ಉಜಿರೆ ಎಸ್ಡಿಎಂ ಸ್ನಾತಕೋತ್ತರ ಕೇಂದ್ರದ ಮನೋವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ವಿಭಾಗ ರಜತ ಸಂಭ್ರಮ

KannadaprabhaNewsNetwork |  
Published : Dec 10, 2024, 12:31 AM IST
ಎಸ್ ಡಿ ಎಮ್ | Kannada Prabha

ಸಾರಾಂಶ

ಉಜಿರೆ ಎಸ್‌ಡಿಎಂ ಸ್ನಾತಕೋತ್ತರ ಕೇಂದ್ರದ ಮನೋವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ವಿಭಾಗವು 25 ವರ್ಷಗಳ ಮೌಲಿಕ ಶಿಕ್ಷಣ ಸಂಶೋಧನಾತ್ಮಕ ಮತ್ತು ಕೌಶಲ್ಯಯುತ ಹೆಜ್ಜೆಗಳನ್ನು ಮೆಲಕು ಹಾಕುವ ಉದ್ದೇಶದೊಂದಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 25 ಬಗೆಯ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಕನ್ನಡಪ್ರಭ ವಾರ್ತೆ ಬಳ್ತಂಗಡಿ

ಉಜಿರೆ ಎಸ್‌ಡಿಎಂ ಸ್ನಾತಕೋತ್ತರ ಕೇಂದ್ರದ ಮನೋವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ವಿಭಾಗವು 25 ವರ್ಷಗಳ ಮೌಲಿಕ ಶಿಕ್ಷಣ ಸಂಶೋಧನಾತ್ಮಕ ಮತ್ತು ಕೌಶಲ್ಯಯುತ ಹೆಜ್ಜೆಗಳನ್ನು ಮೆಲಕು ಹಾಕುವ ಉದ್ದೇಶದೊಂದಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 25 ಬಗೆಯ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದರ ಅಂಗವಾಗಿ ಡಿ.13 ಮತ್ತು 14 ರಂದು ‘ಬ್ರೇಕಿಂಗ್ ಬ್ಯಾರಿಯರ್ಸ್ ಅಡ್ವಾನ್ಸಿಂಗ್ ಸೈಕಲಾಜಿಕಲ್ ವೆಲ್ ಬೀಯಿಂಗ್ ಅಕ್ರಾಸ್ ಬಾರ್ಡರ್ಸ್’ ಶೀರ್ಷಿಕೆಯಡಿ ಎರಡು ದಿನಗಳ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಿದೆ.

ಕಾಲೇಜಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಎಸ್‌ಡಿಎಂ ಸ್ವಾಯತತ್ತ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ.ಕುಮಾರ್ ಹೆಗ್ಡೆ, ವಿಚಾರ ಸಂಕಿರಣವನ್ನು ಕಾಲೇಜಿನ ಇಂದ್ರಪ್ರಸ್ತ ಸಭಾಭವನದಲ್ಲಿ 13ರಂದು ಬೆಳಗ್ಗೆ 10 ಗಂಟೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಉದ್ಘಾಟಿಸಲಿದ್ದಾರೆ. ಎಸ್ ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ನವದೆಹಲಿಯ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ರಮೇಶ್ ಸಾಲಿಯನ್, ವಿಶ್ರಾಂತ ಪ್ರಾಧ್ಯಾಪಕಿ ಡಾ.ಎಂ.ವೈ. ಮಂಜುಳಾ, ಕ್ಷೇಮವನದ ಸಿಇಒ ಶ್ರದ್ಧಾ ಅಮಿತ್ ಮತ್ತು ಎಸ್ ಡಿಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ವಿಶ್ವನಾಥ್ ಪಿ. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ. ಪ್ರಾಂಶುಪಾಲ ಡಾ. ಬಿ.ಎ. ಕುಮಾರ್ ಹೆಗ್ಡೆ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.

ಅಮೆರಿಕಾದ ವಿಸ್ಕಾನ್ಸಿನ್ ಮ್ಯಾಡಿಸನ್ ವಿಶ್ವವಿದ್ಯಾಲಯದ ಮನೋಶಾಸ್ತ್ರಜ್ಞೆ ಡಾ.ಕ್ಯಾರೋಲ್ ಡಿ.ರಿಫ್, ಅವರು ‘ಮನೋಭಾವಾತ್ಮಕ ಕ್ಷೇಮಾಭ್ಯುದಯ ಸಂಬಂಧಿತ ಜಾಗತಿಕ ನೆಲೆಗಳು’ ಕುರಿತು, ನವದೆಹಲಿಯ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ರಮೇಶ್ ಸಾಲಿಯಾನ್ ಅವರು ‘ಮಾನಸಿಕ ಆರೋಗ್ಯ ಮತ್ತು ರಾಷ್ಟ್ರದ ಕ್ಷೇಮಾಭ್ಯುದಯ’ ಕುರಿತು,ಕೊಲ್ಕತ್ತಾದ ಪ್ರಾಧ್ಯಾಪಕ ಡಾ. ಸುಮಿತ್ ದತ್ತಾ ಅವರು ‘ಆರೋಗ್ಯ ಕ್ಷೇಮಾಭ್ಯುದಯ ಮತ್ತು ಒತ್ತಡ ನಿರ್ವಹಣೆ’ ಕುರಿತು ವಿಚಾರ ಮಂಡಿಸಲಿದ್ದಾರೆ ಎಂದು ತಿಳಿಸಿದರು.

14ರಂದು ಸಂಜೆ 4 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ್ ಹೆಗ್ಡೆ ವಹಿಸಲಿದ್ದು, ನಿವೃತ್ತ ಪ್ರೊಫೆಸರ್ ಎಚ್. ಡಿ. ಗಣೇಶ್ ರಾವ್, ಶಾಸಕ ಹರೀಶ್ ಪೂಂಜ, ಆಳ್ವಾಸ್ ಮೂಡುಬಿದಿರೆಯ ಡಾ. ದೀಪಾ ಕೊಠಾರಿ ಕಾಲೇಜಿನ ವೈಸ್ ಪ್ರಿನ್ಸಿಪಾಲ್ ಶಶಿಶೇಖರ ಕಾಕತ್ಕರ್, ಪಿಜಿ ವಿಭಾಗದ ಡೀನ್ ಪ್ರೊ. ವಿಶ್ವನಾಥ ಪಿ. ಉಪಸ್ಥಿತರಿರುವರು ಎಂದರು.

ಪಿಜಿ ವಿಭಾಗದ ಡೀನ್ ಪ್ರೊ. ವಿಶ್ವನಾಥ ಪಿ., ವಿಭಾಗ ಮುಖ್ಯಸ್ಥೆ ಡಾ.ವಂದನಾ ಜೈನ್, ಉಪನ್ಯಾಸಕರಾದ ಡಾ. ಭಾಸ್ಕರ್ ಹೆಗಡೆ, ಅಶ್ವಿನಿ ಎಸ್. ಶೆಟ್ಟಿ,ಡಾ. ಮಹೇಶ್ ಬಾಬು ಎನ್‌, ಅಶ್ವಿನಿ ಎಚ್., ಸಿಂಧು ವಿ.,ಪದ್ಮಶ್ರೀ ಕೆ. ಇದ್ದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ
ಬೆಂಗಳೂರಿಂದ ಪುಣೆಗೆ ಹೊಸ ಹೈಸ್ಪೀಡ್‌ ರೈಲು ಘೋಷಣೆ?