ಭತ್ತದ ಕೃಷಿ ನಶಿಸುತ್ತಿರುವ ಈ ಕಾಲಘಟ್ಟದಲ್ಲಿ ಮಕ್ಕಳಿಗೆ ಭತ್ತ ನಾಟಿ ಬಗ್ಗೆ ಗದ್ದೆಹಳ್ಳ ಹೋಮ್ಸ್ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದು ಆನೆಕಾಡು ಅರಣ್ಯ ವಲಯ ಅಧಿಕಾರಿ ಮಧುಕುಮಾರ್ ಹೇಳಿದರು.

ಕನ್ನಡಪ್ರಭವಾರ್ತೆ ಸುಂಟಿಕೊಪ್ಪ

ಭತ್ತದ ಕೃಷಿ ನಶಿಸುತ್ತಿರುವ ಈ ಕಾಲಘಟ್ಟದಲ್ಲಿ ಮಕ್ಕಳಿಗೆ ಭತ್ತ ನಾಟಿ ಬಗ್ಗೆ ಗದ್ದೆಹಳ್ಳ ಹೋಮ್ಸ್ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದು ಆನೆಕಾಡು ಅರಣ್ಯ ವಲಯ ಅಧಿಕಾರಿ ಮಧುಕುಮಾರ್ ಹೇಳಿದರು.

ಗದ್ದೆಹಳ್ಳದ ಹೋಮ್ಸ್ ಸಂಸ್ಥೆಯ ವತಿಯಿಂದ ಕೃತಿಕಾ, ಸದಾನಂದ ಕರುಂಬಯ್ಯ ಅವರ ಗದ್ದೆಯಲ್ಲಿ ಏರ್ಪಡಿಸಲಾಗಿದ್ದ ''''''''ಜಿಜಿಎ ನಾಟಿ ಉತ್ಸವ- ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಕ್ಷಿಗಳು ಯಾವ ರೀತಿ ತಮ್ಮ ಬಳಗಕ್ಕೆ ಆಹಾರ ಸಂಗ್ರಹಿಸಿ ಪೋಷಣೆ ಮಾಡುತ್ತವೆ ಎಂದು ಮಕ್ಕಳಿಗೆ ಮಾಹಿತಿ ನೀಡಿದರಲ್ಲದೇ, ಪ್ರತಿಯೊಬ್ಬ ರೈತರು ಭತ್ತದ ಕೃಷಿಯ ಬಗ್ಗೆ ಕಾಳಜಿ ವಹಿಸಬೇಕಾಗಿದೆ ಎಂದರು‌‌.

ಮಡಿಕೇರಿ ಕೃಷಿ ವಿದ್ಯಾಲಯದ ವಿಸ್ತರಣಾ ಶಿಕ್ಷಣ ಘಟಕದ ಪ್ರಾಧ್ಯಾಪಕ ಡಾ‌.ಎಚ್.ಸಿ.ಲತಾ ಮಾತನಾಡಿ, ಭತ್ತದ ಕೃಷಿ ಅದರ ಬೆಳವಣಿಗೆ ಮತ್ತು ಅದರ ಪರಿಕಲ್ಪನೆಯ ಬಗ್ಗೆ ಸವಿಸ್ತಾರವಾಗಿ ರೈತರಿಗೆ ಮತ್ತು ಮಕ್ಕಳಿಗೆ ಮಾಹಿತಿ ನೀಡಿದರು.

ನಾಟಿ ಉತ್ಸವ -2026 ಅನ್ನು ಉದ್ಯಮಿ ಹಾಗೂ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಎಸ್. ಜಿ .ಶ್ರೀನಿವಾಸ್ ಚಾಲನೆ ನೀಡಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಾದ ಕೆ.ಎಲ್.ಕುಶಾಲಿ, ಶಿಕ್ಷಕಿ ಶಾಂತಿ ದೇವರಾಜ್, ಅರ್ಪಿತಾ ಧರ್ಮಪ್ಪ, ಪ್ರೇಮಾ ಗಣೇಶ್ ಕಟ್ಟೆಮನೆ, ಭಯಾನಕ, ಭತ್ತದ ನಾಟಿ ಪ್ರವೀಣೆ ಕಮಲ ಅವರುಗಳಿಗೆ ಜಿಜಿಎ ಶಕ್ತಿ ಅವಾರ್ಡ್ ನೀಡಿ ಗೌರವಿಸಲಾಯಿತು‌.

ಉದ್ಯಮಿ ಪ್ರಸನ್ನ ಎಡಕೇರಿ, ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿ ಪ್ರಸಾದ್, ಮನೋರೋಗದ‌ ವಿಶೇಷ ಶಿಕ್ಷಕಿ ಅನ್ನಮ್ ಜೀರಾ, ಮಡಿಕೇರಿ ಗೌಡ ಸಮಾಜದ ಅಧ್ಯಕ್ಷ ಪಿ.ಪಿ.ಜಯನಂದ, ಒಳಾಂಗಣ ವಿನ್ಯಾಸಕಿ ಕೃತಿಕಾ ಸದಾನಂದ್, ಓಎಪಿಪಿಎ ಸಂಸ್ಥೆಯ ಮಾಲೀಕರಾದ ಗಂಗೂಬಾಯಿ, ಹೋಮ್ಸ್ ಸಂಸ್ಥೆಯ ಸಂಘಟಕರಾದ ಸನ್ಮಾನ್, ತೃಶಾಲ್ ಸನ್ಮಾನ್, ಗಾನ ಪಾರ್ಥ, ನಿಡುಮಲೆ ಮಾದವ, ಆಯೋಜಕರಾದ ಪಾರ್ಥ ಭೀಮಯ್ಯ, ಪವಿತ್ರ ಶೆಟ್ಟಿ, ಪ್ರದೀಶ ಇತರರು ಹಾಜರಿದ್ಸರು.

300ಕ್ಕೂ ಅಧಿಕ ವಿದ್ಯಾರ್ಥಿಗಳು: ಈ ನಾಟಿ ಉತ್ಸವದಲ್ಲಿ ವಿವಿಧ ಶಾಲೆಗಳ 300 ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡು ನುರಿತ ನಾಟಿ ಕೆಲಸಗಾರರ ಜೊತೆ ಯಲ್ಲಿ ಭತ್ತದ ನಾಟಿ ಮಾಡುವ ಮೂಲಕ ನಾಟಿಯ ಬಗ್ಗೆ ಅನುಭವ ಪಡೆದುಕೊಂಡರು.