ಉಡುಪಿಯ ಕೃಷ್ಣಮಠದಲ್ಲಿ ಇನ್ನು ಭಕ್ತರಿಗೆ ಕಟ್ಟುನಿಟ್ಟಿನ ನಿಯಮ ಜಾರಿ

Published : Jan 21, 2026, 10:09 AM IST
Udupi Sri Krishna Mutt

ಸಾರಾಂಶ

ಶ್ರೀ ಕೃಷ್ಣಮಠದಲ್ಲಿ ವಸ್ತ್ರಸಂಹಿತೆಯನ್ನು ಕಟ್ಟುನಿಟ್ಟುಗೊಳಿಸಲಾಗಿದೆ. ಇನ್ನು ಮುಂದೆ ದೇವರ ದರ್ಶನಕ್ಕೆ ಬರುವ ಭಕ್ತಾಧಿಗಳು ಅಂಗಿ ಮತ್ತು ಬನಿಯನ್ ತೆಗೆದಿಟ್ಟು ಪ್ರವೇಶಿಸಬೇಕು ಎಂದು ನಿಯಮ ಜಾರಿಗೊಳಿಸಲಾಗಿದೆ.

  ಉಡುಪಿ :  ಶ್ರೀ ಕೃಷ್ಣಮಠದಲ್ಲಿ ವಸ್ತ್ರಸಂಹಿತೆಯನ್ನು ಕಟ್ಟುನಿಟ್ಟುಗೊಳಿಸಲಾಗಿದೆ. ಇನ್ನು ಮುಂದೆ ದೇವರ ದರ್ಶನಕ್ಕೆ ಬರುವ ಭಕ್ತಾಧಿಗಳು ಅಂಗಿ ಮತ್ತು ಬನಿಯನ್ ತೆಗೆದಿಟ್ಟು ಪ್ರವೇಶಿಸಬೇಕು ಎಂದು ನಿಯಮ ಜಾರಿಗೊಳಿಸಲಾಗಿದೆ.

ಈ ಹಿಂದೆಯೂ ಇಲ್ಲಿ ಭಾಗಶಃ ವಸ್ತ್ರಸಂಹಿತೆ ಜಾರಿ

ಈ ಹಿಂದೆಯೂ ಇಲ್ಲಿ ಭಾಗಶಃ ವಸ್ತ್ರಸಂಹಿತೆ ಜಾರಿಯಲ್ಲಿತ್ತು, ಕೃಷ್ಣಮಠದಲ್ಲಿ ಬೆಳಗ್ಗೆ 11 ಗಂಟೆ ಸುಮಾರಿಗೆ ಮಹಾಪೂಜೆ ನಡೆಯುತ್ತದೆ. ಅಲ್ಲಿವರೆಗೆ ಕೃಷ್ಣನ ದರ್ಶನ ಮಾಡುವವರು ಕಡ್ಡಾಯವಾಗಿ ಅಂಗಿ, ಬನಿಯನ್‌ ತೆಗೆದು ಪ್ರವೇಶಿಸಬೇಕಿತ್ತು. ಮಹಾಪೂಜೆ ನಂತರ ಕೃಷ್ಣನ ದರ್ಶನಕ್ಕೆ ಈ ಕಡ್ಡಾಯ ಇರಲಿಲ್ಲ.

2 ವರ್ಷಗಳ ಅವಧಿಗೆ ಕೆಲ ನಿಯಮ

ಆದರೆ ಈಗ ಶೀರೂರು ಮಠದ 2 ವರ್ಷಗಳ ಪರ್ಯಾಯ ಆರಂಭವಾಗಿದೆ. ಕೃಷ್ಣಮಠದಲ್ಲಿ ಪರ್ಯಾಯ ನಡೆಸುವ ಮಠಗಳು ತಮ್ಮ ನಿರ್ವಹಣೆಗೆ ತಕ್ಕಂತೆ 2 ವರ್ಷಗಳ ಅವಧಿಗೆ ಕೆಲ ನಿಯಮಗಳನ್ನು ಜಾರಿಗೊಳಿಸುವುದು ಇಲ್ಲಿ ಸಾಮಾನ್ಯ. ಅದರಂತೆ ಶೀರೂರು ಮಠದಿಂದ ಈ ವಸ್ತ್ರಸಂಹಿತೆ ಜಾರಿಯಾಗಿದೆ.

ಪುರುಷ ಭಕ್ತರು ಮಹಾಪೂಜೆ ಮತ್ತು ಇತರ ಸಮಯದಲ್ಲೂ ಕಡ್ಡಾಯವಾಗಿ ಅಂಗಿ, ಬನಿಯನ್‌ ಕಳಚಿ ಒಳ ಪ್ರವೇಶಿಸಬೇಕು, ಮಹಿಳ‍ೆಯರೂ ಸ್ವಚ್ಛಂದವಾದ ಬಟ್ಟೆಯನ್ನು ಧರಿಸುವಂತಿಲ್ಲ, ದೇವರ ದರ್ಶನಕ್ಕೆ ಬರುವಾಗ ಎಂತಹ ಬಟ್ಟೆಗಳನ್ನು ಧರಿಸಬೇಕೋ ಎನ್ನುವ ವಿವೇಚನೆಯಿಂದ ಬಟ್ಟೆ ಧರಿಸಿ ಬನ್ನಿ, ಪ್ಯಾಂಟು ಧರಿಸಬಹುದು, ಆದರೆ ತೀರಾ ಬರ್ಮುಡಾದಂತಹ ಬಟ್ಟೆಗಳು ಬೇಡ ಎಂದು ಮಠದ ದಿವಾನರಾದ ಉದಯ ಕುಮಾರ್ ಸರಳತ್ತಾಯ ತಿಳಿಸಿದ್ದಾರೆ.

PREV
Stay updated with the latest news from Udupi district (ಉಡುಪಿ ಸುದ್ದಿ) — including local governance, coastal tourism & beaches, heritage & temple developments, education and institutions (like Manipal), agriculture and coastal economy, environment & fisheries, culture, and district-level community events on Kannada Prabha News.
Read more Articles on

Recommended Stories

ಮಾ.1ರಂದು ಬೆಳ್ಮಣ್ ಬೊರ್ಡ್ ಹೈಸ್ಕೂಲ್, ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಮಾವೇಶ
(ಯಶ್ವಾಲ್‌ ಮಸ್ಟ್‌ )ಕ್ರೀಡೆಯಿಂದ ಕೆಲಸದ ಒತ್ತಡ ನಿವಾರಣೆ: ಯಶ್ಪಾಲ್