ಎಚ್.ಎಂ.ಸದಾನಂದ
ಭಕ್ತರನ್ನು ಕಾಪಾಡುವ ಆರಾಧ್ಯದೈವ ಉಕ್ಕಡಗಾತ್ರಿ ಗ್ರಾಮದ ಕರಿಬಸವೇಶ್ವರ ಅಜ್ಜಯ್ಯನ ಜಾತ್ರೆ ಫೆ.೧೭ರಿಂದ ಫೆ.೨೪ರವರೆಗೆ ಜರುಗಲಿದೆ. ನೆರೆ ರಾಜ್ಯದ ತಮಿಳುನಾಡು, ಕೇರಳ, ತೆಲಂಗಾಣ ಹಾಗೂ ನಾಡಿನ ಹಾಗೂ ನರೆ ಆಂಧ್ರ, ತೆಲಂಗಾಣ, ತಮಿಳುನಾಡು, ಕೇರಳ ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ನಂಬಿಕೆ, ಸ್ವಯಂ ಆಸಕ್ತಿಯಿಂದ ಹರಕೆ ತೀರಿಸಲು ಕರಿಬಸವೇಶ್ವರನ ಕ್ಷೇತ್ರಕ್ಕೆ ತಂಡೋಪವಾಗಿ ಆಗಮಿಸಲಿದ್ದು, ಬಣ್ಣದ ದೀಪಾಲಂಕಾರಗಳಿಂದ ಇಡೀ ಗ್ರಾಮ ಸಿದ್ದಗೊಂಡಿದೆ,
ಸಮೀಪದ ಹರಿಹರ ತಾಲೂಕು ಉಕ್ಕಡಗಾತ್ರಿ ಕರಿಬಸವೇಶ್ವರ ಸ್ವಾಮಿ ಜಾತ್ರೆಯ ಸಮಾರಂಭ ಫೆ.೧೭ರಿಂದ ಆರಂಭವಾಗಲಿದೆ. ಅಂದು ಬೆಳಿಗ್ಗೆ ೯ ಗಂಟೆಗೆ ಗುರು ಕರಿಬಸವೇಶ್ವರ ಗದ್ದಿಗೆಯ ಮಹಾಪೂಜೆ, ನಂತರ ನಂದಿಗುಡಿ ಮಠದ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ನಂದಿ ಧ್ವಜಾರೋಹಣ ನೆರವೇರಿಸುವ ಮೂಲಕ ಜಾತ್ರೆಗೆ ಚಾಲನೆ ನೀಡುವರು. ರಾತ್ರಿ ಕೀರ್ತನೆ, ಶಿವಭಜನೆ, ಜಾಗರಣೆ ನಡೆಯುವುದು, ಫೆ ೧೮ಕ್ಕೆ ಕರಿಬಸವೇಶ್ವರನ ಮಹಾ ರಥೋತ್ಸವ, ಫೆ ೧೯ಕ್ಕೆ ಜವಳ, ಹರಕೆ, ಧಾನ್ಯಗಳೊಂದಿಗೆ ತುಲಾಭಾರ, ಫೆ೨೦, ೨೧ಕ್ಕೆ ಕಾಣಿಕೆ ಒಪ್ಪಿಸುವುದು, ಬಹಿರಂಗ ಜಂಗಿ ಕುಸ್ತಿಗಳು, ಫೆ ೨೨ಕ್ಕೆ ಪೂಜೆ ನಂತರ ಫಳಾರ ಹಾಕಿಸುವುದು, ಸ್ವಾಮಿಗೆ ರಾಜೋಪಚಾರ ಪೂಜೆ, ಫೆ ೨೩ಕ್ಕೆ ಸ್ವಾಮಿಯ ಬೆಳ್ಳಿ ರಥೋತ್ಸವ, ರಾತ್ರಿ ಪಾಲಿಕೋತ್ಸವ. ಫೆ ೨೪ಕ್ಕೆ ಅಂತಿಮ ದಿನ ಭಕ್ತರಿಗೆ ಫಳಾರ ಹಂಚುವ ಕಾರ್ಯಕ್ರಮ ಇದೆ. ಜನಪದ ಕಲಾತಂಡಗಳು ಜಾತ್ರೆಗೆ ಮೆರುಗು ನೀಡಲಿವೆ. ಭದ್ರತೆಗಾಗಿ ಹೆಚ್ಚುವರಿ ೨೦೦ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.ಕರಿಬಸವೇಶ್ವರನ ವಿದ್ಯಾಸಂಸ್ಥೆಯಡಿ ಬಡ ಮಕ್ಕಳಿಗೆ ಉಚಿತ ಶಿಕ್ಷಣ. ಆಂಗ್ಲ ಮಾಧ್ಯಮ ತರಗತಿಗಳು ನಡೆಯುತ್ತಿದೆ. ಲಕ್ಷಾಂತರ ಭಕ್ತರಿಗೆ ಸ್ನಾನಘಟ್ಟ, ೨೮೦೦೦ ಅಡಿ ವಿಸ್ತೀರ್ಣದ ಸಾಮೂಹಿಕ ವಸತಿ ಸೌಕರ್ಯ ಕಲ್ಪಿಸುವ ಕಾಮಗಾರಿ ಮುಕ್ತಾಯವಾಗಿದೆ, ಸುಸಜ್ಜಿತ ಶೌಚಾಲಯ, ವಸತಿ ವ್ಯವಸ್ಥೆ ಒದಗಿಸಿದೆ. ಭಕ್ತರ ವಸತಿಗೆ ೬೦೦ ಕ್ಕೂ ಹೆಚ್ಚು ಕೊಠಡಿಯನ್ನು ನಿರ್ಮಿಸಲಾಗಿದೆ. ಭಕ್ತರಿಗೆ ಅನಾಹುತ ತಪ್ಪಿಸಲು ತುಂಗಭದ್ರಾ ನದಿಗೆ ತಡೆ ಗೇಟ್ ಮಾಡಿದೆ, ೬೦ ಯುವಕರ ಪಡೆ ಸ್ವಚ್ಚತಾ ಕಾರ್ಯ ಮಾಡುತ್ತಿದೆ,
೨೫೦*೧೫೫ ವಿಸ್ತೀರ್ಣದಲ್ಲಿ ೨೦ ಕೋಟಿ ರು. ವೆಚ್ಚದ ದಾಸೋಹ ಮಂದಿರ ಪ್ರಗತಿಯಲ್ಲಿದೆ. ಹಲವು ವರ್ಷಗಳಿಂದ ಪ್ರಸಾದ ವ್ಯವಸ್ಥೆ ಮತ್ತು ಶುಧ್ದ ನೀರು ನೀಡುತ್ತಿದೆ, ೩೫೦ ಕೆಜಿ ಬೆಳ್ಳಿ ರಥವನ್ನು ನಿರ್ಮಿಸಲಾಗಿದೆ, ಭಕ್ತರ ನೆರವಿನಿಂದ ಚಿನ್ನದ ಕಿರೀಟವನ್ನು ಅಜ್ಜಯ್ಯನಿಗೆ ಧಾರಣೆ ಮಾಡಲಾಗಿದೆ. ಕರಿಬಸವೇಶ್ವರನ ಗದ್ದಿಗೆಗೆ ಮತ್ತು ಗರ್ಭಗುಡಿಗೆ ಬೆಳ್ಳಿ ಹಾಕಿಸಲಾಗಿದೆ. ಆದಿ ಯೋಗಿಯ ವಿಶ್ರಾಂತಿ ಧಾಮ ಸಿದ್ದವಿದೆ. ವಾಹನ ನಿಲ್ಲಿಸುವ ಸ್ಥಳಕ್ಕೆ ೧೫ ಎಕರೆ ಪ್ರದೇಶವನ್ನು ಕಾಯ್ದಿರಿಸಿದೆ. ಸಾರಿಗೆ ಸೌಲಭ್ಯಕ್ಕೆ ಸಾರಿಗೆ ನಿಗಮಕ್ಕೆ, ಅಗ್ನಿ ಶಾಮಕ ದಳದವರಿಗೂ, ಬಂದೋಬಸ್ತ್‌ಗಾಗಿ ಪೋಲೀಸ್ ಠಾಣೆಗೆ ಪತ್ರ ಬರೆಯಲಾಗಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಎಸ್.ಸುರೇಶ್ ಪತ್ರಿಕೆಗೆ ತಿಳಿಸಿದರು.