ಅಣ್ಣೂರು ಡೇರಿ ಅಧ್ಯಕ್ಷರಾಗಿ ಉಮೇಶ್, ಪಾಧ್ಯಕ್ಷರಾಗಿ ರತ್ನಮ್ಮ ಆಯ್ಕೆ

KannadaprabhaNewsNetwork | Published : Mar 21, 2025 12:35 AM

ಸಾರಾಂಶ

ಹಿಂದಿನ ಅಧ್ಯಕ್ಷ ಬೊಮ್ಮಾಯಿ, ಉಪಾಧ್ಯಕ್ಷ ಬೋರಯ್ಯ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಗಳಿಗೆ ಉಮೇಶ್ ಮತ್ತು ರತ್ನಮ್ಮ ಮಾತ್ರ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಮುತ್ತುರಾಜ್ ಘೋಷಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಅಣ್ಣೂರು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಟೀ ಅಂಗಡಿ ಉಮೇಶ್, ಉಪಾಧ್ಯಕ್ಷರಾಗಿ ರತ್ನಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಹಿಂದಿನ ಅಧ್ಯಕ್ಷ ಬೊಮ್ಮಾಯಿ, ಉಪಾಧ್ಯಕ್ಷ ಬೋರಯ್ಯ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಗಳಿಗೆ ಉಮೇಶ್ ಮತ್ತು ರತ್ನಮ್ಮ ಮಾತ್ರ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಮುತ್ತುರಾಜ್ ಘೋಷಿಸಿದ್ದಾರೆ.

ಈ ವೇಳೆ ನೂತನ ಅಧ್ಯಕ್ಷ ಟೀ ಅಂಗಡಿ ಉಮೇಶ್ ಮಾತನಾಡಿ, ಅಣ್ಣೂರು ಡೇರಿಯು ಜಿಲ್ಲೆಗೆ ಮಾದರಿ ಸಂಘವಾಗಿ ಮಾರ್ಪಟಿದ್ದು, ಎಲ್ಲ ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಸಂಘದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು. ಈ ವೇಳೆ ಜಿಪಂ ಮಾಜಿ ಸದಸ್ಯ ಎ.ಎಸ್.ರಾಜೀವ್, ಸಿಇಒ ಪ್ರತಾಪ್, ಸಂಘದ ಮಾಜಿ ಅಧ್ಯಕ್ಷ ಬೋಮಯ್ಯ, ನಿರ್ದೇಶಕರಾದ ಶಂಕರ್, ಎ.ಸುನೀಲ್, ಎಸ್,ರೇವಣ್ಣ, ಆಶಾ, ಎಸ್. ಸುನೀಲ್, ಶಿವಕುಮಾರ್, ಮರಂಕೇಗೌಡ ಸೇರಿ ಮತ್ತಿತರರಿದ್ದರು.

ನಾಳೆ ತಾಲೂಕಿನ ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

ಮದ್ದೂರು:

ತಾಲೂಕಿನ ಕೆ.ಹೊನ್ನಲಗೆರೆ 66/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಲ್ಲಿ 1ನೇತ್ರೈಮಾಸಿಕ ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವುದರಿಂದ ವಿತರಣಾ ಕೇಂದ್ರ ವ್ಯಾಪ್ತಿಯ ಕೆ.ಬೆಳ್ಳೂರು, ಬ್ಯಾಡರಹಳ್ಳಿ, ತೊಪ್ಪನಹಳ್ಳಿ, ಹಳ್ಳಿಕೆರೆ, ಬಿ. ಗುಡ್ಡೆ, ಅರೆಕಲ್ಲು ದೊಡ್ಡಿ, ತೈಲೂರು ಹಾಗೂ ಕೆ.ಹೊನ್ನಲಗೆರೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಮಾ.22ರಂದು ಬೆಳಗ್ಗೆ 8 ರಿಂದ ಸಂಜೆ 2 ಗಂಟೆ ವರೆಗೆ ವಿದ್ಯುತ್ ಪೂರೈಕೆ ಸ್ಥಗಿತ ಗೊಳಿಸಲಾಗುವುದು ಎಂದು ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮೋಹನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹಾಗೇ, ತಾಲೂಕಿನ ಬೆಸಗರಹಳ್ಳಿ 66/11 ವಿದ್ಯುತ್ ವಿತರಣಾ ಕೇಂದ್ರದಲ್ಲಿ 1ನೇತ್ರೈಮಾಸಿಕ ನಿರ್ವಹಣಾ ಕಾರ್ಯ ಮ್ಮಿಕೊಂಡಿರುವುದರಿಂದ ವಿತರಣಾ ಕೇಂದ್ರ ವ್ಯಾಪ್ತಿಯ ಬೆಸಗರಹಳ್ಳಿ, ಕೋಣಸಾಲೆ, ಮರಳಿಗ, ಮಾರಸಿಂಗನಹಳ್ಳಿ, ಹೊಸಕೆರೆ, ಬೆಳತೂರು, ಚಾಪುರ ದೊಡ್ಡಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಮಾ.22 ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 2 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Share this article