ಉದ್ಯಾವರ: ಸಂಭ್ರಮದ ಚೂಡಿಪೂಜೆ ಸಂಪನ್ನ

KannadaprabhaNewsNetwork |  
Published : Aug 24, 2026, 02:45 AM IST
23ಚೂಡಿ | Kannada Prabha

ಸಾರಾಂಶ

ಇಲ್ಲಿನ ಉದ್ಯಾವರದ ಶ್ರೀ ವೀರವಿಠಲ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಗೌಡ ಸಾರಸ್ವತ ಸಮಾಜದ ಮುತೈದೆಯರು ಭಾನುವಾರ ತುಳಸಿ ಸನ್ನಿಧಿಯಲ್ಲಿ ಚೂಡಿ ಪೂಜೆ ನೆರವೇರಿಸಿ ಬಳಿಕ ಹೊಸ್ತಿಲು (ದ್ವಾರ) ಪೂಜೆ ಮಾಡಿ ನೆರವೇರಿಸಿದರು. ಅಲ್ಲದೇ ಶ್ರೀದೇವರಿಗೆ ಚೂಡಿ ಅರ್ಪಿಸಿ, ಬಳಿಕ ಅದನ್ನು ಹಿರಿಯ ಮುತೈದೆಯರಿಗೆ ನೀಡಿ ಆಶೀರ್ವಾದ ಪಡೆದರು.

ಉಡುಪಿ : ಇಲ್ಲಿನ ಉದ್ಯಾವರದ ಶ್ರೀ ವೀರವಿಠಲ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಗೌಡ ಸಾರಸ್ವತ ಸಮಾಜದ ಮುತೈದೆಯರು ಭಾನುವಾರ ತುಳಸಿ ಸನ್ನಿಧಿಯಲ್ಲಿ ಚೂಡಿ ಪೂಜೆ ನೆರವೇರಿಸಿ ಬಳಿಕ ಹೊಸ್ತಿಲು (ದ್ವಾರ) ಪೂಜೆ ಮಾಡಿ ನೆರವೇರಿಸಿದರು. ಅಲ್ಲದೇ ಶ್ರೀದೇವರಿಗೆ ಚೂಡಿ ಅರ್ಪಿಸಿ, ಬಳಿಕ ಅದನ್ನು ಹಿರಿಯ ಮುತೈದೆಯರಿಗೆ ನೀಡಿ ಆಶೀರ್ವಾದ ಪಡೆದರು. ಜಿ. ಎಸ್. ಬಿ. ಸಮಾಜದ ಮುತೈದೆ ಮಹಿಳೆಯರು ಶ್ರಾವಣ ಮಾಸದಲ್ಲಿ ಪ್ರಕೃತಿಯಲ್ಲಿ ದೊರೆಯುವ ವಿವಿಧ ಬಗೆಯ ಹೂಗಳಿಂದ ಚೂಡಿಯನ್ನು ಕಟ್ಟಿ ಪೂಜಿಸುತ್ತಾರೆ. ಮನೆಯಲ್ಲಿ ನೂತನವಾಗಿ ಮದುವೆಯಾದ ಮದುಮಗಳಿದ್ದರೇ ಆಕೆಯ ಕೈಯಿಂದ ಪ್ರಥಮ ಚೂಡಿ ಪೂಜೆಯನ್ನು ನೆರವೇರಿಸುವ ಸಂಪ್ರದಾಯವಿದೆ. ಬಳಿಕ ತಾಯಿ, ಅತ್ತೆ, ಮನೆಯವರೊಂದಿಗೆ ಸೇರಿ ತುಳಸೀ ಸನ್ನಿಧಿಯಲ್ಲಿ ಚೂಡಿ ಪೂಜೆ ನೆರವೇರಿಸಿ, ಬಳಿಕ ಪರಸ್ಪರ ವಿನಿಮಯ ಮಾಡಿಕೊಂಡು ಸಂಭ್ರಮ ಪಡುತ್ತಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಮೀಣ ಕ್ರೀಡೆ ಉಳಿಸಿ ಬೆಳೆಸುವುದು ಅಗತ್ಯ: ಎ.ಎಸ್‌. ಪೊನ್ನಣ್ಣ
ಯುವಪೀಳಿಗೆಗೆ ಭತ್ತ ಕೃಷಿ ಅರಿವು ಅಗತ್ಯ: ಮಧುಕುಮಾರ್