ಕನ್ನಡಪ್ರಭ ವಾರ್ತೆ ಜೇವರ್ಗಿದೇಶದ ಸರ್ವಾಗೀಂಣ ಅಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೋಮ್ಮೆ ಪ್ರಧಾನಮಂತ್ರಿಯನ್ನಾಗಿ ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ಕಲಬುರಗಿ ಲೋಕಸಭಾ ಅಭ್ಯರ್ಥಿ ಡಾ.ಉಮೇಶ ಜಾದವ್ ಅವರ ಗೆಲುವಿಗಾಗಿ ನಾವೆಲ್ಲರೂ ಬದ್ಧರಾಗಿದ್ದೆವೆ ಎಂದು ಜೆಡಿಎಸ್ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಹೇಳಿದರು.
ಪ್ರಸಕ್ತ ಚುನಾವಣೆಯಲ್ಲಿ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಮೋದಿಯವರನ್ನು ಗೆಲ್ಲಿಸಬೇಕು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜೇಂದ್ರ ಅವರು ನನ್ನನ್ನು ಕರೆದಿದ್ದಾರೆ. ಇನ್ನೂ ಜಿಲ್ಲಾಧ್ಯಕ್ಷ ಯಾವ ಲೆಕ್ಕ ಎಂದು ಪರೋಕ್ಷವಾಗಿ ಶಿವರಾಜ ಪಾಟೀಲ್ ಅವರ ವಿರುದ್ಧ ಹರಿಹಾಯ್ದರು. ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಬಿಜೆಪಿ ಜೆಡಿಎಸ್ ಮೈತ್ರಿ ಧರ್ಮ ಪಾಲನೆ ಮಾಡುವ ಮೂಲಕ ಎನ್‌ಡಿಎ ಅಭ್ಯರ್ಥಿ ಗೆಲುವಿಗಾಗಿ ಜೆಡಿಎಸ್ ಕೆಲಸ ಮಾಡಲಿದೆ ಎಂದರು.
ಶಾಸಕ ಬಸವರಾಜ ಮತ್ತಿಮಡು ಹಾಗೂ ಬಿಜೆಪಿ ನಗರ ಘಟಕದ ಅಧ್ಯಕ್ಷ ಚಂದು ಪಾಟೀಲ್ ಮಾತನಾಡಿ, ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಅವರು ಮೂಲತ ಬಿಜೆಪಿಯಿಂದಲೆ ಬಂದವರಾಗಿದ್ದು, ಅಲ್ಲಾಗಿರುವ ಲೋಪ ದೋಶಗಳನ್ನು ಮುಂದಿನ ದಿನಗಳಲ್ಲಿ ಹಾಗಾಗದ ರೀತಿಯಲ್ಲಿ ನೋಡಿಕೊಂಡು ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಾಗುವುದು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಆ ನಿಟ್ಟಿನಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾದವ್ ಅವರನ್ನು ನಾವು ನಿವೆಲ್ಲರೂ ಕೂಡಿ ಅಧಿಕ ಮತಗಳಿಂದ ಗೆಲ್ಲಿಸೋಣ ಎಂದು ಹೇಳಿದರು.ಕಾರ್‍ಯಕ್ರಮದಲ್ಲಿ ವಿಪ ಸದಸ್ಯ ರಘುನಾಥ ಮಲ್ಕಾಪುರೆ, ಶಿವುಕುಮಾರ ನಾಟಿಕಾರ, ಕೃಷ್ಣಾ ರೆಡ್ಡಿ, ರಮೇಶಬಾಬು ವಕೀಲ್, ಸಿದ್ದಣ್ಣ ಹೂಗಾರ, ಪುಂಡಲಿಕ್ ಗಾಯಕವಾಡ, ಧರ್ಮಣ್ಣ ದೊಡ್ಡಮನಿ, ಮರೇಪ್ಪ ಬಡಿಗೇರ, ಗೋಲ್ಲಾಳಪ್ಪ ಕಡಿ, ರೌಫ್ ಹವಾಲ್ದಾರ್, ಬಸವರಾಜ ಮಾಲಿಪಾಟೀಲ್, ನಾನಾಗೌಡ ಅಲ್ಲಾಪುರ, ಗೋಲ್ಲಾಳಪ್ಪಗೌಡ ಮಾಗಣಗೇರಿ, ಶಿವಾನಂದ ದ್ಯಾಮಗೊಂಡ, ಶರಣಗೌಡ ಯಲಗೋಡ ಸೇರಿದಂತೆ ನೂರಾರು ಜನ ಸ್ವಾಭೀಮಾನಿ ಕಾರ‍್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.