ನಾಳೆಯಿಂದ ಎಸ್.ಡಿ.ಎಂ ‘ಝೇಂಕಾರ’ ಸಾಂಸ್ಕೃತಿಕ ಉತ್ಸವ

KannadaprabhaNewsNetwork |  
Published : Mar 13, 2024, 02:03 AM IST
11 | Kannada Prabha

ಸಾರಾಂಶ

ಪ್ರತಿವರ್ಷವೂ ಆಯೋಜಿತವಾಗುವ ಝೇಂಕಾರ ಸ್ಟಾರ್ ನೈಟ್‌ಗೆ ಖ್ಯಾತ ಜನಪ್ರಿಯ ನಟರು ಆಗಮಿಸುತ್ತಾರೆ. ಬೆಳೆಗಿನ ಅವಧಿಯಲ್ಲಿ ಉತ್ಸವಕ್ಕೆ ಚಾಲನೆ ನೀಡಿದ ನಂತರ ವಿವಿಧ ಸ್ಪರ್ಧೆಗಳು ಎರಡು ದಿನಗಳ ಕಾಲ ನಡೆಯಲಿವೆ. ಆರಂಭದ ದಿನ ಸಂಜೆ ನಡೆಯುವ ಸ್ಟಾರ್‌ನೈಟ್ ಕಾರ್ಯಕ್ರಮವನ್ನು ರಮೇಶ್ ಅರವಿಂದ್ ನಡೆಸಿಕೊಡಲಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಯುವ ಪ್ರತಿಭಾನ್ವಿತರ ಕಲಾತ್ಮಕ ಅಭಿವ್ಯಕ್ತಿಗೆ ವೇದಿಕೆ ಒದಗಿಸಿಕೊಡುವ ಎಸ್ ಡಿ ಎಂ ಸ್ನಾತಕೋತ್ತರ ಕೇಂದ್ರದ ಪ್ರಸಕ್ತ ವರ್ಷದ ಝೇಂಕಾರದ ಐದನೇ ಆವೃತ್ತಿಯ ಸಾಂಸ್ಕೃತಿಕ ಉತ್ಸವ ಮಾರ್ಚ್ ೧೪- ೧೫ ರಂದು ನಡೆಯಲಿದೆ. ಈ ಸಲದ ಪ್ರಮುಖ ಆಕರ್ಷಣೆ ಖ್ಯಾತ ಚಲನಚಿತ್ರ ನಟ ರಮೇಶ್ ಅರವಿಂದ್ ಗಮನ ಸೆಳೆಯಲಿದ್ದಾರೆ.ಪ್ರತಿವರ್ಷವೂ ಆಯೋಜಿತವಾಗುವ ಝೇಂಕಾರ ಸ್ಟಾರ್ ನೈಟ್‌ಗೆ ಖ್ಯಾತ ಜನಪ್ರಿಯ ನಟರು ಆಗಮಿಸುತ್ತಾರೆ. ಬೆಳೆಗಿನ ಅವಧಿಯಲ್ಲಿ ಉತ್ಸವಕ್ಕೆ ಚಾಲನೆ ನೀಡಿದ ನಂತರ ವಿವಿಧ ಸ್ಪರ್ಧೆಗಳು ಎರಡು ದಿನಗಳ ಕಾಲ ನಡೆಯಲಿವೆ. ಆರಂಭದ ದಿನ ಸಂಜೆ ನಡೆಯುವ ಸ್ಟಾರ್‌ನೈಟ್ ಕಾರ್ಯಕ್ರಮವನ್ನು ರಮೇಶ್ ಅರವಿಂದ್ ನಡೆಸಿಕೊಡಲಿದ್ದಾರೆ.ಮಾಕ್ ಪ್ರೆಸ್, ಪ್ರೊ ಪ್ರೆಸೆಂಟರ್, ಕಲರ್ ಫುಲ್ ಕ್ಯಾನ್ವಾಸ್‌ ಶೀರ್ಷಿಕೆಯ ವೈಯುಕ್ತಿಕ ವಿಭಾಗದ ಸ್ಪರ್ಧೆಗಳು ನಡೆಯಲಿವೆ. ಗ್ರುಪ್ ಇವೆಂಟ್ ವಿಭಾಗದಲ್ಲಿ ಸಮೂಹ ನೃತ್ಯ, ಫ್ಯಾಷನ್ ಪರೇಡ್, ರಸಪ್ರಶ್ನೆ, ಔಟ್ ಡೋರ್ ಇವೆಂಟ್ ವಿಭಾಗದಲ್ಲಿ ಗಲ್ಲಿ ಕ್ರಿಕೆಟ್ ಪಂದ್ಯಾವಳಿ, ಸ್ಪಾಟ್ ಇವೆಂಟ್ ವಿಭಾಗದಲ್ಲಿ ರೀಲ್ ಮೇಕಿಂಗ್, ಸ್ಪಾಟ್ ಫೋಟೋಗ್ರಫಿ ಸ್ಪರ್ಧೆಗಳು ಏರ್ಪಡಲಿವೆ.ಖ್ಯಾತ ನಟರಾದ ದಿಗಂತ್ ಆರಂಭಿಕ ವರ್ಷದ ಝೇಂಕಾರ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದ್ದರು. ತುಳು ಚಿತ್ರರಂಗದ ಹೆಸರಾಂತ ಕಲಾವಿದ ಭೋಜರಾಜ ವಾಮಂಜೂರು, ‘ಫಸ್ಟ್ ರ‍್ಯಾಂಕ್ ರಾಜು’ ಖ್ಯಾತಿಯ ಗುರುನಂದನ್, ಕಿರುತೆರೆ ಕಲಾವಿದ ಅಮಿತ್ ಅವರು ಎರಡನೇ ಆವೃತ್ತಿಯ ಝೇಂಕಾರದ ಸ್ಟಾರ್ ನೈಟ್ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ರಕ್ಷಿತ್ ಶೆಟ್ಟಿ, ರಾಜ್ ಬಿ. ಶೆಟ್ಟಿ, ರಿಷಭ್ ಶೆಟ್ಟಿ ಅವರು ನಂತರದ ಝೇಂಕಾರದಲ್ಲಿ ಪಾಲ್ಗೊಂಡಿದ್ದರು. ನಂತರ ನಡೆದ ಝೇಂಕಾರ ಸ್ಟಾರ್ ನೈಟ್‌ಗೆ ಗಾಯಕ ವಾಸುಕಿ ವೈಭವ್ ಆಗಮಿಸಿದ್ದರು.

ರಾಜ್ಯದ ವಿವಿಧೆಡೆಗಳಿಂದ ೪೦ಕ್ಕೂ ಹೆಚ್ಚು ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಎರಡು ದಿನಗಳ ಕಾಲ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಅಂಗಳ ವೈವಿಧ್ಯಮಯ ಸ್ಪರ್ಧೆಗಳಲ್ಲಿ ಭಾಗವಹಿಸುವ ಪ್ರತಿಭಾನ್ವಿತ ಯುವ ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣದ ವೇದಿಕೆಯಾಗಿ ಕಂಗೊಳಿಸಲಿದೆ. ವಿವಿಧ ವಿಭಾಗಗಳ ಸ್ಪರ್ಧೆಗಳಲ್ಲಿ ವಿಜೇತರಾಗುವ ವಿದ್ಯಾರ್ಥಿಗಳು ಒಂದು ಲಕ್ಷ ರುಪಾಯಿ ಮೌಲ್ಯದ ವಿವಿಧ ಬಹುಮಾನಗಳನ್ನು ಪಡೆಯಲಿದ್ದಾರೆ.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ