ತೋಟದಲ್ಲಿ ಯುಗಾದಿ ಸಂಭ್ರಮ

KannadaprabhaNewsNetwork |  
Published : Apr 12, 2024, 01:00 AM IST
ಫೋಟೋ: 10ಜಿಎಲ್ಡಿ2- ಗುಳೇದಗುಡ್ಡ ಪಟ್ಟಣದ ಹೊರವಲಯದ  ತೋಟದಲ್ಲಿ  ಮಂಗಳವಾರ ಯುಗಾದಿ ಸಂಭ್ರಮ ಆಚರಣೆ ವಿಶಿಷ್ಟವಾಗಿ ನಡೆಯಿತು. | Kannada Prabha

ಸಾರಾಂಶ

ಗುಳೇದಗುಡ್ಡ: ಪಟ್ಟಣದ ಹೊರವಲಯದ ತೂಗುಣಸಿ ಕ್ರಾಸ್ ಹತ್ತಿರ ಇರುವ ಪಂಪಾಪತಿ ಹೆಗಡೆಯವರ ತೋಟದಲ್ಲಿ ಯುಗಾದಿ ಪಾಡ್ಯದ ದಿನ ಯುಗಾದಿ ಸಂಭ್ರಮ ಆಚರಣೆ ವಿಶಿಷ್ಟವಾಗಿ ನಡೆಯಿತು. ಬೆಳಿಗ್ಗೆ ಭೂತಾಯಿ, ನೇಗಿಲ ಮುಂತಾದ ಪೂಜೆ ನೆರವೇರಿತು. ನಂತರ ಶಿವು ಉದ್ನೂರ ಕಲಾ ತಂಡದ ಸದಸ್ಯರಾದ ಅನಿಲ್ ಬುಳ್ಳಾ, ಹುಚ್ಚೇಶ ಮೇಟಿ, ಶಂಕರ ಸಣಪಾ ಅವರು ಕನ್ನಡ ಮತ್ತು ಜಾನಪದ ಹಾಡುಗಳನ್ನು ಹಾಡಿದರು.

ಗುಳೇದಗುಡ್ಡ: ಪಟ್ಟಣದ ಹೊರವಲಯದ ತೂಗುಣಸಿ ಕ್ರಾಸ್ ಹತ್ತಿರ ಇರುವ ಪಂಪಾಪತಿ ಹೆಗಡೆಯವರ ತೋಟದಲ್ಲಿ ಯುಗಾದಿ ಪಾಡ್ಯದ ದಿನ ಯುಗಾದಿ ಸಂಭ್ರಮ ಆಚರಣೆ ವಿಶಿಷ್ಟವಾಗಿ ನಡೆಯಿತು. ಬೆಳಿಗ್ಗೆ ಭೂತಾಯಿ, ನೇಗಿಲ ಮುಂತಾದ ಪೂಜೆ ನೆರವೇರಿತು. ನಂತರ ಶಿವು ಉದ್ನೂರ ಕಲಾ ತಂಡದ ಸದಸ್ಯರಾದ ಅನಿಲ್ ಬುಳ್ಳಾ, ಹುಚ್ಚೇಶ ಮೇಟಿ, ಶಂಕರ ಸಣಪಾ ಅವರು ಕನ್ನಡ ಮತ್ತು ಜಾನಪದ ಹಾಡುಗಳನ್ನು ಹಾಡಿದರು. ಅಲ್ಲಿ ನೆರೆದಿದ್ದ ಸಭೀಕರು ಹಾಡುಗಳನ್ನು ಕೇಳಿ, ದೇಶಿ ಊಟ ಸವಿದು ಸಂಭ್ರಮಿಸಿದರು. ಈ ವೇಳೆ ಸಾಧಕ ದಂಪತಿಗಳಾದ ನಿಂಗಪ್ಪ ಎಣ್ಣಿ ಮತ್ತು ಮಲ್ಲು ತಾಂಡೂರ ದಂಪತಿಗಳನ್ನು ಸತ್ಕರಿಸಲಾಯಿತು. ಇನ್ನೂರಕ್ಕೂ ಹೆಚ್ಚು ಜನರು ಯುಗಾದಿ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಪಂಪಾಪತಿ ಹೆಗಡೆ ಮತ್ತು ಪೂರ್ಣಿಮಾ ಹೆಗಡೆ, ಶ್ರೀಕಾಂತ ಹುನಗುಂದ, ಸುರೇಶ ರಾಜನಾಳ, ವಿ.ಕೆ.ಬದಿ ಮುಂತಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5000 ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ : ಲಕ್ಷ್ಮೀ
ನಾಯಿಗಳ ಮೇಲೂ ತೆರಿಗೆ ಹೇರಿಕೆಗೆ ಮುಂದಾದ ಸರ್ಕಾರ!