ಉಡುಪಿ: ಬ್ಯಾಂಕಿಂಗ್ ಉದ್ಯಮದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದ ಸಿಂಡಿಕೇಟ್ ಬ್ಯಾಂಕಿನ ಶತಮಾನೋತ್ಸವ ಆಚರಣೆ 13 ಮತ್ತು 14 ರಂದು ಉಡುಪಿಯ ಅಮೃತ್ ಗಾರ್ಡನ್‌ನಲ್ಲಿ ಆಯೋಜಿಸಲಾಗಿದೆ ಎಂದು ಸಿಂಡಿಕೇಟ್ ಬ್ಯಾಂಕ್ ಶತಮಾನೋತ್ಸವ ಆಚರಣಾ ಸಮಿತಿ ತಿಳಿಸಿದೆ.ಈ ಬಗ್ಗೆ ಸಮಿತಿಯ ಸಭಾಪತಿ ಕೆ.ಟಿ. ರೈ ಸುದ್ದಿಗೋಷ್ಠಿಯಲ್ಲಿ ವಿವರಗಳನ್ನು ನೀಡಿದರು, ಈ ಕಾರ್ಯಕ್ರಮದಲ್ಲಿ ದೆಹಲಿ, ಹೈದರಾಬಾದ್, ಕೇರಳ ಮತ್ತು ದೇಶದಾದ್ಯಂತದಿಂದ ಸುಮಾರು 600 ಮಂದಿ ಸಿಂಡಿಕೇಟ್ ಬ್ಯಾಂಕಿನ ಮಾಜಿ ಮತ್ತು ಹಾಲಿ ಅಧಿಕಾರಿಗಳು, ಉದ್ಯೋಗಿಗಳು. ಪ್ರಮುಖ ಗ್ರಾಹಕರು ಭಾಗವಹಿಸಲಿದ್ದಾರೆ ಎಂದರು.
ಎರಡನೇ ದಿನದ ಕಾರ್ಯಕ್ರಮದಲ್ಲಿ ಮಾಹೆಯ ಸಹಕುಲಪತಿ ಡಾ. ಎಚ್.ಎಸ್.ಬಲ್ಲಾಳ್, ಆರ್‌ಬಿಐನ ಮಾಜಿ ಗವರ್ನರ್ ವಿಟ್ಟಲದಾಸ್ ಲೀಲಾಧರ್, ಬ್ಯಾಂಕ್ ಅಫ್ ಮಹಾರಾಷ್ಟ್ರದ ಮಾಜಿ ಅಧ್ಯಕ್ಷ ಅಲನ್ ಸಿ.ಎ. ಪೆರೇರ ಮತ್ತು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶ್‌ಪಾಲ್ ಸುವರ್ಣ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಸುಜಿರ್ ಪ್ರಭಾಕರ್, ಕಾರ್ಯಾಧ್ಯಕ್ಷ ದಿನಕರ ಎಸ್.ಪೂಂಜ, ಕಾರ್ಯದರ್ಶಿ ಸಂಜಯ್ ಮಾಂಜ್ರೆಕರ್ಸ ಸಂಯೋಜಕ ಜಯರಾಮ್ ವಿ ಪ್ರಭು ಇದ್ದರು.