ಉಡುಪಿ ಕಾಂಗ್ರೆಸ್‌ನಿಂದ ಎಸ್‌ಐಆರ್ ಸಹಾಯ ಕೇಂದ್ರ

KannadaprabhaNewsNetwork |  
Published : Jul 17, 2026, 02:30 AM IST
15ಬ್ಲಾಕ್ | Kannada Prabha

ಸಾರಾಂಶ

ರಾಜ್ಯದಲ್ಲಿ ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್)ಯಲ್ಲಿ ಮತದಾರರಿಗೆ ಗಣತಿ ನಮೂನೆ ಭರ್ತಿ ಮಾಡಲು ನೆರವು ನೀಡುವ ಉದ್ದೇಶದಿಂದ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಕಾಂಗ್ರೆಸ್ ಭವನದಲ್ಲಿ ಸಹಾಯ ಕೇಂದ್ರ ಆರಂಭಿಸಲಾಯಿತು.

ಉಡುಪಿ: ರಾಜ್ಯದಲ್ಲಿ ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್)ಯಲ್ಲಿ ಮತದಾರರಿಗೆ ಗಣತಿ ನಮೂನೆ ಭರ್ತಿ ಮಾಡಲು ನೆರವು ನೀಡುವ ಉದ್ದೇಶದಿಂದ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಕಾಂಗ್ರೆಸ್ ಭವನದಲ್ಲಿ ಸಹಾಯ ಕೇಂದ್ರ ಆರಂಭಿಸಲಾಯಿತು.ಈ ಸಹಾಯ ಕೇಂದ್ರಕ್ಕೆ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಚಾಲನೆ ನೀಡಿದರು.ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು ಸೇರಿದಂತೆ ಪಕ್ಷದ ಮುಖಂಡರಾದ ಮಹಾಬಲ ಕುಂದರ್, ನಾಗೇಶ್ ಉದ್ಯಾವರ, ಜಯಕುಮಾರ್, ಮಮತಾ ಶೆಟ್ಟಿ, ಸತೀಶ್ ಕೊಡವೂರು, ಸಂಧ್ಯಾ ತಿಲಕ್ ರಾಜ್ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ರಿಯೇಟಿವ್ ಪುಸ್ತಕ ಧಾರೆ: 19ರಂದು 25 ಕೃತಿ ಲೋಕಾರ್ಪಣೆ
ಮಾಹೆ-ಧ್ರುವ ಸ್ಪೇಸ್ ಒಪ್ಪಂದ: ಆಸೆಂಟ್‌ ಆರಂಭ