ಉಡುಪಿ: ಯಕ್ಷಗಾನ ಕಲಾರಂಗದ 81ನೇ ಮನೆ ಹಸ್ತಾಂತರ

KannadaprabhaNewsNetwork |  
Published : Dec 05, 2025, 02:30 AM IST
03ಮನೆವಿದ್ಯಾಪೋಷಕ್ ವಿದ್ಯಾರ್ಥಿ ದಿಶಾನ್‌ಗೆ ಮನೆ ಹಸ್ತಾಂತರ | Kannada Prabha

ಸಾರಾಂಶ

ಉಡುಪಿ ಯಕ್ಷಗಾನ ಕಲಾರಂಗ ಮೂಲಕ ಉಡುಪಿಯ ಡಾ. ರಾಜೇಶ್ವರೀ ಜಿ. ಭಟ್ ತಮ್ಮ ತೀರ್ಥರೂಪರಾದ ಕೆ. ರಾಮಕೃಷ್ಣ ರಾವ್ ಅವರ ಸ್ಮರಣೆಯಲ್ಲಿ, 7 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿದ ‘ಜಾನಕೀರಾಮ’ ಮನೆಯನ್ನು ಜಾನಕಿ ಕೆ. ಆರ್. ರಾವ್ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

ಉಡುಪಿ: ಉಡುಪಿ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ಯೋಜನೆಯ ಪ್ರಥಮ ಪಿಯುಸಿ ವಿದ್ಯಾರ್ಥಿ ಕಾಪು ತಾಲೂಕಿನ ಕುಂತಳನಗರದ ದಿಶಾನ್ (ಶ್ಯಾಮಲಾ ಮತ್ತು ದೇವೇಂದ್ರ ಅವರ ಪುತ್ರ) ಅವರಿಗೆ ಉಡುಪಿಯ ಡಾ. ರಾಜೇಶ್ವರೀ ಜಿ. ಭಟ್ ತಮ್ಮ ತೀರ್ಥರೂಪರಾದ ಕೆ. ರಾಮಕೃಷ್ಣ ರಾವ್ ಅವರ ಸ್ಮರಣೆಯಲ್ಲಿ, 7 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿದ ‘ಜಾನಕೀರಾಮ’ ಮನೆಯನ್ನು ಜಾನಕಿ ಕೆ. ಆರ್. ರಾವ್ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.ಈ ಸಂದರ್ಭ ಮಾತನಾಡಿದ ಡಾ. ರಾಜೇಶ್ವರೀ ಜಿ. ಭಟ್ ಅವರು ನಮ್ಮ ಬದುಕು ರೂಪುಗೊಳ್ಳುವಲ್ಲಿ ತಂದೆಯ ವ್ಯಕ್ತಿತ್ವ ತಾಯಿಯ ಪರಿಶ್ರಮ ಮತ್ತು ಮಾರ್ಗದರ್ಶನ ಮಹತ್ವದ ಪಾತ್ರ ವಹಿಸಿದೆ ಎಂದು ನೆನಪಿಸಿಕೊಂಡರು.

ಡಾ. ಗುರುಮೂರ್ತಿ ಅವರು ಕಲಾರಂಗದ ನಾಯಕತ್ವ, ಪಾರದರ್ಶಕ ವ್ಯವಹಾರ, ಕಾರ್ಯಕರ್ತರ ಅರ್ಪಣಾ ಮನೋಭಾವ ನಮ್ಮ ಮೇಲೆ ಪ್ರಭಾವ ಬೀರಿದೆ. ನಿರಂತರ ಈ ಸಂಸ್ಥೆಯೊಂದಿಗೆ ನಾವಿದ್ದೇವೆ ಎಂದರು. ಯು. ಎಸ್. ರಾಜಗೋಪಾಲ ಆಚಾರ್ಯ ಅವರು ಡಾ ರಾಜೇಶ್ವರಿಯವರ ತಂದೆ ತಾಯಿಯರ ಉದಾರ ವ್ಯಕ್ತಿತ್ವ ಪರಿಚಯಿಸಿದರು. ಡಾ. ಕೆ. ಆರ್. ಗುರುಪ್ರಸಾದ್ ಮಾತನಾಡಿ ಸಮಾಜಮುಖಿಯಾಗಿ ಕೆಲಸ ಮಾಡುವ ಕಲಾರಂಗದ ಪರಿಚಯವಾದುದು ಅತ್ಯಂತ ಸಂತಸ ತಂದಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ಸುರೇಶ್ ಶೆಟ್ಟಿ ಅವರು ಕಲಾರಂಗದಂತಹ ಸಂಸ್ಥೆ ಎಲ್ಲಾ ಊರುಗಳಲ್ಲಿದ್ದರೆ ರಾಮರಾಜ್ಯದ ಕನಸು ನನಸಾಗುವದು ಸುಲಭ ಸಾಧ್ಯ ಎಂದು ಅಭಿಪ್ರಾಯ ಪಟ್ಟರು. ಶಕುಂತಲಾ ಭಟ್, ಕಾರ್ತಿಕ್ ಭಟ್, ಸಂಸ್ಥೆಯ ಉಪಾಧ್ಯಕ್ಷರಾದ ಎಸ್ ವಿ. ಭಟ್, ವಿ. ಜಿ. ಶೆಟ್ಟಿ, ಕೋಶಾಧಿಕಾರಿ ಕೆ. ಸದಾಶಿವ ರಾವ್, ಜತೆಕಾರ್ಯದರ್ಶಿ ವಿದ್ಯಾಪ್ರಸಾದ್ ಮತ್ತು ಸದಸ್ಯರು ಉಪಸ್ಥಿತರಿದ್ದರು. ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ದಿವ್ಯಾ ಭಟ್ ಪ್ರಾರ್ಥಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಳ್ತಂಗಡಿ ಬಸ್ ನಿಲ್ದಾಣ ಕಾಮಗಾರಿಗೆ ಮರುಜೀವ
ಪ್ರತಿಭಾ ಕಾರಂಜಿ ಮಕ್ಕಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಪೂರಕ: ಸೋಮಯ್ಯ