ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಆಸ್ಪತ್ರೆಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರಿಗೆ ಅಲೆದಾಡುವ ಹಳ್ಳಿಯ ಜನರ ಆರೋಗ್ಯ ರಕ್ಷಣೆಯ ಕಾಳಜಿಯಿಂದ ಗ್ರಾಮೀಣ ಜನತೆಯ ವೈದ್ಯಕೀಯ ಸೇವೆಗಾಗಿ 35 ಕೋಟಿ ರು. ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣಗೊಂಡಿತು. ಈಗ ಸುಸಜ್ಜಿತ ಆಸ್ಪತ್ರೆಯಾಗಿ 11ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ ಎಂದರು.
20 ತಜ್ಞ ವೈದ್ಯರು, 19 ಸೂಪರ್ ಸ್ಪೆಷಾಲಿಟಿ ವೈದ್ಯರು ಲಭ್ಯವಿದ್ದು ಹೆಚ್ಚಿನ ಸೇವೆಗಳು ದಿನದ 24 ಗಂಟೆಯೂ ಲಭ್ಯವಿದೆ, ವಿವಿಧ ಆರೋಗ್ಯ ವಿಮಾ ಯೋಜನೆಗಳ ಮೂಲಕ ನಗದುರಹಿತ ಚಿಕಿತ್ಸೆ ಸೌಲಭ್ಯ, ಮಿತದರದಲ್ಲಿ ಹೈಟೆಕ್ ವೈದ್ಯಕೀಯ ಸೇವೆ, ಡಯಾಲಿಸಿಸ್, ಸಿಟಿ ಸ್ಕ್ಯಾನ್, ಡಿಜಿಟಲ್ ಎಂಆರ್ ಡಿ,ಕಾರ್ಡಿಕ್ ಆಂಬುಲೆನ್ಸ್, ದಂತ ಚಿಕಿತ್ಸಾಲಯ, ಕಣ್ಣಿನ ಶಸ್ತ್ರ ಚಿಕಿತ್ಸೆ, ಫೂಟ್ ಕೇರ್ ಸೆಂಟರ್, ಅಮ್ಮ ಬರ್ತ್ ಸೆಂಟರ್ ಮೊದಲಾದ ಸೌಲಭ್ಯಗಳೊಂದಿಗೆ ಬಡ ರೋಗಿಗಳಿಗೆ ಉಚಿತ ಆರೋಗ್ಯ ಸೇವೆಯನ್ನು ನೀಡುತ್ತಿದೆ. ಕಳೆದ ಸಾಲಿನಲ್ಲಿ 2.23 ಕೋಟಿ ರು. ಮೌಲ್ಯದ ಔಷಧ ಮತ್ತು ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗಿದೆ ಎಂದರು.ಪ್ರತಿ ತಿಂಗಳು ಆಸ್ಪತ್ರೆಯಲ್ಲಿ ಮತ್ತು ವೈದ್ಯರು ಇಲ್ಲದ ಗ್ರಾಮೀಣ ಪ್ರದೇಶದಲ್ಲಿ ಉಚಿತ ವೈದ್ಯಕೀಯ ಶಿಬಿರಗಳು ನಡೆಯುತ್ತಿದ್ದು ಕಳೆದ ಸಾಲಿನಲ್ಲಿ 58 ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ 11,752 ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡಿದ್ದಾರೆ, ಶಿವರಾತ್ರಿ ಸಂದರ್ಭ 28,879 ಮಂದಿ ಪಾದಯಾತ್ರಿಗಳಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ವೈದ್ಯಕೀಯ ಸೇವೆ ಹಾಗೂ 6 ಲಕ್ಷ ರು. ಮೌಲ್ಯದ ಉಚಿತ ಔಷಧವನ್ನು ನೀಡಲಾಗಿದೆ ಎಂದರು.
ಡಾ. ದೇವೇಂದ್ರ ಕುಮಾರ್, ಮುಖ್ಯ ವೈದ್ಯಾಧಿಕಾರಿ ಡಾ. ಸ್ವಾತಿಕ್ ಜೈನ್ ಇದ್ದರು. ಆಸ್ಪತ್ರೆಯ ಪ್ರಬಂಧಕ ನಾರಾಯಣ ಬಿ. ಸ್ವಾಗತಿಸಿದರು.