ಉಡುಪಿ: ಸ್ವಚ್ಛ ಭಾರತ ಅಭಿಯಾನವು ಒಂದೇ ದಿನಕ್ಕೆ ಮೀಸಲಾಗದೆ, ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಸ್ವಯಂ ಪ್ರೇರಣೆಯಿಂದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಶ್ರೀ ಪುತ್ತಿಗೆ ಮಠದ ದಿವಾನರಾದ ನಾಗರಾಜ ಆಚಾರ್ಯ ಹೇಳಿದರು.
ಕಾರ್ಯಕ್ರಮದಲ್ಲಿ ಪತಂಜಲಿ ರಾಜ್ಯ ಸಮಿತಿ ಸದಸ್ಯ ಕೆ. ರಾಘವೇಂದ್ರ ಭಟ್ ಅವರು ಸ್ವಾಗತಿಸಿ ಪ್ರಸ್ತಾವನೆಗೈದರು. ಉಡುಪಿಯ ಪತಂಜಲಿ ಯೋಗ ಸಮಿತಿಯು ಸತತ 5 ವರ್ಷಗಳಿಂದ ನಗರದ ವಿವಿಧ ಪ್ರದೇಶಗಳಲ್ಲಿ ಪ್ರತಿ ತಿಂಗಳ ಪ್ರಥಮ ಭಾನುವಾರ ಅಲ್ಲಿನ ಪರಿಸರ, ದೇವಸ್ಥಾನ, ಪಾರ್ಕಿಂಗ್ ಪ್ರದೇಶಗಳಲ್ಲಿ ಸ್ವಚ್ಛ ಭಾರತ್ ಅಭಿಯಾನ ನಡೆಸುತ್ತಿರುವುದು ಶ್ಲಾಘನೀಯ ಎಂದರು. ಈ ಸಂದರ್ಭದಲ್ಲಿ ಭಾರತ್ ಸ್ವಾಭಿಮಾನ ಟ್ರಸ್ಟ್‌ನ ವೆಂಕಟೇಶ್ ಮೆಹಂದಲೆ, ಯುವ ಪ್ರಭಾರಿ ಜಗದೀಶ್ ಕುಮಾರ್, ಮಾಧ್ಯಮ ಪ್ರಭಾರಿ ಹರಿಪ್ರಸಾದ್ ಕೆ., ಮಹಿಳಾ ಪ್ರಭಾರಿ ಲೀಲಾ ಆರ್. ಅಮೀನ್, ತಾಲೂಕು ಪ್ರಭಾರಿಗಳಾದ ನಾಗರಾಜ ಶೇಟ್, ಶ್ಯಾಮಲಾ ಕೆ., ಗೌರವ ಸದಸ್ಯ ಸದಾಶಿವ ರಾವ್, ಜಿಲ್ಲಾ ಸಮಿತಿಯ ಗಿರೀಶ್, ಲಕ್ಷ್ಮಣ ಕಾಮತ್, ರೋಹಿತ್, ಸಂತೋಷ ಶೆಟ್ಟಿ, ರಾಜು ನಂಬಿಯಾರ್, ರೋಹಿತ್ ಬಲ್ಲಾಳ್, ವಿವಿಧ ಕಕ್ಷೆಗಳ ಮುಖ್ಯ ಯೋಗ ಶಿಕ್ಷಕರು ಹಾಗೂ ಯೋಗಾರ್ಥಿಗಳು ಉಪಸ್ಥಿತರಿದ್ದರು.