ಫೋಟೋ-26ಎಂವೈಎಸ್ 51-----------ಕನ್ನಡಪ್ರಭ ವಾರ್ತೆ ನಂಜನಗೂಡುನಮ್ಮ ಕಾಂಗ್ರೆಸ್ ಸರ್ಕಾರ ಬಡವರ ಕಾಳಜಿಯಿಂದಾಗಿ ರೆವಿನ್ಯೂ ಬಡಾವಣೆಗಳಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡಿರುವ ಮನೆಗಳನ್ನು ಸಕ್ರಮಗೊಳಿಸುವ ಸಲುವಾಗಿ ಬಿ. ಖಾತೆ ನೀಡಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.ನಗರಸಭಾ ಕಚೇರಿಯ ಆವರಣದಲ್ಲಿ ಬಿ ಖಾತೆ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.ನಗರಸಭೆಯಲ್ಲಿ ಖಾತೆಗಳು ಆಗುತ್ತಿಲ್ಲ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿ ಬಂದಿತ್ತು. ಅಲ್ಲದೆ ಅಕ್ರಮ ಬಡಾವಣೆಗಳು ನಿರ್ಮಾಣಗೊಳ್ಳುತ್ತವೆ ಎಂಬ ಉದ್ದೇಶದಿಂದ ಅಕ್ರಮ -ಸಕ್ರಮ ಯೋಜನೆ ಸುಪ್ರೀಂ ಕೋರ್ಟ್ ನಲ್ಲಿ ಇರುವ ಕಾರಣ, ರೆವಿನ್ಯೂ ಬಡಾವಣೆಗಳಲ್ಲಿ ಮನೆ ನಿರ್ಮಿಸಿಕೊಂಡಿರುವ ಬಡವರು ಸಾಲ ಸೌಲಭ್ಯ ಸೇರಿದಂತೆ ಹಲವಾರು ಸವಲತ್ತುಗಳನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ, ಇದರಿಂದ ನಾನು ವಿಧಾನಸಭಾ ಕಲಾಪದ ಗಮನ ಸೆಳೆಯುವ ಸೂಚನೆ ವೇಳೆ ಪ್ರಶ್ನಾವಳಿಯನ್ನು ಮಂಡಿಸಿದ್ದೆ, ಅದರ ಪ್ರತಿಫಲವಾಗಿ, ಸಚಿವರಾದ ಈಶ್ವರ್ ಖಂಡ್ರೆ ರವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿ ಸಾಧಕ ಬಾಧಕಗಳನ್ನು ಚರ್ಚಿಸಿ ಸರ್ಕಾರ ಅಂತಿಮವಾಗಿ ಕಾಯ್ದೆಯನ್ನು ರೂಪಿಸಿ ರೆವಿನ್ಯೂ ಬಡಾವಣೆಗಳಲ್ಲಿ ಮನೆ ನಿರ್ಮಿಸಿಕೊಂಡಿರುವವರಿಗೆ ಅಕ್ರಮ ಸಕ್ರಮ ಯೋಜನೆ ಅಡಿ ಬಿ ಖಾತೆ ನೀಡಲಾಗುತ್ತಿದೆ ಎಂದರು.ನಗರಸಭಾ ವ್ಯಾಪ್ತಿಯಲ್ಲಿ ಸುಮಾರು ಏಳು ಸಾವಿರ ಅನಧಿಕೃತ ಆಸ್ತಿಗಳಿರುವ ಬಗ್ಗೆ ಮಾಹಿತಿ ಇದೆ, ಅವುಗಳಲ್ಲಿ ಈಗಾಗಲೇ ಸುಮಾರು ಒಂದು ಸಾವಿರ ಅರ್ಜಿಗಳು ಸಲ್ಲಿಕೆಯಾಗಿದೆ, ಮೈಸೂರು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಮೇ ತಿಂಗಳಲ್ಲಿ ಬಿ ಖಾತೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ಅನಧಿಕೃತ ಆಸ್ತಿಯ ಮಾಲೀಕರು ಈ ಯೋಜನೆಯ ಸದುಪಯೋಗವನ್ನು ಪಡೆದುಕೊಂಡು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ನಿಮ್ಮ ಆಸ್ತಿಗಳನ್ನು ಸಕ್ರಮಗೊಳಿಸಿಕೊಳ್ಳಬೇಕು ಎಂದರು.ನಗರಸಭಾ ಅಧ್ಯಕ್ಷ ಶ್ರೀಕಂಠಸ್ವಾಮಿ ಮಾತನಾಡಿದರು. ನಗರಸಭಾ ಆಯುಕ್ತ ವಿಜಯ್, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ನಗರಸಭಾ ಉಪಾಧ್ಯಕ್ಷೆ ರಿಯಾನಾಭಾನು, ನಗರಸಭಾ ಸದಸ್ಯರಾದ ಎಸ್. ಪಿ. ಮಹೇಶ್, ಗಂಗಾಧರ್, ಮೀನಾಕ್ಷಿ ನಾಗರಾಜು, ಸಿದ್ದಿಖ್, ಮಹದೇವ ಪ್ರಸಾದ್, ಗಾಯತ್ರಿ, ಎನ್.ಎಸ್. ಯೋಗೀಶ್, ಕೆ.ಎಂ. ಬಸವರಾಜು, ರಮೇಶ್, ರವಿ, ಶ್ವೇತಲಕ್ಷ್ಮಿ, ನಗರಸಭಾ ಅಧಿಕಾರಿಗಳಾದ ಮಹೇಶ್, ಪ್ರೀತಮ್ ಇದ್ದರು.