ಹರಿಹರಪುರದಲ್ಲಿ ಉಡುಸಲಮ್ಮ ದುರ್ಗಾಪರಮೇಶ್ವರಿ ಪುನಃ ಪ್ರತಿಷ್ಠಾಪನೆ

KannadaprabhaNewsNetwork |  
Published : May 10, 2026, 01:30 AM IST
9ಎಚ್ಎಸ್ಎನ್4 : ಹೊಳೆನರಸೀಪುರ ತಾ. ಹರಿಹರಪುರದಲ್ಲಿ ಶ್ರೀ ಉಡುಸಲಮ್ಮ ದುರ್ಗಾಪರಮೇಶ್ವರಿ ಪುನಃ ಪ್ರತಿ? ರಜತ ಮಹೋತ್ಸವ ಹಾಗೂ ಶತ ಚಂಡಿಕಾ ಯಾಗ ಪೂಜಾ ಮಹೋತ್ಸವ ಶುಕ್ರವಾರ ವೈಭವದಿಂದ ನಡೆಯಿತು. | Kannada Prabha

ಸಾರಾಂಶ

ಅಮ್ಮನವರಿಗೆ ವಿಶೇಷ ಪೂಜೆ ಮತ್ತು ಅಲಂಕಾರಗಳು, ದೇವಿ ಮಹಾತ್ಮೆ ಉಪನ್ಯಾಸ, ಪ್ರತಿನಿತ್ಯ ಪ್ರಸಾದ ಸೇರಿದಂತೆ ಅನೇಕ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳು ನೆರವೇರಿದವು. ಶತ ಚಂಡಿಕಾ ಯಾಗದ ಪೂರ್ಣಾಹುತಿ ದಿನ ತವನಿಧಿಯ ಶ್ರೀ ವೀರಭದ್ರೇಶ್ವರನ ಉತ್ಸವ, ಬೋರನಹಳ್ಳಿಯ ಬಸವೇಶ್ವರನ ಉತ್ಸವ, ಸಿಗರನಹಳ್ಳಿಯ ಶ್ರೀ ಬಾಣದೇವರು ಹಾಗೂ ಪ್ರತೀ ಗ್ರಾಮದವರು ಜಗನ್ಮಾತೆಗೆ ವಿಶೇ?ವಾಗಿ ಪೂರ್ಣಾಹುತಿಗೆ ವಸ್ತ್ರ ಸೇವೆಯನ್ನು ಸಮರ್ಪಿಸಿದರು. ಶತ ಚಂಡಿಕಾ ಯಾಗದ ಪರಮಾನ್ನವನ್ನು ಸಿದ್ಧಪಡಿಸಲು ಏಳು ಹಳ್ಳಿಗಳ ಪ್ರತಿಯೊಂದು ಮನೆಯಿಂದಲೂ ಒಂದು ಮುಷ್ಟಿ ಅಕ್ಕಿ ಬೆಲ್ಲವನ್ನು ಸಂಗ್ರಹಿಸಿ, ಯಾಗ ಪೂಜಾ ಮಹೋತ್ಸವಕ್ಕೆ ಸಮರ್ಪಿಸಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರತಾಲೂಕಿನ ಹರಿಹರಪುರದಲ್ಲಿ ಶ್ರೀ ಉಡುಸಲಮ್ಮ ದುರ್ಗಾಪರಮೇಶ್ವರಿ ಪುನಃ ಪ್ರತಿಷ್ಠಾಪನಾ ರಜತ ಮಹೋತ್ಸವ ಹಾಗೂ ಶತ ಚಂಡಿಕಾ ಯಾಗ ಪೂಜಾ ಮಹೋತ್ಸವ ವೈಭವದಿಂದ ನಡೆಯಿತು.ಹರಿಹರಪುರ ಸುತ್ತಮುತ್ತಲಿನ ಏಳುಹಳ್ಳಿ ಗ್ರಾಮಸ್ಥರು ಸೇರಿ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವವನ್ನು ಅತೀತಾನಂದನಾಥರು ವಹಿಸಿದ್ದರು. ಪ್ರತಿನಿತ್ಯ ಶತ ಚಂಡಿ ಪಾರಾಯಣ, ಶ್ರೀ ಲಲಿತಾ ಮಹಾ ತ್ರಿಪುರಸುಂದರೀ ಪಂಚವಿಂಶತಿ ನಾಮಸ್ತೋತ್ರ ಪಠನೆ, ಅಮ್ಮನವರಿಗೆ ವಿಶೇಷ ಪೂಜೆ ಮತ್ತು ಅಲಂಕಾರಗಳು, ದೇವಿ ಮಹಾತ್ಮೆ ಉಪನ್ಯಾಸ, ಪ್ರತಿನಿತ್ಯ ಪ್ರಸಾದ ಸೇರಿದಂತೆ ಅನೇಕ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳು ನೆರವೇರಿದವು. ಶತ ಚಂಡಿಕಾ ಯಾಗದ ಪೂರ್ಣಾಹುತಿ ದಿನ ತವನಿಧಿಯ ಶ್ರೀ ವೀರಭದ್ರೇಶ್ವರನ ಉತ್ಸವ, ಬೋರನಹಳ್ಳಿಯ ಬಸವೇಶ್ವರನ ಉತ್ಸವ, ಸಿಗರನಹಳ್ಳಿಯ ಶ್ರೀ ಬಾಣದೇವರು ಹಾಗೂ ಪ್ರತೀ ಗ್ರಾಮದವರು ಜಗನ್ಮಾತೆಗೆ ವಿಶೇ?ವಾಗಿ ಪೂರ್ಣಾಹುತಿಗೆ ವಸ್ತ್ರ ಸೇವೆಯನ್ನು ಸಮರ್ಪಿಸಿದರು. ಶತ ಚಂಡಿಕಾ ಯಾಗದ ಪರಮಾನ್ನವನ್ನು ಸಿದ್ಧಪಡಿಸಲು ಏಳು ಹಳ್ಳಿಗಳ ಪ್ರತಿಯೊಂದು ಮನೆಯಿಂದಲೂ ಒಂದು ಮುಷ್ಟಿ ಅಕ್ಕಿ ಬೆಲ್ಲವನ್ನು ಸಂಗ್ರಹಿಸಿ, ಯಾಗ ಪೂಜಾ ಮಹೋತ್ಸವಕ್ಕೆ ಸಮರ್ಪಿಸಿದರು. ಕಾರ್ಯಕ್ರಮದ ಪ್ರಧಾನ ಸೇವಾಕರ್ತರಾದ ಡಾ. ಚಂದ್ರಶೇಖರ್‌ ಹಾಗೂ ಡಾ. ಪ್ರಶಾಂತ್ ಗೌಡರು ಕುಟುಂಬ ಸಮೇತ ಉಪಸ್ಥಿತರಿದ್ದರು ಮತ್ತು ಏಳು ಹಳ್ಳಿಗಳ ೩,೫೦೦ಕ್ಕೂ ಹೆಚ್ಚು ಭಕ್ತರಿಗೆ ಮಹಾಪ್ರಸಾದ ರೂಪದಲ್ಲಿ ಭೋಜನಾ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ, ಸಂಸದ ಶ್ರೇಯಸ್ ಎಂ.ಪಟೇಲ್ ಅವರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭ್ರಷ್ಟಾಚಾರದ ವಿರುದ್ಧ ವಾಟಾಳ್ ಪಕ್ಷದಿಂದ ರಾಜ್ಯಾದ್ಯಂತ ಹೋರಾಟ: ವಾಟಾಳ್ ನಾಗರಾಜ್
ಮಳೆಗಾಗಿ ಪ್ರಾರ್ಥಿಸಿ ಮಳೆರಾಯನ ಹಬ್ಬ ಆಚರಿಸಿದ ಅರಕೆರೆ ಗ್ರಾಮಸ್ಥರು