ಅನಧಿಕೃತ ತಡೆಗೋಡೆ: ಅಧಿಕಾರಿಗಳ ತಂಡ ಪರಿಶೀಲನೆ

KannadaprabhaNewsNetwork | Published : Dec 22, 2023 1:30 AM

ಸಾರಾಂಶ

ಬನಹಟ್ಟಿಯಲ್ಲಿ ಮೂರು ದಶಕಗಳ ಹಿಂದೆ ಅನಧಿಕೃತವಾಗಿ ನಿರ್ಮಾಣ ಮಾಡಿರುವ ತಡೆಗೋಡೆ ತೆರವುಗೊಳಿಸುವಂತೆ ಆಗ್ರಹಿಸಿ ಸರ್ಕಾರ ಮಟ್ಟದಲ್ಲಿನ ಇಲಾಖೆಗಳಿಗೆ ಎಲ್ಲ ದಾಖಲೆಗಳನ್ನು ಒದಗಿಸಿ ಹೋರಾಟಕ್ಕೆ ಇಳಿದಿದ್ದ ಸಾರ್ವಜನಿಕರಿಗೆ ಸಿಹಿ ಸುದ್ದಿ ಸಿಕಿದೆ. ಗುರುವಾರ ಬೆಳಗ್ಗೆ ಭೂಮಾಪನಾ, ತಹಸೀಲ್ದಾರ್, ನಗರಸಭೆ ಹಾಗೂ ನಗರ ಯೋಜನಾ ಪ್ರಾಧಿಕಾರ ಅಧಿಕಾರಿಗಳ ನೇತೃತ್ವದಲ್ಲಿ ಭೂ ಅಳತೆಯೊಂದಿಗೆ ಗಡಿ ಗುರುತಿಸುವ ಕಾರ್ಯ ನಡೆಯಿತು.

ಕನ್ನಡಪ್ರಭ ವಾರ್ತೆ,ರಬಕವಿ-ಬನಹಟ್ಟಿ

ಮೂರು ದಶಕಗಳ ಹಿಂದೆ ಅನಧಿಕೃತವಾಗಿ ನಿರ್ಮಾಣ ಮಾಡಿರುವ ತಡೆಗೋಡೆ ತೆರವುಗೊಳಿಸುವಂತೆ ಆಗ್ರಹಿಸಿ ಸರ್ಕಾರ ಮಟ್ಟದಲ್ಲಿನ ಇಲಾಖೆಗಳಿಗೆ ಎಲ್ಲ ದಾಖಲೆಗಳನ್ನು ಒದಗಿಸಿ ಹೋರಾಟಕ್ಕೆ ಇಳಿದಿದ್ದ ಸಾರ್ವಜನಿಕರಿಗೆ ಸಿಹಿ ಸುದ್ದಿ ಸಿಕಿದೆ. ಗುರುವಾರ ಬೆಳಗ್ಗೆ ಭೂಮಾಪನಾ, ತಹಸೀಲ್ದಾರ್, ನಗರಸಭೆ ಹಾಗೂ ನಗರ ಯೋಜನಾ ಪ್ರಾಧಿಕಾರ ಅಧಿಕಾರಿಗಳ ನೇತೃತ್ವದಲ್ಲಿ ಭೂ ಅಳತೆಯೊಂದಿಗೆ ಗಡಿ ಗುರುತಿಸುವ ಕಾರ್ಯ ನಡೆಯಿತು.

ಬನಹಟ್ಟಿಯ ಲಕ್ಷ್ಮೀನಗರಕ್ಕೆ ತೆರಳುವ ರಸ್ತೆ ಸುಮಾರು 12 ಮೀ.ನಷ್ಟಿದ್ದು, ಈ ಪ್ರದೇಶಕ್ಕೆ ಅನುಗುಣವಾಗಿ ಕೇವಲ 7-8 ಕುಟುಂಬಗಳ ಅಕ್ರಮ ಪ್ರದೇಶವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದೆ. ಇನ್ನುಳಿದ ಪ್ರದೇಶವನ್ನೂ ಕಬಳಿಕೆ ಮಾಡಿಕೊಂಡಿರುವುದನ್ನು ಭೂಮಾಪನಾ ಇಲಾಖೆ ಅಧಿಕಾರಿಗಳು ದಾಖಲೆ ಸಮೇತ ಅಳತೆ ಮಾಡಿದ್ದಾರೆ.

ಬಹುದೊಡ್ಡ ನಿರ್ಧಾರ : ಲಕ್ಷ್ಮೀನಗರ ಬಡಾವಣೆಯ ಸಂಚಾರ ರಸ್ತೆಯನ್ನು ಸರ್ಕಾರಿ ಕಚೇರಿಗಳು ಸೇರಿದಂತೆ ಕೆಲ ಖಾಸಗಿಯವರು ಅತಿಕ್ರಮಣ ಮಾಡಿಕೊಂಡಿದ್ದಾರೆ. ಇವೆಲ್ಲದರ ಕುರಿತು ನಾಲ್ಕೈದು ವರ್ಷಗಳಿಂದ ಕಂದಾಯ ಇಲಾಖೆ ಮಟ್ಟದಲ್ಲಿ ಪರಿಶೀಲನೆ ನಡೆದಿದ್ದು, ಕೊನೆಗೂ ಭೂಮಾಪನಾ ಇಲಾಖೆ, ನಗರಸಭೆ, ನಗರ ಯೋಜನಾ ಪ್ರಾಧಿಕಾರ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಜಾಗ ಪರಿಶೀಲನೆ ಮಾಡಿ ಕಂದಾಯ ಇಲಾಖೆಗೆ ವರದಿ ನೀಡಿದೆ.

ಜಾಗದಿದೆ, ರಸ್ತೆಯಿಲ್ಲ : ಸರ್ವೇ ಮಾಡಿದ ಪ್ರಕಾರ ಭೂಮಾಪನಾ ಇಲಾಖೆಗೆ ಸಂಬಂಧಿಸಿದಷ್ಟು ಖಾಸಗಿ ಜಾಗ ಸಂಪೂರ್ಣವಾಗಿ ಕ್ರಮಬದ್ಧವಾಗಿದ್ದು, ನಗರ ಯೋಜನಾ ಪ್ರಾಧಿಕಾರಕ್ಕೆ ಸಂಬಂಧಪಟ್ಟಂತೆ 12 ಮೀಟರ್‌ನಷ್ಟು ರಸ್ತೆ ಈ ಪ್ರದೇಶದಲ್ಲಿಲ್ಲ. ಈ ಕುರಿತು ಸ್ಪಷ್ಟ ಮಾಹಿತಿ ಸಂಬಂಧಪಟ್ಟ ಇಲಾಖೆಗೆ ಒದಗಿಸಲಾಗುವುದೆಂದು ಭೂಮಾಪನಾ ಸಹಾಯಕ ನಿರ್ದೇಶಕ ಏಕನಾಥ ಮುಂಡಾಸ ತಿಳಿಸಿದರು.

---

`ಖಾಸಗಿ ಲೇಔಟ್‌ಗೆ ಸಂಬಂಧಿಸಿದ ಜಾಗ ಇದೆ. ನಗರ ಯೋಜನಾ ಪ್ರಾಧಿಕಾರದಿಂದ 12 ಮೀಟರ್‌ನಷ್ಟು ರಸ್ತೆ ಗುರುತು ಈ ಪ್ರದೇಶದಲ್ಲಿಲ್ಲ. ಇದಕ್ಕೆ ಸಂಬಂಧಿಸಿದ ವರದಿಯನ್ನು ತಹಸೀಲ್ದಾರ್ ಕಚೇರಿಗೆ ಒಗಿಸಲಾಗುವುದು.

ಏಕನಾಥ ಮುಂಡಾಸ, ಸಹಾಯಕ ನಿರ್ದೇಶಕ

Share this article