ಉಡುಪಿ ಶ್ರೀ ಲಕ್ಷ್ಮೀವೆಂಕಟೇಶ ದೇವಸ್ಥಾನ - ಚಂಡಿಕಾಯಾಗ ಸಂಪನ್ನ

KannadaprabhaNewsNetwork |  
Published : Oct 22, 2026, 02:30 AM IST
21ಚಂಡಿಕಾಯಾಗ | Kannada Prabha

ಸಾರಾಂಶ

ಇಲ್ಲಿನ ತೆಂಕಪೇಟೆಯ ಶ್ರೀ ಲಕ್ಷ್ಮೀವೆಂಕಟೇಶ ದೇವಸ್ತಾನದಲ್ಲಿ ನವರಾತ್ರಿಯ ದಶಮಿ ದಿನದಂದು ಮಂಗಳವಾರ ಮಹಾಚಂಡಿಕಾ ಯಾಗ, ಸಮಾರಾಧನೆ ಸಂಭ್ರಮದಿಂದ ನಡೆಯಿತು.

ಉಡುಪಿ : ಇಲ್ಲಿನ ತೆಂಕಪೇಟೆಯ ಶ್ರೀ ಲಕ್ಷ್ಮೀವೆಂಕಟೇಶ ದೇವಸ್ತಾನದಲ್ಲಿ ನವರಾತ್ರಿಯ ದಶಮಿ ದಿನದಂದು ಮಂಗಳವಾರ ಮಹಾಚಂಡಿಕಾ ಯಾಗ, ಸಮಾರಾಧನೆ ಸಂಭ್ರಮದಿಂದ ನಡೆಯಿತು.ಶ್ರೀ ದೇವರ ಸನ್ನಿಧಿಯಲ್ಲಿ ಚಂಡಿಕಾಯಾಗದ ಧಾರ್ಮಿಕ ವಿಧಿಗಳನ್ನು ಅರ್ಚಕರಾದ ರವೀಂದ್ರ ಭಟ್, ವಿನಾಯಕ ಭಟ್ ನಡೆಸಿಕೊಟ್ಟರು, ಅರ್ಚಕರಾದ ದೀಪಕ್ ಭಟ್, ದಯಾಘನ್ ಭಟ್, ದೀಪಕ್ ಭಟ್, ಗಿರೀಶ್ ಭಟ್ ಸಹಕರಿಸಿದರು.ದೇವಾಲಯದ ಆಡಳಿತ ಮೊಕ್ತೇಸರರಾದ ಗುಜ್ಜಾಡಿ ಪ್ರಭಾಕರ್ ದಂಪತಿ ಅವರು ಚಂಡಿಕಾಯಾಗದ ಪೂಜೆಯ ಯಜಮಾನಿತ್ವ ವಹಿಸಿದ್ದರು.ಇದೇ ಹಿನ್ನೆಲೆಯಲ್ಲಿ ಶ್ರೀದೇವರಿಗೆ ವಿಶೇಷ ಅಲಂಕಾರ, ಸಮೂಹಿಕ ನಮಸ್ಕಾರ, ಯಾಗದ ಪೂರ್ಣಾಹುತಿ, ಮಹಾಪೂಜೆ, ಪಲ್ಲ ಪೂಜೆ, ಸಮಾರಾಧನೆ, ಶ್ರೀ ಶಾರದಾ ದೇವಿಗೆ ಭಕ್ತರು ಅರ್ಪಿಸಿದ ಸೀರೆಗಳನ್ನು ಹರಾಜು ಮಾಡಲಾಯಿತು.ದೇವಳದ ಆಡಳಿತ ಮೊಕ್ತೇಸರ ಗುಜ್ಜಾಡಿ ಪ್ರಭಾಕರ್ ನಾಯಕ್, ಆಡಳಿತ ಮಂಡಳಿಯ ಸದಸ್ಯರಾದ ನಾರಾಯಣ ಪ್ರಭು, ಡಾ. ಕೈಲಾಸನಾಥ ಶೆಣೈ, ಉಮೇಶ ಪೈ, ಅಶೋಕ ಬಾಳಿಗ, ದಿನೇಶ್ ಪೈ, ಡಾ. ವಿನಾಯಕ ಶೆಣೈ, ಸುಭಾಸ್ ಮಧುಕರ್ ಕಾಮತ್, ವೆಂಕಟೇಶ್ ಭಟ್, ಪ್ರಭಾಕರ್ ಭಟ್, ಮಹೇಶ್ ಶೆಣೈ, ಮಟ್ಟಾರ್ ವಸಂತ್ ಕಿಣೆ, ಚಿತ್ತರಂಜನ್ ಭಟ್, ಹರಿರಾಮ್ ಶೆಣೈ ಹಾಗೂ ಭಜನಾ ಮಹೋತ್ಸವದ ಅಧ್ಯಕ್ಷ ಮಟ್ಟಾರ್ ಸತೀಶ್ ಕಿಣಿ, ಜಿ.ಎಸ್.ಬಿ. ಯುವಕ ಮಂಡಳಿಸದಸ್ಯರು. ಭಗಿನಿ ವೃಂದ, ಜಿ.ಎಸ್.ಬಿ. ಮಹಿಳಾ ಮಂಡಳಿ ಸದಸ್ಯರು, ಭಜನಾ ಮಹೋತ್ಸವ ಸಮಿತಿಯ ಸದಸ್ಯರು, ಊರಪರಊರ ನೂರಾರು ಸಮಾಜ ಬಾಂದವರು ಉಪಸ್ಥಿತರಿದ್ದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಾಹನ ನಿಲ್ದಾಣ ಮೇಲ್ಛಾವಣಿ ಶೀಘ್ರ ಲೋಕಾರ್ಪಣೆ: ಮಂತರ್ ಗೌಡ
ಸೋಮವಾರಪೇಟೆ: ದಸರಾ ಜನೋತ್ಸವ ಸಂಭ್ರಮ