ಮಕ್ಕಳ ಮೇಲೆ ಅತಿ ಶಿಸ್ತು ಹೇರಿ ಒತ್ತಡ ಹಾಕದಿರಿ: ಡಾ.ವಸಂತ್‌ ಶೆಟ್ಟಿ

KannadaprabhaNewsNetwork |  
Published : Nov 19, 2026, 02:45 AM IST
ಹಾಕದಿರಿ. | Kannada Prabha

ಸಾರಾಂಶ

ಮಾಡೂರಿನ ದಕ್ಷಿಣ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ವಾರ್ಷಿಕ ಕ್ರೀಡೋತ್ಸವ

ಉಳ್ಳಾಲ: ಪೋಷಕರು ಮಕ್ಕಳ ಮೇಲೆ ಅತಿಯಾದ ಶಿಸ್ತುಗಳನ್ನ‌ ಹೇರಿ ಎಳೆಯ ಮನಸ್ಸುಗಳಿಗೆ ಒತ್ತಡ ಹಾಕದಿರಿ ಎಂದು ಪಶುಪಾಲನಾ ಇಲಾಖೆಯ ಮುಖ್ಯ ಪಶು ವೈದ್ಯಾಧಿಕಾರಿ ಡಾ.ವಸಂತ ಶೆಟ್ಟಿ ಕಿವಿ ಮಾತು ಹೇಳಿದರು.

ಮಾಡೂರಿನ ದಕ್ಷಿಣ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ವಾರ್ಷಿಕ ಕ್ರೀಡೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ದೃಷ್ಟಿಯಿಂದ ಸರ್ಕಾರಿ ಶಾಲೆಯನ್ನ ಹಂತ ಹಂತವಾಗಿ ಅಭಿವೃದ್ಧಿಗೊಳಿಸುತ್ತಿರುವ ಶಾಲಾಭಿವೃದ್ಧಿ ಸಮಿತಿಯ ಕಾರ್ಯ ಶ್ಲಾಘನೀಯವಾಗಿದ್ದು, ಎಲ್ಲರೂ ಇದಕ್ಕೆ ಬೆಂಬಲ ನೀಡಬೇಕಿದೆ ಎಂದು ಹೇಳಿದರು.

ವಿರ್ಬ್ಯಾಕ್ ಸಂಸ್ಥೆಯಿಂದ ಮಾಡೂರು ಶಾಲೆಗೆ ಪೀಠೋಪಕರಗಳನ್ನು ಹಸ್ತಾಂತರಿಸಲಾಯಿತು. ವಿದ್ಯಾರ್ಥಿಗಳ ಅನುಕೂಲತೆಗಾಗಿ ಆರಂಭಿಸಲಾದ ಪ್ರಾಮಾಣಿಕತೆಯ ಅಂಗಡಿ ಉದ್ಘಾಟಿಸಲಾಯಿತು. ಶಾಲೆಯ ಅಭಿವೃದ್ಧಿ ಕಾರ್ಯಕ್ಕೆ ಸದಾ ಶ್ರಮಿಸುತ್ತಿರುವ ಮೋಹನ್ ದಾಸ್ ಮಾಡೂರು ಅವರನ್ನು ಸನ್ಮಾನಿಸಲಾಯಿತು.

ರೋಟರಿ ಕ್ಲಬ್ ಮಂಗಳೂರು ಪೂರ್ವದ ಮಾಜಿ ಅಧ್ಯಕ್ಷ ಜಯಕುಮಾರ್ , ಪ್ರದೀಪ್ ಕುಮಾರ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಳ್ಳಾಲ ತಾಲೂಕು ಘಟಕದ ಪ್ರದಾನ ಕಾರ್ಯದರ್ಶಿ ದಿನೇಶ್ ನಾಯಕ್, ರೊಟೇರಿಯನ್ ಸದಾಶಿವ ಶೆಟ್ಟಿ, ಕೋಟೆಕಾರು ಪಟ್ಟಣ ಪಂಚಾಯತ್ ಸದಸ್ಯ ಕಿರಣ್ ಕುಮಾರ್, ಯುವವಾಹಿನಿ ಕೇಂದ್ರ ಸಮಿತಿಯ ಮಹಿಳಾ ಸಂಘಟನಾ ನಿರ್ದೇಶಕಿ ಸುಧಾ ಸುರೇಶ್, ಶಾಲಾ ಹಿತರಕ್ಷಣಾ ಸಮಿತಿಯ ಗೌರವಾಧ್ಯಕ್ಷ ಅಝೀಝ್ ಮಾಡೂರು, ಅಧ್ಯಕ್ಷ ರಶೀದ್ ಮಾಡೂರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಭಾಸ್ಕರ ಮಡ್ಯಾರ್, ಮಡ್ಯಾರ್ ಕೊರಗಜ್ಜ ಸೇವಾ ಸಮಿತಿ ಅಧ್ಯಕ್ಷ ಕೃಷ್ಣಕಾಂತ್ ಮಡ್ಯಾರ್, ರೋಟರಿ ಕ್ಲಬ್ ಜಿಲ್ಲಾ ಪ್ರತಿನಿಧಿ ಆನಂದ ಮಳಯಾಲ ಕೋಡಿ, ಸಮೂಹ ಸಂಪನ್ಮೂಲ ವ್ಯಕ್ತಿ ಸುಜಾತ ಮತ್ತಿತರರಿದ್ದರು.

ಶಾಲಾ ಮುಖ್ಯ ಶಿಕ್ಷಕಿ ಪುಷ್ಪ ಯು. ಸ್ವಾಗತಿಸಿದರು. ಸ್ಥಳೀಯ ಕೌನ್ಸಿಲರ್ ಸುಜಿತ್ ಮಾಡೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕಿಯರಾದ ಸುಪ್ರಿತಾ ನಿರೂಪಿಸಿದರು. ಜೀವಿತಾ ವಂದಿಸಿದರು.

------------------------------------

ಮುಂದಿನ ವರುಷದಿಂದ ಶಾಲೆಯಲ್ಲಿ ಪ್ರಾಚೀನ ಪರಂಪರೆಯ ಗುರುಕುಲ ಶಿಕ್ಷಣ ಆರಂಭಿಸುವ ಯೋಜನೆಯಿದೆ. ಶಾಲಾ ಮಕ್ಕಳಿಗೆ ದೈಹಿಕ ಶಿಕ್ಷಣ, ಚಿತ್ರಕಲೆ ಮತ್ತು ಸಂಗೀತ ತರಗತಿ ಕಲಿಸಲು ಶಿಕ್ಷಕರನ್ನ ನೀಡುವುದಾಗಿ ಮಂಗಳೂರು ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ಮುಖ್ಯಸ್ಥರು ಒಪ್ಪಿಕೊಂಡಿದ್ದಾರೆ.

-ಸುಜಿತ್ ಮಾಡೂರು, ಸ್ಥಳೀಯ ಕೌನ್ಸಿಲರ್.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಪಿಆರ್ ಸಿದ್ಧಪಡಿಸಲು ತ್ವರಿತ ಅನುಮೋದನೆ ನೀಡಿ
ಆರ್‌ಎಸ್‌ಎಸ್‌ ಆಕರ್ಷಕ ಪಥ ಸಂಚಲನ