ಉಡುಪಿ: ಸೋಮನಾಥೇಶ್ವರನನ್ನು ಸ್ಪರ್ಶಿಸುತ್ತಿರುವ ಸೂರ್ಯ!

KannadaprabhaNewsNetwork |  
Published : May 01, 2025, 12:45 AM IST
30ಸೂರ್ಯಾ | Kannada Prabha

ಸಾರಾಂಶ

ಮೊದಲು ಬೆಳಗ್ಗೆ 8.15ರ ಸುಮಾರಿಗೆ ಸೂರ್ಯ ಕಿರಣಗಳು ಲಿಂಗದ ಮೇಲ್ಭಾಗವನ್ನು ಪ್ರಜ್ವಲಿಸಿ, ನಂತರ ಸೂರ್ಯನ ಚಲನೆಗನುಗುಣವಾಗಿ ಕೆಳಗೆ ಪೀಠಕ್ಕೆ ಸರಿದು, ನಂತರ ಕೆಳಗಿರುವ ಸಾಲಿಗ್ರಾಮವನ್ನು ಸ್ಪರ್ಶಿಸಿ, 8.45ರ ಹೊತ್ತಿಗೆ ನೆಲಕ್ಕೆ ಚೆಲ್ಲಿ ಇಡೀ ಗುಡಿಯೊಳಗೆ ಬೆಳಕು ಹರಡುತ್ತದೆ ಎಂದು ಗುಡಿಯ ಅರ್ಚಕ ಪ್ರಕಾಶ್ ಭಟ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ರಥಬೀದಿಯ ಅನಂತೇಶ್ವರ ದೇವಾಲಯದ ಹಿಂಬದಿಯಲ್ಲಿರುವ ಶ್ರೀ ಪ್ರಸನ್ನ ಸೋಮನಾಥೇಶ್ವರ ಗುಡಿಯಲ್ಲಿ ದೇವರ ವಿಗ್ರಹಕ್ಕೆ ಸೂರ್ಯನ ಕಿರಣಗಳ ಸ್ಪರ್ಶಿಸುವ ಅಪೂರ್ವ ವಿದ್ಯಮಾನ ನಡೆಯುತ್ತಿದೆ.

ಉತ್ತರಾಯಣದ ಕೊನೆಯ ಈ ಅವಧಿಯಲ್ಲಿ ಪ್ರತಿವರ್ಷ 4-5 ದಿನ ಈ ವಿದ್ಯಮಾನ ಸಂಭವಿಸುತ್ತದೆ. ಕಳೆದ ಮೂರು ದಿನಗಳಿಂದ ಬೆಳಗ್ಗೆ ಸೂರ್ಯನ ಕಿರಣಗಳು ಗುಡಿಯ ಮಾಡಿನಲ್ಲಿರುವ ರಂಧ್ರದಿಂದ ಒಳಪ್ರವೇಶಿ ಸೋಮನಾಥೇಶ್ವರ ಲಿಂಗದ ಮೇಲೆ ಬೀಳುತ್ತಿದೆ. ಇನ್ನೂ 2-3 ದಿನ ಈ ವಿದ್ಯಮಾನ ನಡೆಯತ್ತದೆ.

ಮೊದಲು ಬೆಳಗ್ಗೆ 8.15ರ ಸುಮಾರಿಗೆ ಸೂರ್ಯ ಕಿರಣಗಳು ಲಿಂಗದ ಮೇಲ್ಭಾಗವನ್ನು ಪ್ರಜ್ವಲಿಸಿ, ನಂತರ ಸೂರ್ಯನ ಚಲನೆಗನುಗುಣವಾಗಿ ಕೆಳಗೆ ಪೀಠಕ್ಕೆ ಸರಿದು, ನಂತರ ಕೆಳಗಿರುವ ಸಾಲಿಗ್ರಾಮವನ್ನು ಸ್ಪರ್ಶಿಸಿ, 8.45ರ ಹೊತ್ತಿಗೆ ನೆಲಕ್ಕೆ ಚೆಲ್ಲಿ ಇಡೀ ಗುಡಿಯೊಳಗೆ ಬೆಳಕು ಹರಡುತ್ತದೆ ಎಂದು ಗುಡಿಯ ಅರ್ಚಕ ಪ್ರಕಾಶ್ ಭಟ್ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು