ಉಡುಪಿ ರೈಲ್ವೆ ಯಾತ್ರಿ ಸಂಘದಿಂದ ಸಂಸದರಿಗೆ ಅಭಿನಂದನೆ

KannadaprabhaNewsNetwork |  
Published : Sep 28, 2026, 02:30 AM IST
25ಕೋಟ | Kannada Prabha

ಸಾರಾಂಶ

ದಶಕಗಳ ಬೇಡಿಕೆಯಾಗಿದ್ದ ಮಂಗಳೂರು ರೈಲ್ವೆ ವಿಭಾಗವು ಕೇರಳದ ಪಾಲಕ್ಕಾಡ್ ವಲಯದಿಂದ ನೈರುತ್ಯ ರೈಲ್ವೆಗೆ ಸೇರ್ಪಡೆಗೊಂಡಿರುತ್ತದೆ ಹಾಗೂ ಉಡುಪಿ ರೈಲ್ವೆ ನಿಲ್ದಾಣಕ್ಕೆ ಸಂಬಂಧಪಟ್ಟಂತೆ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳು ಕ್ಷಿಪ್ರವಾಗಿ ನಡೆಯುತ್ತಿದ್ದು ನಿಲ್ದಾಣದಲ್ಲಿ ರೈಲುಗಳಿಗೆ ನೀರು ತುಂಬಿಸುವ ವ್ಯವಸ್ಥೆಯನ್ನು ಅಳವಡಿಸುವ ಪ್ರಕ್ರಿಯೆಗೆ ಚಾಲನೆ ದೊರಕಿದೆ.

ಉಡುಪಿ: ದಶಕಗಳ ಬೇಡಿಕೆಯಾಗಿದ್ದ ಮಂಗಳೂರು ರೈಲ್ವೆ ವಿಭಾಗವು ಕೇರಳದ ಪಾಲಕ್ಕಾಡ್ ವಲಯದಿಂದ ನೈರುತ್ಯ ರೈಲ್ವೆಗೆ ಸೇರ್ಪಡೆಗೊಂಡಿರುತ್ತದೆ ಹಾಗೂ ಉಡುಪಿ ರೈಲ್ವೆ ನಿಲ್ದಾಣಕ್ಕೆ ಸಂಬಂಧಪಟ್ಟಂತೆ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳು ಕ್ಷಿಪ್ರವಾಗಿ ನಡೆಯುತ್ತಿದ್ದು ನಿಲ್ದಾಣದಲ್ಲಿ ರೈಲುಗಳಿಗೆ ನೀರು ತುಂಬಿಸುವ ವ್ಯವಸ್ಥೆಯನ್ನು ಅಳವಡಿಸುವ ಪ್ರಕ್ರಿಯೆಗೆ ಚಾಲನೆ ದೊರಕಿದೆ. ಇಂದ್ರಾಳಿ ರೈಲ್ವೆ ಸೇತುವೆ ಲೋಕಾರ್ಪಣೆ ಗೊಂಡಿದೆ. ಇವೆಲ್ಲ ಕಾರ್ಯಗಳನ್ನು ಗುರುತಿಸಿ ಉಡುಪಿ ರೈಲ್ವೆ ಯಾತ್ರಿ ಸಂಘವು ಅಧ್ಯಕ್ಷ ದೀರಜ್ ಎನ್. ಶಾಂತಿಯವರ ನೇತೃತ್ವದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಅವರ ಕಚೇರಿಯಲ್ಲಿ ಅಭಿನಂದಿಸಿತು.ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಮಧುಸೂದನ್ ಹೇರೂರು, ಕಾರ್ಯದರ್ಶಿ ಮಂಜುನಾಥ್ ಮಣಿಪಾಲ, ನಿರ್ದೇಶಕರಾದ ರವಿ ಪೂಜಾರಿ ಹಿರಿಯಡ್ಕ, ಸದಾನಂದ ಅಮೀನ್, ಶ್ರೀನಿವಾಸ್ ಶೆಟ್ಟಿ ತೊನ್ಸೆ, ಐವನ್ ಡಿಸೋಜ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆಜಿಬಿವಿ ಶಾಲೆ ಶೈಕ್ಷಣಿಕ, ಸ್ವಚ್ಛತಾ ವ್ಯವಸ್ಥೆಗೆ ಅಧಿಕಾರಿಗಳ ಮೆಚ್ಚುಗೆ
ನಾಳೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮನೆಗೆ ಮುತ್ತಿಗೆ