ಉಡುಪಿ: ಭಾರಿ ಮಳೆಗೆ 2 ಕಿ.ಮೀ. ಕೊಚ್ಚಿ ಹೋದ 91ರ ಮಹಿಳೆ! - ತೋಟವೊಂದರಲ್ಲಿದ್ದ ಇದ್ದ 25 ದನಗಳು ಕಣ್ಮರೆ

Published : Oct 08, 2024, 11:48 AM IST
latest update flood situation bihar due to kosi bagmati gandak river nepal situation out of control

ಸಾರಾಂಶ

ಉಡುಪಿ ಜಿಲ್ಲೆ ಹೆಬ್ರಿ ತಾಲೂಕು ಕಬ್ಬಿನಾಲೆ ವ್ಯಾಪ್ತಿಯ ಬಲ್ಲಾಡಿ ಗುಮ್ಮಗುಂಡಿ ತೋಡು ಹಾಗೂ ಕೆಲಕಿಲ ನದಿಯಲ್ಲಿ ಭಾನುವಾರ ಉಂಟಾದ ಭಾರಿ ಪ್ರವಾಹದಲ್ಲಿ ವೃದ್ದೆಯೊಬ್ಬಳು ಕೊಚ್ಚಿ ಹೋಗಿದ್ದು, ಆಕೆಯ ಮೃತದೇಹ ಸುಮಾರು ಎರಡು ಕಿ.ಮೀ. ದೂರದ ಬಲ್ಲಾಡಿಯ ಅರ್ಧನಾರೀಶ್ವರ ದೇವಸ್ಥಾನದ ಬಳಿ ಸೋಮವಾರ ಪತ್ತೆಯಾಗಿದೆ.

ಕಾರ್ಕಳ (ಉಡುಪಿ) :  ಉಡುಪಿ ಜಿಲ್ಲೆ ಹೆಬ್ರಿ ತಾಲೂಕು ಕಬ್ಬಿನಾಲೆ ವ್ಯಾಪ್ತಿಯ ಬಲ್ಲಾಡಿ ಗುಮ್ಮಗುಂಡಿ ತೋಡು ಹಾಗೂ ಕೆಲಕಿಲ ನದಿಯಲ್ಲಿ ಭಾನುವಾರ ಉಂಟಾದ ಭಾರಿ ಪ್ರವಾಹದಲ್ಲಿ ವೃದ್ದೆಯೊಬ್ಬಳು ಕೊಚ್ಚಿ ಹೋಗಿದ್ದು, ಆಕೆಯ ಮೃತದೇಹ ಸುಮಾರು ಎರಡು ಕಿ.ಮೀ. ದೂರದ ಬಲ್ಲಾಡಿಯ ಅರ್ಧನಾರೀಶ್ವರ ದೇವಸ್ಥಾನದ ಬಳಿ ಸೋಮವಾರ ಪತ್ತೆಯಾಗಿದೆ.

ಬಲ್ಲಾಡಿ ಬೆಂಡುಗುಡ್ಡೆಯ ಚಂದ್ರು ಗೌಡ್ತಿ (91) ಮೃತ ಮಹಿಳೆ. ಬಲ್ಲಾಡಿ ಗುಡ್ಡ ಪ್ರದೇಶದಲ್ಲಿ ಭಾನುವಾರ ಮಧ್ಯಾಹ್ನ 2.30ಕ್ಕೆ ಗಾಳಿ, ಗುಡುಗು ಸಹಿತ ಭಾರಿ ಮಳೆ ಸುರಿದಿತ್ತು. ಇದೇ ವೇಳೆ, ಕಾಂತರಬೈಲು ರಬ್ಬರ್ ತೋಟದಲ್ಲಿ ಆಶ್ರಯ ಪಡೆದಿದ್ದ ಸುಮಾರು 25ಕ್ಕೂ ಹೆಚ್ಚು ಬೀಡಾಡಿ ದನಗಳು ಭಾರಿ ಪ್ರವಾಹಕ್ಕೆ ತುತ್ತಾಗಿ ಕಣ್ಮರೆಯಾಗಿವೆ ಎಂದು ನಿವಾಸಿಗರು ತಿಳಿಸಿದ್ದಾರೆ.

ಬಲ್ಲಾಡಿ ಹೊಸಕಂಬಳ ಮನೆಯ ಶೇಖರ್ ಎಂಬುವರ ಓಮ್ನಿ ಕಾರು 200 ಮೀ. ದೂರಕ್ಕೆ ಪ್ರವಾಹದಲ್ಲಿ ತೇಲಿ ಹೋಗಿತ್ತು. ಕೇರಳ ಮೂಲದ ಪ್ರಭಾಕರ್ ಅವರ ಬೈಕ್, ಪ್ರದೀಪ್ ಅವರ ಕಾರು, ಪ್ಲಾಟಿನ ಬೈಕ್‌ ಪ್ರವಾಹದಲ್ಲಿ ಸುಮಾರು 300 ಮೀಟರ್ ದೂರದಲ್ಲಿ ಪತ್ತೆಯಾಗಿದೆ.

ಈ ಮಧ್ಯೆ, ದಕ್ಷಿಣ ಕನ್ನಡ ಜಿಲ್ಲೆ ವಿಟ್ಲದ ಸುರಂಬಡ್ಕದ ಕಿಂಡಿ ಅಣೆಕಟ್ಟು ಸೇತುವೆ ಬಳಿ ಸೋಮವಾರ ಸ್ಥಳೀಯ ನಿವಾಸಿ ಉಮ್ಮರ್ ಎಂಬುವರು ಆಯತಪ್ಪಿ ನದಿಗೆ ಬಿದ್ದು ತೇಲಿ ಹೋಗುತ್ತಿದ್ದಾಗ ಸ್ಥಳೀಯರು ಅವರನ್ನು ರಕ್ಷಿಸಿದ್ದಾರೆ.

PREV

Recommended Stories

೨೬ ಕಿ.ಮೀ. ಸರ್ವೀಸ್ ರಸ್ತೆ ತುರ್ತು ನಿರ್ಮಾಣಕ್ಕೆ ಸಂಸದ ಸೂಚನೆ
ಪತ್ರಿಕೆ ಓದು ದೃಷ್ಟಿಕೋನ ವಿಸ್ತಾರಕ್ಕೆ ದಾರಿ: ಡಾ. ಮಹಾಬಲೇಶ್ವರ ರಾವ್