ಕನ್ನಡಪ್ರಭ ವಾರ್ತೆ ಮಂಡ್ಯ
ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಸಾವಿತ್ರಮ್ಮ ಮತ್ತು ಉಪಾಧ್ಯಕ್ಷರಾದ ಕವಿತಾರವರ ರಾಜೀನಾಮೆಯಿಂದ ತೆರವಾಗಿದ್ದ ಎರಡು ಸ್ಥಾನಗಳಿಗೆ ಶುಕ್ರವಾರ ಚುನಾವಣೆ ನಡೆಯಿತು. 13 ಸದಸ್ಯರ ಬಲವಿರುವ ಸಂಘದಲ್ಲಿ ಸಂಘದ ಯಾರೊಬ್ಬರೂ ನಾಮಪತ್ರ ಸಲ್ಲಿಸದ ಕಾರಣ ಅಧ್ಯಕ್ಷ ಸ್ಥಾನಕ್ಕೆ ಅನುರಾಧ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಭಾಗ್ಯ ನಾಮಪತ್ರ ಸಲ್ಲಿಸಿದರು.
ಚುನಾವಣಾಧಿಕಾರಿ ರವಿ (ಸಹಕಾರ ಸಂಘಗಳ ಹಿರಿಯ ನಿರೀಕ್ಷಕರು) ರವರು ಇವರ ಆಯ್ಕೆಯನ್ನು ಅವಿರೋಧವಾಗಿ ಘೋಷಿಸಿದರು. ನೂತನ ಅಧ್ಯಕ್ಷ- ಉಪಾಧ್ಯಕ್ಷರು ತಮ್ಮೆಲ್ಲರ ಸಹಕಾರವಿದ್ದರೆ ಹೊಳಲು ಡೈರಿಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತೇನೆ ಎಂದು ಹೇಳಿದರು.ಮಾಜಿ ಶಾಸಕರಾದ ಎಚ್. ಬಿ.ರಾಮು, ರಾಜ್ಯ ಒಕ್ಕಲಿಗ ಸಂಘದ ಮಾಜಿ ಉಪಾಧ್ಯಕ್ಷ ಎಚ್.ಎಲ್.ಶಿವಣ್ಣ, ವಿಜಯ ಕುಮಾರ್, ಹರಿಪ್ರಸಾದ್, ಶಿವಣ್ಣ, ರಾಮಕೃಷ್ಣ, ಲಾಯರ್ ಮೋಹನ್ ಕುಮಾರ್, ಸೊಸೈಟಿ ಅಧ್ಯಕ್ಷ ಸಚ್ಚಿದಾನಂದ,(ಪಪ್ಪಿ),ಜಟ್ಟಿ ಕುಮಾರ್,ಆನಂದ್, ಹಾಗೂ ಕರವೇ ಜಿಲ್ಲಾಧ್ಯಕ್ಷ (ಕರವೆ ಪ್ರವೀಣ್ ಶೆಟ್ಟಿ ಬಣ) ಡಿ.ಅಶೋಕ್, ಮಹಿಳಾ ತಾಲೂಕು ಅಧ್ಯಕ್ಷ ರೇಣುಕಾ, ಕರವೇ ಉಪಾಧ್ಯಕ್ಷ ನಾಗರಾಜು, ರಾಜು ಹಾಗೂ ಸಂಘದ ಮಾಜಿ ಅಧ್ಯಕ್ಷ ಸಾವಿತ್ರಮ್ಮ ಉಪಾಧ್ಯಕ್ಷರಾದ ಕವಿತಾ, ಹಾಗೂ ಸಂಘದ ಪದಾಧಿಕಾರಿಗಳು ಮತ್ತು ಕಾರ್ಯದರ್ಶಿ ಎಚ್. ಎನ್. ಬೋರಯ್ಯ ಮತ್ತು ಸಿಬ್ಬಂದಿ ವರ್ಗದವರು ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಸನ್ಮಾನಿಸಿ ಅಭಿನಂದಿಸಿದರು.