ಚಟುವಟಿಕೆಗಳನ್ನು ಆಯೋಜಿಸಲಾಯಿತು.

ಈ ಸಾಗರ ನೌಕಾಯಾನ ಸಾಹಸಯಾತ್ರೆಯಲ್ಲಿ ಕರ್ನಾಟಕ ಮತ್ತು ಗೋವಾದ 72 ಎನ್‌ಸಿಸಿ ಕೆಡೆಟ್‌ಗಳು ನಗರದ ಶಾರದಾ ವಸತಿ ಶಾಲೆಯ ಪರಿಸರ ಮತ್ತು ಮಲ್ಪೆ ಬೀಚಿನಲ್ಲಿ ಶ್ರಮದಾನದ ಮೂಲಕ ಸ್ವಚ್ಛತಾ ಚಟುವಟಿಕೆಗಳನ್ನು ಕೈಗೊಂಡರು. ಇದು ಈ ಕೆಡೆಟ್‌ಗಳಲ್ಲಿ ಸ್ವಚ್ಛತೆಯ ಉತ್ತೇಜನ, ಸಮುದಾಯದಲ್ಲಿ ಭಾಗವಹಿಸುವಿಕೆ, ಪರಿಸರವನ್ನು ಕಾಪಾಡುವ ಬಗ್ಗೆ ಜಾಗೃತಿಗೆ ಸಹಾಯಕವಾಗಿದೆ. ಹಾಗೆಯೇ ಮಲ್ಪೆ ಪರಿಸರದಲ್ಲಿ ರೂಟ್‌ ಮಾರ್ಚ್ ಮೂಲಕ ಸಾರ್ವಜನಿಕರಿಗೆ ಸ್ವಚ್ಛತೆಯ ಸಂದೇಶ ನೀಡಲಾಯಿತು.15 ದಿನ ನಡೆದ ಈ ಶಿಬಿರದ ಚಟುವಟಿಕೆಗಳ ಭಾಗವಾಗಿ ಉದ್ಯಾವರ ನದಿಯ ಬೋಟ್ ಪೂಲ್‌ನಲ್ಲಿ ಸೈಲ್ ಬೋಟ್ ನಿರ್ವಹಣೆ ಮತ್ತು ರಿಗ್ಗಿಂಗ್ ಕುರಿತು ತರಬೇತಿಯನ್ನು ನೀಡಲಾಯಿತು. ಕರ್ನಾಟಕ ಮತ್ತು ಗೋವಾ ಎನ್‌ಸಿಸಿ ನಿರ್ದೇಶನಾಲಯದ ಸಮಗ್ರ ಮಾರ್ಗದರ್ಶನದಲ್ಲಿ ಉಡುಪಿಯ ಎನ್‌ಸಿಸಿ ನಂಬರ್ ೬ ಕರ್ನಾಟಕ ನೌಕಾ ಘಟಕದಿಂದ ಆಯೋಜಿಸಲ್ಪಟ್ಟ ಈ ಶಿಬಿರವನ್ನು ಕರ್ನಲ್ ವಿರಾಜ್ ಕಾಮತ್ ನೇತೃತ್ವದಲ್ಲಿ ಉಡುಪಿಯ ಎನ್‌ಸಿಸಿ ಕಮಾಂಡಿಂಗ್ ಆಫೀಸರ್ ಕಮಾಂಡರ್ ಅಶ್ವಿನ್ ಎಂ. ರಾವ್ ನಡೆಸಿಕೊಟ್ಟರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ