ಮೊದಲ ಬಾರಿಗೆ ವಿಧಾನಸಭೆಗೆ ಪ್ರವೇಶಿಸಿದ ಉಮೇಶ

KannadaprabhaNewsNetwork |  
Published : May 05, 2026, 03:00 AM IST
ಗೆಲುವನ್ನು ಕಂಡ ಉಮೇಶ ಮೇಟಿ ಕುಟುಂಬದ ಸದಸ್ಯರ ಸಂಭ್ರಮ | Kannada Prabha

ಸಾರಾಂಶ

ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಬಿಜೆಪಿಯ ವೀರಣ್ಣ ಚರಂತಿಮಠ ಅವರನ್ನು ಭಾರಿ ಅಂತರದಿಂದ ಸೋಲಿಸುವ ಮೂಲಕ ಕಾಂಗ್ರೆಸ್‌ನ ಉಮೇಶ ಮೇಟಿ ಮೊದಲ ಬಾರಿಗೆ ವಿಧಾನಸಭೆಯ ಮೆಟ್ಟಿಲು ತುಳಿದಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಬಿಜೆಪಿಯ ವೀರಣ್ಣ ಚರಂತಿಮಠ ಅವರನ್ನು ಭಾರಿ ಅಂತರದಿಂದ ಸೋಲಿಸುವ ಮೂಲಕ ಕಾಂಗ್ರೆಸ್‌ನ ಉಮೇಶ ಮೇಟಿ ಮೊದಲ ಬಾರಿಗೆ ವಿಧಾನಸಭೆಯ ಮೆಟ್ಟಿಲು ತುಳಿದಿದ್ದಾರೆ. ನವನಗರದ ತೋಟಗಾರಿಕೆ ವಿವಿಯಲ್ಲಿ ನಡೆದ ಮತ ಎಣಿಕೆಯಲ್ಲಿ ಅಭೂತಪೂರ್ವ ಗೆಲುವು ಕಂಡ ಉಮೇಶ ಮೇಟಿ ಅವರು ಹಿರಿಯ ರಾಜಕಾರಣಿ ದಿ.ಎಚ್.ವೈ.ಮೇಟಿ ಅವರ ಪುತ್ರರಾಗಿದ್ದು, ಅನುಕಂಪದ ಅಲೆ, ಜೊತೆಗೆ ಆಡಳಿತಾರೂಢ ಸರ್ಕಾರ ಜೊತೆಯಾಗಿದ್ದರಿಂದ ಈ ಗೆಲುವು ಸಾಧ್ಯವಾಗಿದೆ.

ಸಂಭ್ರಮ- ವಿಜಯೋತ್ಸವ: ಆರಂಭಿಕ ಮುನ್ನಡೆಯೊಂದಿಗೆ ಗೆಲುವು ಕಂಡ ಉಮೇಶ ಮೇಟಿ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು, ಹಿರಿಯರು ಕುಟುಂಬದ ಸದಸ್ಯರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ನಗರ, ನವನಗರ, ವಿದ್ಯಾಗಿರಿಯಲ್ಲಿ ಕೆಲವು ಯುವಕರು ಬೈಕ್ ರ್ಯಾಲಿ ಮಾಡಿ, ಗುಲಾಲ್ ಎರಚಿ, ಪಟಾಕಿ ಸಿಡಿಸಿ ಗೆಲುವು ಹಂಚಿಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದೇಶ್ವರ ಶ್ರೀ ಮಹದಾಸೆ ಈಡೇರಿಸಿದ್ದೇವೆ
ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿಗೆ ಗೆಲುವು