ಕೊಣ್ಣೂರು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಎಲ್‌ಕೆಜಿ, ಯುಕೆಜಿ ಪ್ರಾರಂಭೋತ್ಸವವನ್ನು ಮಕ್ಕಳಿಗೆ ಸ್ಕೂಲ್ ಬ್ಯಾಗ್ ನೀಡುವ ಮೂಲಕ ಚಾಲನೆ ನೀಡಲಾಗಿದೆ.

ನರಗುಂದ: ಗ್ರಾಮೀಣ ಭಾಗದ ಮಕ್ಕಳಿಗೆ ಶಿಶುವಿಹಾರ ಬಹಳ ಉಪಯುಕ್ತ. ಶಿಸ್ತುಬದ್ಧ ಶಿಕ್ಷಣಕ್ಕೆ ಅಂಗನವಾಡಿಗೆ ಮಕ್ಕಳನ್ನು ಸೆಳೆಯಲು ಶಿಶುವಿಹಾರ ಪ್ರಾರಂಭವಾಗುತ್ತಿರುವುದು ಅನುಕೂಲ ಎಂದು ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಪರಿಮಳಾ ಹೂಗಾರ ತಿಳಿಸಿದರು.

ತಾಲೂಕಿನ ಕೊಣ್ಣೂರು ಗ್ರಾಮದ ಅಂಗನವಾಡಿಯಲ್ಲಿ ಸರ್ಕಾರಿ ಶಿಶುವಿಹಾರ ಉದ್ಘಾಟಿಸಿ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ವತಿಯಿಂದ ತಾಲೂಕಿನಾದ್ಯಂತ ಆರಂಭಿಕವಾಗಿ 10 ಅಂಗನವಾಡಿ ಕೇಂದ್ರಗಳನ್ನು ಶಿಶುವಿಹಾರ ಸರ್ಕಾರಿ(ಸರ್ಕಾರಿ ಮಾಂಟೆಸ್ಸರಿ ಮೈಸೂರು ಅಪೋಲೋ ಆಸ್ಪತ್ರೆಯ ಸ್ಕೂಲ್)ಗಳನ್ನಾಗಿ ಆಯ್ಕೆ ಮಾಡಲಾಗಿದೆ. ಕೊಣ್ಣೂರು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಎಲ್‌ಕೆಜಿ, ಯುಕೆಜಿ ಪ್ರಾರಂಭೋತ್ಸವವನ್ನು ಮಕ್ಕಳಿಗೆ ಸ್ಕೂಲ್ ಬ್ಯಾಗ್ ನೀಡುವ ಮೂಲಕ ಚಾಲನೆ ನೀಡಲಾಗಿದೆ. 3ರಿಂದ 4 ವರ್ಷ ಹಾಗೂ 4ರಿಂದ 5 ವರ್ಷದ ಮಕ್ಕಳ ಶಿಕ್ಷಣ ವ್ಯವಸ್ಥೆ ಸರ್ಕಾರದ ವತಿಯಿಂದ ಎಂ.ಎಂ. ಗವರ್ನಮೆಂಟ್ ಮಾಂಟೆಸ್ಸರಿ ಆರಂಭಿಸಿದ್ದು, ಸಾರ್ವಜನಿಕರು ಮಕ್ಕಳನ್ನು ಶಿಶುವಿಹಾರಕ್ಕೆ ದಾಖಲಿಸಬೇಕು ಎಂದು ಮನವಿ ಮಾಡಿದರು.ಸ್ಕೂಲ್ ಬ್ಯಾಗ್ ಕಾಣಿಕೆ: ಗ್ರಾಪಂ ವತಿಯಿಂದ ಅಂಗನವಾಡಿ ಮಕ್ಕಳಗೆ ವಾಟರ್ ಬಾಟಲ್, ಕುರ್ಚಿ ಹಾಗೂ ಆಟಿಕೆ ಸಾಮಾನುಗಳನ್ನು ಕಾಣಿಕೆ ನೀಡಿದರು. ಡಾ. ಕವಿತಾ ಪ್ರಕಾಶ ಪಲ್ಲೇದ ಅವರು ಮಕ್ಕಳಿಗೆ ಸಮವಸ್ತ್ರ ನೀಡಿದ್ದಾರೆ. ಮಲ್ಲಪ್ಪ ಕುಂಬಾರ, ಎನ್.ಎಸ್. ಪಾಟೀಲ, ಯಲಿಗಾರ, ಎಸ್.ಜಿ. ವಡ್ಡರ, ಎ.ಬಿ. ಕುರಹಟ್ಟಿ, ಸಿ.ಎಂ. ಮುಲ್ಲಾನವರ, ಆರ್.ಎಫ್. ಖ್ಯಾಡದ, ಕೆ.ಬಿ. ಹೊರಕೇರಿ, ಕೆ.ಎಲ್. ದೊಡ್ಡಮನಿ, ಭೀಮಪ್ಪ ಮರ್ಚಪ್ಪನವರ, ಎಂ. ಬುರಡಿ, ಗಿರಿಜಾ ಮಾಚಕನೂರ, ಶಾರದಾ ರೋಣದ, ಎಲ್‌ಕೆಜಿ, ಯುಕೆಜಿ ಮಕ್ಕಳ ಪಾಲಕರು ಇದ್ದರು.